Video : ಸಾಂಬಾರ್ ನಲ್ಲಿ ಎಣ್ಣೆ ಹೆಚ್ಚಾದರೆ ಐಸ್ ಮೂಲಕ ಈ ರೀತಿಯೂ ತೆಗೆಯಬಹುದು
ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಸಾಂಬಾರ್ ನಲ್ಲಿ ಹೆಚ್ಚಾಗಿ ಬಿದ್ದಿರುವ ಎಣ್ಣೆಯನ್ನು ಐಸ್ ಬಳಸಿ ಹೊರ ತೆಗೆಯುವುದನ್ನು ಇಲ್ಲಿ ತೋರಿಸಲಾಗಿದೆ.
ನವದೆಹಲಿ : ನಾವು ಹೋಟೆಲ್‌ಗೆ ಹೋದಾಗ, ಅಲ್ಲಿ ಆಹಾರವನ್ನು ಆರ್ಡರ್ ಮಾಡುತ್ತೇವೆ. ಅಲ್ಲಿ ಪಲ್ಯ ಅಥವಾ ಸಾಂಬಾರ್ ನಲ್ಲಿ ಎಣ್ಣೆ ಹೆಚ್ಚಾಗಿದ್ದರೆ ಅದನ್ನು ತಿನ್ನದೇ ಹಾಗೆ ಬಿಡುತ್ತೇವೆ. ಹೆಚ್ಚೆಂದರೆ ಹೋಟೆಲ್ ನವರಿಗೆ ಒಂದಷ್ಟು ಬೈದು ಬಂದು ಬಿಡುತ್ತೇವೆ. ಆದರೆ ಇದೇ ರೀತಿ ಕೆಲವೊಮ್ಮೆ ಮನೆಯಲ್ಲೂ ಆಗುತ್ತದೆ. ಆಹಾರದಲ್ಲಿ ಎಣ್ಣೆ (Extra oil from vegetable) ಹೆಚ್ಚಾಗಿರುತ್ತದೆ. ಆದರೆ ಅಷ್ಟೂ ಆಹಾರವನ್ನು ಎಸ್ಯುವುದು ಸ್ವಲ್ಪ ಕಷ್ಟ. ಆದರೆ ಈ ಆಹಾರದಲ್ಲಿ ಹೆಚ್ಚಾಗಿರುವ ಎಣ್ಣೆಯನ್ನೇ ತೆಗೆದು ಹೊರ ಹಾಕುವ ಮಾರ್ಗವಿದ್ದರೆ? ಹೌದು, ಇಲ್ಲಿ ಹೇಳಿರುವ ಈ ಟ್ರಿಕ್ (Trick to remove extra oil) ಮೂಲಕ, ಆಹಾರದಲ್ಲಿ ಹೆಚ್ಚಾಗ್ರುವ ಎಣ್ಣೆಯನ್ನು ಸುಲಭವಾಗಿ ತೆಗೆದು ಹಾಕಬಹುದು.
ಹೆಚ್ಚಾಗಿರುವ ಎಣ್ಣೆಯನ್ನು ಆಹಾರದಿಂದ ತೆಗೆಯಲು ಹೊಸ ವಿಧಾನ :
ಸಾಮಾಜಿಕ ಜಾಲತಾಣದಲ್ಲಿ (Social media) ಒಂದು ವಿಡಿಯೋ ವೈರಲ್ (Viral video) ಆಗುತ್ತಿದೆ. ಸಾಂಬಾರ್ ನಲ್ಲಿ ಹೆಚ್ಚಾಗಿ ಬಿದ್ದಿರುವ ಎಣ್ಣೆಯನ್ನು ಐಸ್ ಬಳಸಿ ಹೊರ ತೆಗೆಯುವುದನ್ನು ಇಲ್ಲಿ ತೋರಿಸಲಾಗಿದೆ. ಒಬ್ಬ ವ್ಯಕ್ತಿಯು ಒಂದು ದೊಡ್ಡ ತಟ್ಟೆಯಲ್ಲಿ ಇರಿಸಲಾಗಿರುವ ಸಾಂಬಾರ್ ನಿಂದ ಎಣ್ಣೆಯನ್ನು ತೆಗೆಯಲು (how to remove excess oil from food) ಒಂದು ದೊಡ್ಡ ಮಂಜುಗಡ್ಡೆಯನ್ನು ಬಳಸಿದ್ದಾರೆ. ಆ ಐಸ್ ಅನ್ನು ಸಾಂಬಾರ್ ನಲ್ಲಿ ಅದ್ದುವ ಮೂಲಕ ಎಣ್ಣೆಯನ್ನು ಹೊರ ತೆಗೆಯುತ್ತಾರೆ. ಐಸ್ ಅನ್ನು ಬಿಸಿ ಸಾಂಬಾರ್ (Sambar) ಒಳಗೆ ಹಾಕಿದ ಕೂಡಲೇ ಸಾಂಬಾರ್ ನಲ್ಲಿರುವ ಎಣ್ಣೆ ಹೆಪ್ಪುಗಟ್ಟಿ ಬಿಡುತ್ತಿದೆ. ಹೀಗೆ ಹೆಚ್ಚಾಗಿರುವ ಎಣ್ಣೆಯನ್ನು ಸುಲಭವಾಗಿ ಸಾಂಬಾರ್ ನಿಂದ ಬೇರ್ಪಡಿಸಿ ಬಿಡುತ್ತಾರೆ.
Viral Video: ನೀರಿನಲ್ಲಿ ಅದ್ಭುತವಾಗಿ ಈಜಿ ನೋಡುಗರ ಹುಬ್ಬೇರಿಸಿದ ಮೊಲ..!
ಎಲ್ಲರ ಮನ ಗೆದ್ದ ಟ್ರಿಕ್ :
ಕೊಬ್ಬು (Fat) ಮತ್ತು ಎಣ್ಣೆಯುಕ್ತ ವಸ್ತುಗಳನ್ನು ತಪ್ಪಿಸಲು ಈ ವಿಧಾನವು ಸೂಕ್ತವಾಗಿದೆ. ಟೈಮ್ ಆಫ್ ನಾಲೆಜ್ ಹೆಸರಿನ ಟ್ವಿಟರ್ (Twitter) ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಲ್ಲದೆ, ಈ ಟ್ರಿಕ್ ಬಗ್ಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ