ಆಧಾರ್ ಗೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆ ಎಂದು ಮರೆತಿದ್ದೀರಾ ? ಇಲ್ಲಿದೆ ಕಂಡು ಕೊಳ್ಳುವ ರೀತಿ..
ಆಧಾರ್ ಗೆ ಯಾವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿದೆ ಎನ್ನುವುದನ್ನು ಕಂಡು ಹಿಡಿಯುವುದು ಕೂಡಾ ಬಹಳ ಸುಲಭ. ನೀವು ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಅಥವಾ ನಿಮ್ಮ ಯಾವ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆ ಎನ್ನುವುದನ್ನು ಮರೆತಿದ್ದರೆ, ಆನ್ ಲೈನ್ ನಲ್ಲಿಯೇ ಅದನ್ನು ಕಂಡು ಹಿಡಿಯಬಹುದು.
ದೆಹಲಿ : ಈಗ ಯಾವುದೇ ಸರ್ಕಾರಿ ಕೆಲಸ ಆಗಬೇಕಾದರೆ ಆಧಾರ್ ಕಾರ್ಡ್ (Aadhaar) ಅನ್ನು ಪ್ರಮುಖ ದಾಖಲೆ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು (Mobile link) ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿದ್ದರೆ, ಮಾತ್ರ ನೀವು ಅನೇಕ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ಕುಳಿತ ಜಾಗದಿಂದಲೇ ಕೆಲವೊಂದು ದಾಖಲೆಗಳನ್ನು ಕೂಡಾ ಅಪ್ ಡೆಟ್ ಮಾಡುವುದು ಸಾಧ್ಯವಾಗುತ್ತದೆ. ಆದರೆ ಆಧಾರ್ ಕಾರ್ಡ್‌ಗೆ ಯಾವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ಮರೆತಾಗ ಮಾತ್ರ ಪೇಚಿಗೆ ಸಿಲುಕಬೇಕಾಗುತ್ತದೆ.
ಆದರೆ ಈಗ ಆಧಾರ್ ಗೆ (Aadhaar) ಯಾವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿದೆ ಎನ್ನುವುದನ್ನು ಕಂಡು ಹಿಡಿಯುವುದು ಕೂಡಾ ಬಹಳ ಸುಲಭ. ನೀವು ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ (Mobile) ಸಂಖ್ಯೆಯನ್ನು ಬದಲಾಯಿಸಿದ್ದರೆ ಅಥವಾ ನಿಮ್ಮ ಯಾವ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆ ಎನ್ನುವುದನ್ನು ಮರೆತಿದ್ದರೆ, ಆನ್ ಲೈನ್ ನಲ್ಲಿಯೇ (Online) ಅದನ್ನು ಕಂಡು ಹಿಡಿಯಬಹುದು.
ಇದನ್ನೂ ಓದಿ : Bank Holidays: ಇಂದೇ ಮುಗಿಸಿ ಬ್ಯಾಂಕ್ ಕೆಲಸ: ನಾಳೆಯಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ!
ಮೊಬೈಲ್ ನಂಬರ್ ಯಾವುದು ಎಂದು ಕಂಡು ಹಿಡಿಯುವ ಪ್ರಕ್ರಿಯೆ ಹೀಗಿದೆ:
1-ಮೊದಲು UIDAI ವೆಬ್‌ಸೈಟ್ ಗೆ ಭೇಟಿ ನೀಡಿ
2- My Aadhar ಆಯ್ಕೆಯನ್ನು ಕ್ಲಿಕ್ ಮಾಡಿ
3- Aadhar Services ಆಯ್ಕೆಯ ಮೇಲೆ ಕ್ಲಿಕ್ ಮಾಡಿ
4-ಮೊದಲ ಆಯ್ಕೆ Verify an Aadhar Number ಎಂದಿರುತ್ತದೆ
6-ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೇ ಹೊಸ ವಿಂಡೋ ತೆರೆಯುತ್ತದೆ
7-ಆಧಾರ್ ಸಂಖ್ಯೆಯನ್ನು ನಮೂದಿಸಿ, ಅದರ ಕೆಳಗೆ ಕ್ಯಾಪ್ಚಾ ತುಂಬಿಸಿ
8-ಇದು ಆಧಾರ್ ಸಂಖ್ಯೆ, ವಯಸ್ಸು, ರಾಜ್ಯ ಮತ್ತು ಮೊಬೈಲ್ ಸಂಖ್ಯೆಯಂತಹ ಅನೇಕ ವಿವರಗಳನ್ನು ಪರಿಶೀಲಿಸುತ್ತದೆ
9-ನಿಮ್ಮ ಆಧಾರ್‌ಗೆ ಮೊಬೈಲ್ (Mobile) ಸಂಖ್ಯೆ ಸಂಪರ್ಕಗೊಂಡಿದ್ದರೆ, ಆ ಸಂಖ್ಯೆಯ ಕೊನೆಯ ಮೂರು ಅಂಕೆಗಳು ಇಲ್ಲಿ ಕಾಣುತ್ತವೆ.
10-ನಿಮ್ಮ ಆಧಾರ್‌ಗೆ ಯಾವುದೇ ಸಂಖ್ಯೆಯ ಲಿಂಕ್ ಇಲ್ಲದಿದ್ದರೆ ಅಲ್ಲಿ ಏನನ್ನೂ ಯಾವ ಅಂಕೆಗಳನ್ನು ಕೂಡಾ ತೋರಿಸುವುದಿಲ್ಲ.
ಇದನ್ನೂ ಓದಿ : LPG Booking: ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಖರೀದಿಸಲು ಸುವರ್ಣಾವಕಾಶ..!
ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ರೀಚಾರ್ಜ್ (recharge) ಮಾಡುವುದನ್ನು ಮರೆಯಬೇಡಿ. TRAI ಮಾರ್ಗಸೂಚಿಗಳ ಪ್ರಕಾರ, ಯಾವುದೇ ಮೊಬೈಲ್ ನಂಬರ್ ಗೆ ಒಳಬರುವ ಕರೆಗಳು ನಿಂತು ಹೋದ ನಂತರ , 90 ದಿನಗಳವರೆಗೆ ಸಂಖ್ಯೆಯನ್ನು ರೀಚಾರ್ಜ್ ಮಾಡಿಸಬೇಕು. ಇಲ್ಲವಾದಲ್ಲಿ ಆ ಸಂಖ್ಯೆಯನ್ನು ಇನ್ನೊಬ್ಬ ಗ್ರಾಹಕರಿಗೆ (customer) ನೀಡುವ ಹಕ್ಕು ಮೊಬೈಲ್ ಕಂಪನಿಗೆ ಇರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.