ಇಂದು ರಾಹುಲ್ ಗಾಂಧಿ ಪದಗ್ರಹಣ...!
1998 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಅವರು 132 ವರ್ಷ ವಯಸ್ಸಿನ ಪಕ್ಷವನ್ನು 19 ವರ್ಷಗಳ ಕಾಲ ಮುನ್ನಡೆಸಿದರು.
ನವದೆಹಲಿ: ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಗಾಂಧಿಗೆ ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪದಗ್ರಹಣ ನಡೆಯಲಿದೆ. ಅವರು ಪಕ್ಷದ ಕಾರ್ಯಕಾರಿಧ್ಯಕ್ಷರಿಂದ ಔಪಚಾರಿಕ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳ ಫಲಿತಾಂಶ ಪ್ರಕಟಗೊಳ್ಳುವ ಎರಡು ದಿನಗಳ ಮುಂಚೆ 47 ವರ್ಷದ ರಾಹುಲ್ ಗಾಂಧಿ ಔಪಚಾರಿಕವಾಗಿ ಗ್ರ್ಯಾಂಡ್ ಓಲ್ಡ್ ಪಾರ್ಟಿಯ ಅಧಿಕಾರವನ್ನು ಪಡೆದುಕೊಳ್ಳಲಿದ್ದಾರೆ.
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಪ್ರಸಕ್ತ ಮತ್ತು ಮಾಜಿ ಮುಖ್ಯಮಂತ್ರಿಗಳು, ಸಂಸದರು, ಹಿರಿಯ ಕಾಂಗ್ರೆಸ್ ನಾಯಕರು, ಎಲ್ಲಾ ಪಿಸಿಸಿ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ರಾಹುಲ್ ಗಾಂಧಿ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಲಾಗಿದ್ದು, ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮುಲ್ಲಪ್ಪಳ್ಳಿ ರಾಮಚಂದ್ರನ್ ಡಿಸೆಂಬರ್ 11 ರಂದು ಇದನ್ನು ಘೋಷಿಸಿದ್ದರು.
ಪಾರ್ಲಿಮೆಂಟ್ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ರವಾನಿಸಲು ಅವರ ಪಕ್ಷ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದ ಬಳಿಕ ಅವರು ತಮ್ಮ ಭಾಷಣದಲ್ಲಿ ಹೇಳಿದರು.
"ನಾವು ಕಾಂಗ್ರೆಸ್ ಪಕ್ಷವನ್ನು ಪರಿವರ್ತಿಸುವುದರಲ್ಲಿ ಕೆಲಸ ಮಾಡಬೇಕಾಗಿದೆ ಮತ್ತು ಅದರ ಒಂದು ಮೂಲಭೂತ ಭಾಗವಾಗಿ ಕಾಂಗ್ರೆಸ್ನ ಪ್ರತಿಯೊಂದು ಪ್ರಾಥಮಿಕ ಹಂತದಲ್ಲಿ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಗಾಂಧಿ 2013ರಿಂದ ಇಂದಿನ ವರೆಗೆ ನಾಲ್ಕು ವರ್ಷಗಳು ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
2019 ರ ಲೋಕಸಭೆ ಚುನಾವಣೆ, ಚುನಾವಣಾ ಕದನಗಳ ಹೊರತುಪಡಿಸಿ ಪಕ್ಷದ ಸಂಘಟನೆಯ ಪುನರುಜ್ಜೀವನ ಗೊಳಿಸುವುದು ರಾಹುಲ್ ಗಾಂಧಿಗೆ ಮುಖ್ಯ ಸವಾಲಾಗಿದೆ.
ಏತನ್ಮಧ್ಯೆ, ಸೋನಿಯಾ ಗಾಂಧಿ ಇದು ತಮಗೆ ನಿವೃತ್ತರಾಗುವ ಸಮಯ ಎಂದು ಹೇಳಿದರು.
ಆದರೆ ಸೋನಿಯಾ ಗಾಂಧಿಯವರು ಪಕ್ಷದ ಮುಖ್ಯಸ್ಥರ ಪಾತ್ರದಿಂದ ಮಾತ್ರ ನಿವೃತ್ತರಾಗುತ್ತಿದ್ದಾರೆಯೇ ಹೊರತು, ರಾಜಕೀಯದಿಂದಲ್ಲ ವಕ್ತಾರ ರಣೀಪ್ ಸುರ್ಜೆವಾಲಾ ಹೇಳಿದ್ದಾರೆ. ಅಲ್ಲದೆ, "ಮಾಧ್ಯಮಗಳಲ್ಲಿ ಸ್ನೇಹಿತರನ್ನು ಪ್ರೇರೇಪಿಸಬಾರದೆಂದು ಹೃತ್ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ" ಎಂದು ಸುರ್ಜೆವಾಲಾ ಅವರು ಟ್ವೀಟ್ ಮಾಡಿದ್ದಾರೆ.
"ಸೋನಿಯಾ ಗಾಂಧಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ ಮತ್ತು ರಾಜಕೀಯದಿಂದ ನಿವೃತ್ತರಾಗಿದ್ದಾರೆ ಕಾಂಗ್ರೆಸ್ ಆದರ್ಶಕ್ಕೆ ಅವರ ಆಶೀರ್ವಾದ, ಬುದ್ಧಿವಂತಿಕೆ ಮತ್ತು ಸಹಜ ಬದ್ಧತೆಯು ಯಾವಾಗಲೂ ನಮ್ಮ ಮಾರ್ಗದರ್ಶಿ ಬೆಳಕನ್ನು ನೀಡಲಿದೆ" ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
1998 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಅವರು 132 ವರ್ಷ ಹಳೆಯ ಪಕ್ಷವನ್ನು 19 ವರ್ಷಗಳ ಕಾಲ ಮುನ್ನಡೆಸಿದ್ದಾರೆ.