ಜೈಪುರ: ಇನ್ನು ಮುಂದೆ ರಾಜಸ್ಥಾನದಲ್ಲಿ ತಂಬಾಕು ಉತ್ಪನ್ನಗಳು ಹೆಚ್ಚು ದುಬಾರಿಯಾಗುವ ನಿರೀಕ್ಷೆಯಿದೆ. ಪ್ಯಾನ್ ಮಸಾಲಾ, ಬೀಡಿ, ಗುಟ್ಕಾ ಮತ್ತು ಸಿಗರೇಟ್ ಗಳಿಗೆ ರಾಜ್ಯ ಸರ್ಕಾರ ಸಂಚಾರ ಶುಲ್ಕ ವಿಧಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಸೂಚನೆಯ ಮೇರೆಗೆ ಹಣಕಾಸು ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಇದನ್ನು ಸರ್ಕಾರ ಅನುಮೋದಿಸಲಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕಳೆದ ವರ್ಷ ಲಾಕ್‌ಡೌನ್‌ (Lockdown) ಸಮಯದಲ್ಲಿ, ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾಗಿದೆ. ಇದೀಗ ರಾಜ್ಯದ ಬೊಕ್ಕಸವನ್ನು ತುಂಬುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ- ಈ ಕಾರಣಗಳಿಗಾಗಿ ಮೇ 31ರೊಳಗೆ ನಿಮ್ಮ ಖಾತೆಯಲ್ಲಿರಲಿ 342 ರೂ.


400 ಕೋಟಿ ಗಳಿಸುವ ಗುರಿ:
ಸರ್ಕಾರವು ತಂಬಾಕು ಉತ್ಪನ್ನಗಳ (Tobacco Products) ಮೇಲೆ ಸಂಚಾರ ಶುಲ್ಕ ವಿಧಿಸುವ ಮೂಲಕ ಸುಮಾರು 400 ಕೋಟಿ ಗಳಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ, ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಗೆ ಬಂದಿರುವ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ, ಇದರಿಂದಾಗಿ ಸರ್ಕಾರವು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ.


ಅಂತಹ ಪರಿಸ್ಥಿತಿಯಲ್ಲಿ, ಇದೀಗ ತಂಬಾಕು ಉತ್ಪನ್ನಗಳ ಮೇಲೆ ಈ ಸಂಚಾರ ಶುಲ್ಕ ವಿಧಿಸುವುದರಿಂದ ಗುಟ್ಕಾ, ಬೀಡಿ, ಸಿಗರೇಟ್ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.


ಇದನ್ನೂ ಓದಿ- Covid-19: ಕರೋನಾ ಯುಗದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದ Xiaomi, Airtel, OPPO


ರಾಜ್ಯದ ಆದಾಯ ಕಡಿಮೆಯಾಗಿದೆ: ಗೆಹ್ಲೋಟ್
ಕರೋನಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೇ 24 ರವರೆಗೆ ರಾಜಸ್ಥಾನದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ಅನ್ನು ಈಗಾಗಲೇ ಜೂನ್ 8 ರವರೆಗೆ ವಿಸ್ತರಿಸಲಾಗಿದೆ. ಲಾಕ್‌ಡೌನ್ ನಿಂದಾಗಿ ರಾಜ್ಯದ ಆದಾಯವು ಶೇಕಡಾ 80 ರಷ್ಟು ಕುಸಿದಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಹೇಳಿದ್ದಾರೆ. ಕರೋನಾ ಸೋಂಕಿನ ಪ್ರಕರಣಗಳು ಕಡಿಮೆಯಾದ ನಂತರ, ಆದಾಯವು ವೇಗವಾಗಿ ಬರಲು ಪ್ರಾರಂಭವಾಗುವ ರೀತಿಯಲ್ಲಿ ರಾಜ್ಯದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು ಎಂದವರು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.