ಇಂದು ಭಗತ್ ಸಿಂಗ್ ಹುಟ್ಟುಹಬ್ಬ: ಇಲ್ಲಿವೆ ಕ್ರಾಂತಿಕಾರಿಯ ಪ್ರಸಿದ್ದ ನುಡಿಮುತ್ತುಗಳು
ಸೆಪ್ಟೆಂಬರ್ 28 ಭಾರತದ ಕ್ರಾಂತಿಕಾರಿ ಹೋರಾಟಗಾರ ಭಗತಸಿಂಗ್ ಹುಟ್ಟಿದ ದಿನ. ಈ ದಿನದಂದು ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಂಗಾದಲ್ಲಿ 1907 ರಲ್ಲಿ ಭಗತ್ ಸಿಂಗ್ ಜನ್ಮ ತಾಳಿದರು. ಮುಂದೆ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮದೇ ಆದ ಪ್ರಮುಖ ಪಾತ್ರವನ್ನು ವಹಿಸಿದರು.ಅವರ ಹುಟ್ಟುಹಬ್ಬದ ನಿಮಿತ್ತ ನಾವು ಅವರ ಕೆಲವು ನುಡಿಮುತ್ತುಗಳನ್ನು ಮತ್ತೊಮ್ಮೆ ಸ್ಮರಿಸಬೇಕಾಗಿದೆ.
ಕ್ರಾಂತಿಯು ಎಲ್ಲ ವ್ಯಕ್ತಿಯ ಶಕ್ತಿಯನ್ನು ಮೀರಿಸುವಂತಹದ್ದು . ಅದನ್ನು ಯಾವುದೇ ನಿಗದಿತ ದಿನಾಂಕದಂದು ತರಲಾಗುವುದಿಲ್ಲ. ಬದಲಾಗಿ ಅದು ವಿಶೇಷ ಪರಿಸರ, ಸಾಮಾಜಿಕ ಮತ್ತು ಆರ್ಥಿಕತೆಯಿಂದ ಉಂಟಾಗುತ್ತದೆ. ಸಂಘಟಿತ ಪಕ್ಷದ ಕಾರ್ಯವು ಈ ಸಂದರ್ಭಗಳ ಮೂಲಕ ಅಂತಹ ಅವಕಾಶವನ್ನು ಬಳಸಿಕೊಳ್ಳಬೇಕು.
ಮನುಷ್ಯನ ಕರ್ತವ್ಯವು ಪ್ರಯತ್ನಿಸುವಂತಾಗಿರಬೇಕು,ಆತನ ಯಶಸ್ಸು ಮತ್ತು ಸಾಧ್ಯತೆ ಅವನ ಪರಿಸರದ ಮೇಲೆ ಅವಲಂಬಿಸಿರುತ್ತದೆ."
ಕರುಣೆಯಿಲ್ಲದ ವಿಮರ್ಶೆ ಮತ್ತು ಸ್ವತಂತ್ರ ಚಿಂತನೆಯು ಕ್ರಾಂತಿಕಾರಿ ಚಿಂತನೆಯ ಎರಡು ಅಗತ್ಯ ಲಕ್ಷಣಗಳಾಗಿವೆ.
ಕ್ರಾಂತಿಯು ರಕ್ತ ಪಿಪಾಸಿನ ಸಂಘರ್ಷನ್ನು ಒಳಗೊಂಡಿರುವುದಲ್ಲ. ಅದು ಬಾಂಬ್ ಮತ್ತು ಪಿಸ್ತೂಲಿನ ಆರಾಧನೆಯೂ ಅಲ್ಲ .
ಬೂದಿಯ ಪ್ರತಿ ಸಣ್ಣ ಅಣು ಕೂಡ ನನ್ನ ಶಾಖದಿಂದ ಚಲನೆಯಲ್ಲಿದೆ, ನಾನು ಅಂತಹ ಒಬ್ಬ ಹುಚ್ಚ ಆದ್ದರಿಂದ ಮತ್ತು ನಾನು ಜೈಲಿನಲ್ಲಿಯೂ ಸಹ ಮುಕ್ತನಾಗಿರುತ್ತೇನೆ.
ನಾನು ನೇಣುಗಂಬಕ್ಕೆ ಸಂತೋಷದಿಂದ ಏರುತ್ತೇನೆ. ಆ ಮೂಲಕ ಕ್ರಾಂತಿಕಾರಿಗಳು ಒಂದು ಒಳ್ಳೆಯ ಸದುದ್ದೇಶಕ್ಕಾಗಿ ತಮ್ಮನ್ನು ತಾವೇ ತ್ಯಾಗಮಾಡಲು ಎಷ್ಟು ಧೈರ್ಯದಿಂದ ಸಿದ್ದರಾಗಿರುತ್ತಾರೆ ಎನ್ನುವುದನ್ನು ಜಗತ್ತಿಗೆ ತೋರಿಸುತ್ತೇವೆ.
ಇದು ಮದುವೆಯಾಗಲು ಸಮಯವಲ್ಲ. ದೇಶ ನನ್ನನ್ನು ಕರೆಯುತ್ತಿದೆ. ಆದ್ದರಿಂದ ನನ್ನ ಹೃದಯ ಮತ್ತು ಆತ್ಮದೊಂದಿಗೆ ದೇಶದ ಸೇವೆ ಮಾಡಲು ನಾನು ಶಪಥವನ್ನು ತೆಗೆದುಕೊಂಡಿದ್ದೇನೆ.
ಅವರು ನನ್ನನ್ನು ಕೊಲ್ಲುಬಹುದು, ಆದರೆ ನನ್ನ ಆಲೋಚನೆಗಳನ್ನಲ್ಲ. ಅವರು ನನ್ನ ದೇಹವನ್ನು ಚಿದ್ರ ಮಾಡಬಹುದು ,ಆದರೆ ಅವರು ನನ್ನ ಆತ್ಮವನ್ನು ಚಿದ್ರಗೊಳಿಸಲು ಸಾಧ್ಯವಾಗುವುದಿಲ್ಲ.
ವ್ಯಕ್ತಿಗಳನ್ನು ಕೊಲ್ಲುವುದು ಸುಲಭ ಆದರೆ ನೀವು ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ.
ನಾನು ಮನುಷ್ಯನಾಗಿದ್ದೇನೆ ಮತ್ತು ಮನುಕುಲದ ಮೇಲಿನ ಎಲ್ಲ ಪರಿಣಾಮಗಳು ನನ್ನನ್ನು ಚಿಂತಿಸುವಂತೆ ಮಾಡುತ್ತವೆ.