ಇಂದು ಸ್ಟಾಲಿನ್ ಭೇಟಿಯಾಗಲಿರುವ ಕೆಸಿಆರ್, ತೃತೀಯ ರಂಗದ ಬಗ್ಗೆ ಚರ್ಚೆ ಸಾಧ್ಯತೆ
ಲೋಕಸಭಾ ಚುನಾವಣೆ ಏಳನೇ ಹಂತ ಬಾಕಿ ಇರುವಾಗಲೇ ಟಿಆರ್ಎಸ್ ಪಕ್ಷದ ಮುಖ್ಯಸ್ಥ ಹಾಗೂ ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್ ರಾವ್ ತೃತೀಯ ರಂಗದ ರಚನೆಯ ಸಾಧ್ಯತೆ ವಿಚಾರವಾಗಿ ಚರ್ಚಿಸಲು ಸೋಮವಾರದಂದು ಡಿಎಂಕೆ ನಾಯಕ ಸ್ಟಾಲಿನ್ ಅವರನ್ನು ಭೇಟಿಯಾಗಲಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆ ಏಳನೇ ಹಂತ ಬಾಕಿ ಇರುವಾಗಲೇ ಟಿಆರ್ಎಸ್ ಪಕ್ಷದ ಮುಖ್ಯಸ್ಥ ಹಾಗೂ ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್ ರಾವ್ ತೃತೀಯ ರಂಗದ ರಚನೆಯ ಸಾಧ್ಯತೆ ವಿಚಾರವಾಗಿ ಚರ್ಚಿಸಲು ಸೋಮವಾರದಂದು ಡಿಎಂಕೆ ನಾಯಕ ಸ್ಟಾಲಿನ್ ಅವರನ್ನು ಭೇಟಿಯಾಗಲಿದ್ದಾರೆ.
ಈ ಭೇಟಿ ವೇಳೆ ಉಭಯ ಪಕ್ಷದ ನಾಯಕರು ಪ್ರಸಕ್ತ ದೇಶದ ರಾಜಕೀಯ ಬೆಳವಣಿಗೆ ಕುರಿತು ಬೆಳಕು ಚೆಲ್ಲಲಿದ್ದಾರೆ ಎನ್ನಲಾಗಿದೆ.ಕಾಂಗ್ರೆಸೇತರ ಹಾಗೂ ಬಿಜೆಪಿಯೇತರ ಒಕ್ಕೂಟ ರಚನೆಗೆ ಮುಂದಾಗಿರುವ ಕೆಸಿಆರ್ ಇತ್ತೀಚಿಗಷ್ಟೇ ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರನ್ನು ಭೇಟಿ ಮಾಡಿದ್ದರು.ಅಲ್ಲದೆ ಈ ವಿಚಾರವಾಗಿ ಕುಮಾರಸ್ವಾಮಿಯವರಿಗೆ ಕೂಡ ಸಂಪರ್ಕಿಸಿದ್ದರು.
ಮೇ 23 ರಂದು ಒಂದು ವೇಳೆ ಯಾವುದೇ ಪಕ್ಷ ಬಹುಮತ ಬರದೆ ಇದ್ದ ಸಂದರ್ಭದಲ್ಲಿ ತೃತೀಯ ರಂಗದ ರಚನೆಯ ಸಾಧ್ಯತೆಗಳ ಬಗ್ಗೆ ಈಗಲೇ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಅವರು ಕೇರಳದ ಪಿನರಾಯಿ ವಿಜಯ್ ರನ್ನು ಭೇಟಿ ಮಾಡಿದಾಗ 1996 ರಲ್ಲಿ ನ ಸೂತ್ರದ ಅನುಗುಣವಾಗಿ ಸರ್ಕಾರ ರಚಿಸುವ ಪ್ರಸ್ತಾವವನ್ನು ಮಂಡಿಸಿದ್ದರು.ಆಗ ಸಂಯುಕ್ತ ರಂಗದಿಂದ ದಕ್ಷಿಣ ಭಾರತದ ದೇವೇಗೌಡ ಅವರು ಪ್ರಧಾನಿ ಮಂತ್ರಿಯಾಗಿ ಆಯ್ಕೆಯಾಗಿದ್ದರು. ಆದ್ದರಿಂದ ಈಗ ಒಂದು ವೇಳೆ ಅಂತಹದ್ದೇ ಅತಂತ್ರ ಫಲಿತಾಂಶ ಬಂದಿದ್ದೆ ಆದಲ್ಲಿ ಇದೇ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
" ಕೇಂದ್ರದಲ್ಲಿ ಮುಂಬರುವ ಹೊಸ ಸರ್ಕಾರವು ಒಕ್ಕೂಟ ವ್ಯವಸ್ಥೆ ಮತ್ತು ಜಾತ್ಯತೀತತೆಯನ್ನು ಅನುಸರಿಸುತ್ತದೆ.ರಾಜ್ಯದ ಅಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಬೆಂಬಲಿಸುವರಿಗೆ ತಮ್ಮ ಬೆಂಬಲವಿದೆ, ಆ ನಿಟ್ಟಿನಲ್ಲಿ ಮೇ 6 ರಂದು ಕೆ.ಸಿ.ಆರ್ ಜೊತೆ ನಡೆದ ಸಭೆ ಮಹತ್ವದ್ದಾಗಿದೆ" ಎಂದು ಸಭೆಯ ನಂತರ ವಿಜಯನ್ ಹೇಳಿದ್ದರು.