ನವದೆಹಲಿ: ಇತ್ತೀಚೆಗೆ ಹಲವಾರು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನುಸರ್ಕಾರ  ಕಡಿಮೆ ಮಾಡಿದೆ ಮತ್ತು ಇದರ ಪರಿಣಾಮವಾಗಿ ಗ್ರಾಹಕರು ಪಿಪಿಎಫ್‌ನಂತಹ ಹೂಡಿಕೆ ಆಯ್ಕೆಗಳಲ್ಲಿಯೂ ಕೂಡ ಕಡಿಮೆ ಬಡ್ಡಿ ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹೂಡಿಕೆದಾರರು ಈಗ ಪರ್ಯಾಯ ಮಾರ್ಗಗಳನ್ನು ಅನುಸರಿಸಲೇ ಬೇಕಾಗುತ್ತದೆ ಮತ್ತು ಇಂತಹುದೇ ಓಂದು ಆಯ್ಕೆ ಎಂದರೆ ಅದು ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ (ಸಮಯ ಠೇವಣಿ) ಯೋಜನೆ ಸೇರಿದೆ.


COMMERCIAL BREAK
SCROLL TO CONTINUE READING

ಏನಿದು ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆ
ಪೋಸ್ಟ್ ಆಫೀಸ್ ಸಮಯ ಠೇವಣಿ ಯೋಜನೆಯಡಿ, ನೀವು 1 ರಿಂದ 5 ವರ್ಷಗಳವರೆಗೆ ಹಣ ಹೂಡಿಕೆ ಮಾಡಬಹುದು ಮತ್ತು ಇದರಲ್ಲಿ ನೀವು ಕೇವಲ 1000 ರೂ.ಗಳೊಂದಿಗೆ ನಿಮ್ಮ ಖಾತೆಯನ್ನು ತೆರೆಯಬಹುದು. ಈ ಯೋಜನೆಯ ಅಡಿ ತ್ರೈಮಾಸಿಕ ಅವಧಿಯ ಮೇಲೆ ಲೆಕ್ಕ ಹಾಕಲಾಗುವ ಬಡ್ಡಿಯನ್ನು ವಾರ್ಷಿಕವಾಗಿ ಪಾವತಿಸಲಾಗುತ್ತದೆ.


ಹೂಡಿಕೆಯ ಮೇಲೆ ತೆರಿಗೆ ವಿನಾಯ್ತಿ ಅನ್ವಯ
ಈ ಯೋಜನೆ ಅಡಿ ಸಿಗುವ ಬಡ್ಡಿದರ ಟ್ಯಾಕ್ಸ್ ವಿಧಿಸಲಾಗುತ್ತದೆ. ಆದರೆ, ಈ ಯೋಜನೆಯಲ್ಲಿ ನೀವು ಮಾಡುವ ಹೂಡಿಕೆ ಮಾತ್ರ ಟ್ಯಾಕ್ಸ್ ಫ್ರೀ ಆಗಿರುತ್ತದೆ. ಈ ಯೋಜನೆ ಅಡಿ ಹೂಡಿಕೆ ಮಾಡುವವರ ವಾರ್ಷಿಕ ಆದಾಯದಲ್ಲಿ ಈ ಬಡ್ಡಿ ಸೇರ್ಪಡೆಯಾಗುತ್ತದೆ.


ಯಾವ ನಿಯಮದ ಅಡಿ ಈ ತೆರಿಗೆ ವಿನಾಯ್ತಿ ಲಾಭ ಸಿಗುತ್ತದೆ?
ಇಂಡಿಯಾ ಪೋಸ್ಟ್‌ನ ವೆಬ್‌ಸೈಟ್‌ನ ಪ್ರಕಾರ, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80 ಸಿ ಅಡಿಯಲ್ಲಿ, ನೀವು 5 ವರ್ಷಗಳ ಅವಧಿಯಲ್ಲಿ ಮಾಡುವ ಒಟ್ಟು ಠೇವಣಿಗೆ ತೆರಿಗೆ ವಿನಾಯ್ತಿ ಲಾಭವನ್ನು ಪಡೆಯಬಹುದಾಗಿದೆ.


ನೆನಪಿನಲ್ಲಿ ಇಡಬೇಕಾದ ಸಂಗತಿಗಳು


  • ಇಂಡಿಯಾ ಪೋಸ್ಟ್ ಪೋಸ್ಟ್ ಆಫೀಸ್ ಸಮಯ ಠೇವಣಿ ಖಾತೆಗಳಿಗೆ ಒಂದು ವರ್ಷದಿಂದ 3 ವರ್ಷಗಳವರೆಗೆ 5.5% ಬಡ್ಡಿ ಸಿಗುತ್ತದೆ ಮತ್ತು 5 ವರ್ಷಗಳ ಅವಧಿಯ ಠೇವಣಿಗೆ 6.7% ದರದಲ್ಲಿ ಬಡ್ಡಿ ಲಭಿಸುತ್ತದೆ.

  • ಈ ಖಾತೆಯಲ್ಲಿ ಮಿನಿಮಮ್ ರೂ.1000 ಠೇವಣಿ ಮಾಡಬಹುದು. ಆದರೆ, ಇದರಲ್ಲಿನ ಗರಿಷ್ಟ ಮಿತಿಗೆ ಯಾವುದೇ ನಿಬಂಧನೆಗಳಿಲ್ಲ.

  • ಅಪ್ರಾಪ್ತರ ಹೆಸರಿನಲ್ಲಿಯೂ ಕೂಡ ನೀವು ಈ ಖಾತೆಯನ್ನು ತೆರೆಯಬಹುದಾಗಿದೆ. ಹಾಗೂ ಇದರಲ್ಲಿ ಜಂಟಿ ಖಾತೆ ತೆರೆಯುವ ಅವಕಾಶ ಕೂಡ ಇದೆ.

  • ಚೆಕ್ ಅಥವಾ ಕ್ಯಾಶ್ ಮೂಲಕ ಈ ಖಾತೆಯನ್ನು ನೀವು ತೆರೆಯಬಹುದಾಗಿದೆ. ಆದರೆ, ಚೆಕ್ ಹಣ ಖಾತೆಗೆ ಬಂದು ಜಮೆ ಆದ ಬಳಿಕ ಮತ್ತು ಆ ದಿನಾಂಕವನ್ನು ಖಾತೆ ತೆರೆದ ದಿನಾಂಕ ಎಂದು ಪರಿಗಣಿಸಲಾಗುತ್ತದೆ.


ಒಂದು ವೇಳೆ ನೀವು ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆಯಡಿ 5 ವರ್ಷಗಳ ಕಾಲಕ್ಕೆ 5 ಲಕ್ಷ ರೂ.ಹಣ ಠೇವಣಿ ಮಾಡಿದರೆ, ಶೇ.6.7 ಬಡ್ಡಿದರದಲ್ಲಿ ಐದು ವರ್ಷಗಳ ಬಳಿಕ ನಿಮಗೆ 6 ಲಕ್ಷ 97 ಸಾವಿರ 33 ರೂ. ಅಂದರೆ ಐದು ವರ್ಷಗಳ ಬಳಿಕ ನಿಮ್ಮ ಹೂಡಿಕೆಯ ಹಣದಲ್ಲಿ ಸುಮಾರು 2 ಲಕ್ಷ ರೂ. ವೃದ್ಧಿಯಾಗಲಿದೆ.


ನಿಮ್ಮ ಹಣ ಡಬಲ್ ಆಗಲು ಎಷ್ಟು ಕಾಲಾವಕಾಶ ಬೇಕು?
ಇದೇ ರೀತಿ ಒಂದುವೇಳೆ ನೀವು ಐದು ಲಕ್ಷ ರೂ.ಗಳನ್ನು ಶೇ.6.7ರ ಬಡ್ಡಿದರದಲ್ಲಿ 10 ವರ್ಷ 7 ತಿಂಗಳ ಅವಧಿಗಾಗಿ ಹೂಡಿಕೆ ಮಾಡಿದರೆ ಅಂದರೆ, 127 ತಿಂಗಳಲ್ಲಿ ನಿಮ್ಮ ಹಣ ಡಬಲ್ ಆಗಲಿದೆ.