ನವ ದೆಹಲಿ: ಕೇಂದ್ರ ಸರ್ಕಾರ ಆಧಾರ್-ಪಾನ್ ಲಿಂಕಿಗೆ ವಿಸ್ತರಿಸಿದ್ದ ಗಡುವು ಆಗಸ್ಟ್ 31ಕ್ಕೆ ಎಂದರೆ ಇಂದಿಗೆ ಮುಕ್ತಾಯಗೊಳ್ಳಲಿದೆ. ಆಧಾರ್-ಪಾನ್ ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ಡೀಫಾಲ್ಟಾಗಿ ದಂಡ ವಿಧಿಸಲಾಗುತ್ತದೆ. ಇದರಿಂದಾಗಿ ಕೇಂದ್ರ ಸರ್ಕಾರವು ಎಲ್ಲರೂ ಆಗಸ್ಟ್ 31 ರ ವಿಸ್ತೃತ ಗಡುವು ನೀಡುವ ಮೂಲಕ ಪಾನ್ ಅನ್ನು ಆಧಾರ್ ನೊಂದಿಗೆ ಸಂಪರ್ಕಿಸಲು ಆದೇಶ ನೀಡಿತ್ತು. 


COMMERCIAL BREAK
SCROLL TO CONTINUE READING

ನಿಮ್ಮ ಆಧಾರ್ ಪಾನ್ ಜೊತೆ ಸಂಪರ್ಕ ಹೊಂದಿದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ನಲ್ಲಿ ನಿಮ್ಮ ಖಾತೆಗೆ ನೀವು ಲಾಗಿನ್ ಮಾಡಬಹುದು - https://incometaxindiaefiling.gov.in/     


ಆಗಸ್ಟ್ 31 ರೊಳಗೆ ನಿಮ್ಮ ಆಧಾರ್ ಅನ್ನು ಪಾನ್ಗೆ ಲಿಂಕ್ ಮಾಡುವ ಹಂತಗಳು ಕೆಳಕಂಡಂತಿವೆ:


* ನೀವು ಈಗಾಗಲೇ ನೋಂದಾಯಿಸದಿದ್ದರೆ, ಮೊದಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ (https://incometaxindiaefiling.gov.in) ನಲ್ಲಿ ನೋಂದಾಯಿಸಿ. 


* ನಿಮ್ಮ ಲಾಗ್-ಇನ್ ID, ಪಾಸ್ವರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಪೋರ್ಟಲ್ಗೆ ಸೈನ್-ಇನ್ ಮಾಡಿ.


* ಸೈಟ್ಗೆ ಲಾಗ್ ಇನ್ ಆದ ನಂತರ ಪಾಪ್ ಅಪ್ ವಿಂಡೋ ನಿಮ್ಮ ಆಥಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು ಸಹಾಯ ಮಾಡುತ್ತದೆ.


* ಒಂದು ವೇಳೆ ಅದು ಕಾಣಿಸದಿದ್ದರೆ, "ಪ್ರೊಫೈಲ್ ಸೆಟ್ಟಿಂಗ್" ಮತ್ತು ನಂತರ "ಲಿಂಕ್ ಆಧಾರ್" ಕ್ಲಿಕ್ ಮಾಡಿ.


* ನಿಮ್ಮ ಆಧಾರ್ ಕಾರ್ಡ್ನಲ್ಲಿ ಇರುವ ವಿವರಗಳನ್ನು ಪರಿಶೀಲಿಸಿ.



* ವಿವರಗಳ ಪರಿಶೀಲನೆಯ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಿ ಮತ್ತು '' ಲಿಂಕ್ ಆಧಾರ್ '' ಬಟನ್ ಕ್ಲಿಕ್ ಮಾಡಿ. ವಿವರಗಳು ಹೊಂದಿಕೆಯಾಗದಿದ್ದರೆ, ಅದು ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ಅವನ / ಅವಳ ಆಧಾರ್ ಅಥವಾ ಪ್ಯಾನ್ನಲ್ಲಿ ವಿವರಗಳನ್ನು ತಿದ್ದುಪಡಿ ಮಾಡಲು ಬಳಕೆದಾರರಿಗೆ ಸಲಹೆ ನೀಡುತ್ತದೆ.


ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಾನ್ ಕಾರ್ಡ್ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ಸೂಚಿಸುವ ಪಾಪ್-ಅಪ್ ಸಂದೇಶವು ಕಾಣಿಸುತ್ತದೆ.