ಇಂದು ಬೆಂಗಳೂರಿನಲ್ಲಿ ದೇವೇಗೌಡ, ಕುಮಾರಸ್ವಾಮಿಯನ್ನು ಭೇಟಿ ಮಾಡಲಿರುವ ಚಂದ್ರಬಾಬು ನಾಯ್ಡು
ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರವನ್ನು ರಚನೆ ಮಾಡುವ ನಿಟ್ಟಿನಲ್ಲಿ ಎಲ್ಲ ಪ್ರತಿಪಕ್ಷಗಳನ್ನು ಭೇಟಿ ಮಾಡುತ್ತಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ನವದೆಹಲಿ: ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರವನ್ನು ರಚನೆ ಮಾಡುವ ನಿಟ್ಟಿನಲ್ಲಿ ಎಲ್ಲ ಪ್ರತಿಪಕ್ಷಗಳನ್ನು ಭೇಟಿ ಮಾಡುತ್ತಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಇಂದು ರಾತ್ರಿ 9.30 ಕ್ಕೆ ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಕುರಿತಾಗಿ ಚರ್ಚೆ ನಡೆಸಲಿದ್ದಾರೆ.2014 ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎನ್.ಡಿ.ಎ ಭಾಗವಾಗಿದ್ದ ನಾಯ್ಡು ನಂತರ ಕೇಂದ್ರ ಸರ್ಕಾರವು ಆಂಧ್ರಕ್ಕೆ ವಿಶೇಷ ಆರ್ಥಿಕ ಸ್ಥಾನಮಾನ ನೀಡದ ಹಿನ್ನಲೆಯಲ್ಲಿ ಸರ್ಕಾರದಿಂದ ಹೊರಬಂದಿದ್ದರು.
ಎನ್.ಡಿ.ಎ ದಿಂದ ಹೊರಬಂದ ನಂತರ ನಿರಂತರವಾಗಿ ಪ್ರಾದೇಶಿಕ ಪಕ್ಷಗಳ ನೇತೃತ್ವದ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.ಈಗಾಗಲೇ ಏಳು ಹಂತದ ಚುನಾವಣೆ ಮುಗಿದಿದ್ದು, ಬಹುತೇಕ ಚುನಾವಣಾ ಸಮೀಕ್ಷೆಗಳು ಎನ್.ಡಿ.ಎ ಒಕ್ಕೂಟಕ್ಕೆ ಬಹುಮತವನ್ನು ನೀಡಿವೆ. ಈ ಹಿನ್ನಲೆಯಲ್ಲಿ ಫಲಿತಾಂಶಕ್ಕೂ ಮುನ್ನ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ.
ಈಗಾಗಲೇ ಚುನಾವಣಾ ಆಯೋಗದ ವಿರುದ್ಧ ರಣಕಹಳೆ ಊದಿರುವ ಪ್ರತಿಪಕ್ಷಗಳು ಮತಯಂತ್ರ ವಿರೂಪಗೊಳಿಸುವಿಕೆ ನಡೆದಿದೆ ಎಂದು ಆರೋಪಿಸಿವೆ.ಈಗ ಕೇವಲ 2 ದಿನಗಳ ಮಾತ್ರ ಚುನಾವಣಾ ಫಲಿತಾಂಶಕ್ಕೆ ಬಾಕಿ ಇದ್ದು, ನಂತರದ ಬೆಳವಣಿಗೆಗಳಿಗೆ ಯಾವ ಸ್ವರೂಪ ಪಡೆಯಲಿವೆ ಎನ್ನುವುದಕ್ಕೆ ಈಗ ಕಾಲವೇ ಉತ್ತರಿಸಬೇಕಾಗಿದೆ.