ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಆಲೂಗಡ್ಡೆ, ಈರುಳ್ಳಿ ಹಾಗೂ ಟೊಮೇಟೊ ಬೆಲೆಗಳಲ್ಲಿ ಭಾರಿ ವೃದ್ಧಿಯಾಗಿ ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಹಾಕಿವೆ. ಹಲವು ತಿಂಗಳುಗಳವರೆಗೆ ಪ್ರತಿ ಕೆ.ಜಿ ಈರುಳ್ಳಿ ರೂ.100 ಮತ್ತು ಅದಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗಿದೆ. ಈಗಲೂ ಸಹ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಈರುಳ್ಳಿ ದರ ರೂ.50-ರೂ.60ರಷ್ಟಿದೆ. ಇನ್ನೊಂದೆಡೆ ಆಲುಗಡ್ಡೆ ಹಾಗೂ ಟೊಮೇಟೊ ಬೆಲೆಯಲ್ಲಿಯೂ ಕೂಡ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ.


COMMERCIAL BREAK
SCROLL TO CONTINUE READING

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಎಲ್ಲಿಲ್ಲದ ಹರಸಾಹಸ ನಡೆಸಿದೆ. ಆದರೂ ಸಹಿತ ಸರ್ಕಾರ ಕೈಗೊಂಡ ಕ್ರಮಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಈರುಳ್ಳಿ ಹಾಗೂ ಟೊಮೇಟೊಗಳ ಬೆಲೆ ಏರಿಕೆಯ ಕಾರಣ ಡಿಸೆಂಬರ್ ಒಂದೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಕಳೆದ ಐದು ವರ್ಷಗಳ ಗರಿಷ್ಠ ಮಟ್ಟ ಅಂದರೆ ಶೇ. 7.35ಕ್ಕೆ ತಲುಪಿತ್ತು.


ಭವಿಷ್ಯದಲ್ಲಿ, ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊಗಳಂತಹ ಅಗತ್ಯ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಣದಲ್ಲಿ ಇಡಲು ಸರ್ಕಾರ ಬೆಲೆ ಸ್ಥಿರೀಕರಣ ನಿಧಿ(price stabilisation fund) ಬಗ್ಗೆ ಪ್ರಸ್ತಾಪಿಸಿದೆ. ಬೆಲೆ ಸ್ಥಿರೀಕರಣ ನಿಧಿಯಡಿಯಲ್ಲಿ, ಈರುಳ್ಳಿ, ಆಲೂಗಡ್ಡೆ ಮತ್ತು ಟೊಮ್ಯಾಟೊ ಸೇರಿದಂತೆ ಎಲ್ಲಾ ಅಗತ್ಯ ಆಹಾರ ಪದಾರ್ಥಗಳ ಬಫರ್ ಸ್ಟಾಕ್‌ ಮಾಡುವ  ಸರಬರಾಜು ಹೆಚ್ಚಿಸಲಾಗುವುದು ಎಂದು ಸರ್ಕಾರ ಹೇಳಿದೆ.


ಈ ಕುರಿತು ಲೋಕಸಭೆಯಲ್ಲಿ ತಮ್ಮ ಬಜೆಟ್ 2020ರ ವೇಳೆ ಉಲ್ಲೇಖಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಸರ್ಕಾರ ವಿಭಿನ್ನ ಖಾದ್ಯ ಪದಾರ್ಥಗಳ ಬೆಲೆಯನ್ನು ನಿಯಂತ್ರಣದಲ್ಲಿಡಲು ಕಾಲ-ಕಾಲಕ್ಕೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಅಷ್ಟೇ ಅಲ್ಲ ಇದೀಗ ಬೆಳೆಗಳು, ಈರುಳ್ಳಿ ಹಾಗೂ ಆಲೂಗಡ್ಡೆಗಳಂತಹ ಅಗತ್ಯ ಆಹಾರ ಪದಾರ್ಥಗಳ ಬೆಲೆಯಲ್ಲಿ ಆಗುತ್ತಿರುವ ಏರಿಳಿತಗಳನ್ನು ತಡೆಯಲು price stabilisation fund ಜಾರಿಗೆ ತರಲು ಪ್ಲಾನ್ ಕೂಡ ಮಾಡಲಿದೆ ಎಂದು ಹೇಳಿದ್ದರು.


ಆಮದು ಸುಂಕ, ಕನಿಷ್ಠ ರಫ್ತು ದರ, ರಫ್ತು ನಿಷೇಧ, ಸಂಗ್ರಹಣೆ ಮಿತಿ, ಹೋರ್ಡರ್‌ಗಳು ಮತ್ತು ಕಪ್ಪು ಮಾರಾಟಗಾರರ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ದೇಶೀಯ ಲಭ್ಯತೆಯನ್ನು ಖಾತರಿಪಡಿಸುವ ಮೂಲಕ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ವ್ಯಾಪಾರ ಮತ್ತು ಹಣಕಾಸಿನ ಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು.


ಅಕ್ರಮ ಆಹಾರ ಪದಾರ್ಥಗಳ ಸಂಗ್ರಹಣೆಯಲ್ಲಿ ತೊಡಗಿದ ಹಾಗೂ  ಕಪ್ಪು ವ್ಯಾಪಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ದೇಶೀಯ ಮಾರುಕಟ್ಟೆಯಲ್ಲಿ ಆಹಾರ ಸರಬರಾಜನ್ನು ಸುನಿಶ್ಚಿತಗೊಳಿಸಲು ಆಮದು ಸುಂಕ, ಕನಿಷ್ಠ ರಫ್ತು ದರ, ರಫ್ತು ನಿಷೇಧ ಹಾಗೂ ಆಹಾರ ಶೇಖರಣಾ ಸಾಮರ್ಥ್ಯ ವೃದ್ಧಿಗಳಂತಹ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಸೀತಾರಾಮನ್ ಹೇಳಿದ್ದರು.