ನವದೆಹಲಿ: ಇತರ ರಾಜ್ಯಗಳಲ್ಲಿ ತಮಿಳು ಭಾಷೆಯನ್ನು ಐಚ್ಚಿಕ ಭಾಷೆಯಾಗಿ ಸೇರಿಸುವ ವಿಚಾರವಾಗಿ ಸ್ಪಷ್ಟ ನಿಲುವು ತಾಳಿರುವ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಈಗ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇತರ ರಾಜ್ಯಗಳಲ್ಲಿ ಹಿಂದಿ ಭಾಷೆಯ ಹಾಗೆ ತಮಿಳನ್ನು ಸಹಿತ ಐಚ್ಚಿಕ ಭಾಷೆಯನ್ನಾಗಿ ಕಲಿಸಬೇಕೆಂದು ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಕುರಿತಾಗಿ ಮತ್ತೆ ಪ್ರತಿಕ್ರಿಯಿಸಿರುವ ಅವರು " ನನ್ನ ಮನವಿಯಲ್ಲಿ ತಪ್ಪೇನಿದೆ? ಇತರ ರಾಜ್ಯಗಳಲ್ಲಿ ತಮಿಳು ಕಲಿಯಬೇಕೆನ್ನುವ ತಮಿಳರ ಬೇಡಿಕೆಗೆ ಸ್ಪಂಧಿಸಿದ್ದೇನೆ" ಎಂದು ಹೇಳಿದ್ದಾರೆ.


ಪ್ರತಿಪಕ್ಷಗಳು ಕೇವಲ ಭಾಷೆಯ ವಿಚಾರವಾಗಿ ಗದ್ದಲವನ್ನು ಸೃಷ್ಟಿಸಿವೆ. ಇತರ ರಾಜ್ಯಗಳಲ್ಲಿ ವಾಸಿಸುತ್ತಿರುವ ಇತರ ತಮಿಳು ಜನರ ಕ್ಷೇಮಕ್ಕಾಗಿ ಕಾರ್ಯ ನಿರ್ವಹಿಸುವುದು ಇಷ್ಟವಿಲ್ಲ ಎಂದು ಹೇಳಿದರು. " ನಾನ್ಯಾವಾಗ ತ್ರಿಭಾಷಾ ಶಿಕ್ಷಣ ಪದ್ಧತಿಗೆ ಬೆಂಬಲ ನೀಡಿದ್ದೇನೆ ಹೇಳಿ. ಮಾಧ್ಯಮದವರು ಹಾಗೂ ಪ್ರತಿಪಕ್ಷದವರು ನನ್ನ ಟ್ವೀಟ್ ನ್ನು ರಾಜಕೀಯಗೊಳಿಸಿವೆ" ಎಂದು ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಪಳನಿ ಸ್ವಾಮಿ ಹೇಳಿದ್ದಾರೆ.


ದೆಹಲಿ, ಮುಂಬೈ, ಆಂಧ್ರಪ್ರದೇಶ, ಕೇರಳಾ, ಕರ್ನಾಟಕದಲ್ಲಿ ವಾಸಿಸುತ್ತಿರುವ ತಮಿಳರಿಗೆ ತಮ್ಮ ಮಾತೃ ಭಾಷೆಯನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ತಮಿಳುನಾಡು ಹೊರತು ಪಡಿಸಿ ಇತರ ರಾಜ್ಯಗಳಲ್ಲಿಯೂ ಕೂಡ ತಮಿಳನ್ನು ಐಚ್ಚಿಕ ಭಾಷೆಯಾಗಿ ಕಲಿಸಲು ಮುಖ್ಯಮಂತ್ರಿ ಪಳನಿ ಸ್ವಾಮಿ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದರು.