ಕೈಫಿ ಅಜ್ಮಿ ಅವರು ಬಾಲಿವುಡ್ ಸಿನಿಮಾದಲ್ಲಿ ಉರ್ದು ಸಾಹಿತ್ಯವನ್ನು ತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವರು. ಇಂದು ಅವರ 102 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಮೂಲತಃ ಅಜ್ಮಿ ಅವರು ಉತ್ತರ ಪ್ರದೇಶದ ಅಜಮ್‌ಗಡ್ ಜಿಲ್ಲೆಯ ಮಿಜ್ವಾನ್ ಗ್ರಾಮದಲ್ಲಿ ಶಿಯಾ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರ ಕುಟುಂಬವೂ ಮೊದಲಿನಿಂದಲೂ ಕಲಾವಿದರ ಕುಟುಂಬವಾಗಿತ್ತು. ಅವರಿಗೆ ಮೂವರು ಸಹೋದರರಿದ್ದರು,ಅವರು ಕೂಡ ಶಾಯರ್ ಗಳಾಗಿದ್ದರು. ಅಜ್ಮಿ ಶೌಕತ್ ಅಜ್ಮಿಯನ್ನು ಮದುವೆಯಾಗಿದ್ದರು. ಅವರಿಗೆ ಮಗಳು ಶಬಾನಾ ಅಜ್ಮಿ (Shabana Azmi) ಮಗ ಬಾಬಾ ಅಜ್ಮಿ, ಸೊಸೆ ತನ್ವಿ ಅಜ್ಮಿ ಇದ್ದಾರೆ.


ಇದನ್ನೂ ಓದಿ: ಸರ್ಕಾರದ ನ್ಯೂನ್ಯತೆ ಎತ್ತಿ ತೋರಿಸಿದವರಿಗೆ ದೇಶದ್ರೋಹಿ ಎನ್ನುವ ಸ್ಥಿತಿ ಇದೆ-ಶಬನಾ ಅಜ್ಮಿ


ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು: 


ಅಜ್ಮಿ ಅವರು ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಮೊದಲ ಗಜಲ್ ಅನ್ನು ಬಹ್ರೈಚ್ ಇತ್ನಾ ತೋ ಜಿಂದಗಿ ಮೇ ಕಿಸಿ ಕಿ ಖಲಾಲ್ ಪಡೆ ರಚಿಸಿದರು.ತದನಂತರ ಅವರನ್ನು ಮುಷೈರಾಕ್ಕೆ ಆಹ್ವಾನಿಸಲಾಯಿತು.ಅಲ್ಲಿ ಅವರು ಗಜಲ್ ಅನ್ನು ಪಠಿಸಿದರು, ಆದರೆ ಬಹುತೇಕ ಜನರು ತಮ್ಮ ಹಿರಿಯ ಸಹೋದರನ ಆ ಗಜಲ್ ಅನ್ನು ಪಠಿಸಿದ್ದಾರೆಂದು ಭಾವಿಸಿದ್ದರು. ಆದರೆ ಅವರ ಹಿರಿಯ ಸಹೋದರ ಅದನ್ನು ನಿರಾಕರಿಸಿದಾಗ, ಅವರ ತಂದೆ ಮತ್ತು ಗುಮಾಸ್ತರು ಅವರ ಕಾವ್ಯಾತ್ಮಕ ಪ್ರತಿಭೆಯನ್ನು ಪರೀಕ್ಷಿಸಲು ನಿರ್ಧರಿಸಿದರು. ಅವರಿಗೆ ಕೆಲವು ಸಾಲುಗಳನ್ನು ನೀಡಿದರು ಮತ್ತು ಅದೇ ಮೀಟರ್ ಮತ್ತು ಪ್ರಾಸದಲ್ಲಿ ಗಜಲ್ ಬರೆಯಲು ಕೇಳಿದರು.ಈ ಸವಾಲನ್ನು ಅಜ್ಮಿ ಸ್ವೀಕರಿಸಿ ಗಜಲ್ ನ್ನು ಪೂರ್ಣಗೊಳಿಸಿದರು.ಈ ನಿರ್ದಿಷ್ಟ ಗಜಲ್ ಅಖಂಡ ಭಾರತದಲ್ಲಿ ಅಜ್ಮಿ ಅವರಿಗೆ ಹೆಸರನ್ನು ತಂದುಕೊಟ್ಟಿತು. ಇದಾದ ನಂತರ ಈ ಗಜಲ್ ನ್ನು ಗಾಯಕಿ ಬೇಗಂ ಅಖ್ತರ್ ಹಾಡಿದ್ದರಿಂದಾಗಿ ಅದು ಸಾಕಷ್ಟು ಜನಮನ್ನನೆಯನ್ನು ಗಳಿಸಿತು.ಕೈಫಿ ಅಜ್ಮಿ ಅವರು ಪಿರ್ಜಾಡಾ ಕಾಸಿಮ್, ಜಾನ್ ಎಲಿಯಾ ಅವರ ಜೊತೆಗೆ ಇಪ್ಪತ್ತನೇ ಶತಮಾನದ ಅನೇಕ ಸ್ಮರಣೀಯ ಮುಷೈರಾ ಕೂಟಗಳಲ್ಲಿ ಭಾಗವಹಿಸಿದರು.


https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.