ನವದೆಹಲಿ: ಚೀನಿಯರು ನಮ್ಮ ಭೂಪ್ರದೇಶವನ್ನು ಪ್ರವೇಶಿಸಿಲ್ಲ ಅಥವಾ ಅವರು ಯಾವುದೇ ಪೋಸ್ಟ್ ನ್ನು ಕೂಡ ಆಕ್ರಮಿಸಿಲ್ಲ  ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ-ಚೀನಾದ ಸೈನಿಕರ ಸಂಘರ್ಷದ ಹಿನ್ನಲೆಯಲ್ಲಿ ಕರೆದ ಸರ್ವಪಕ್ಷಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಹೇಳಿದ್ದಾರೆ.


'ಅವರು ನಮ್ಮ ಗಡಿಯಲ್ಲಿ ಒಳನುಗ್ಗಿಲ್ಲ, ಅಥವಾ ಯಾವುದೇ ಪೋಸ್ಟ್ ನ್ನು ಅವರು (ಚೀನಾ) ವಹಿಸಿಕೊಂಡಿಲ್ಲ. ನಮ್ಮ ಇಪ್ಪತ್ತು  ಜನ ಜವಾನ್‌ಗಳು ಹುತಾತ್ಮರಾಗಿದ್ದರು, ಆದರೆ ಭಾರತ್ ಮಾತೆಗೆ ಸವಾಲಾದವರಿಗೆ ಅವರು ಪಾಠವನ್ನು ಕಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. 


ಇದೇ ಸಂದರ್ಭದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ತಿಳಿಸಿದ ಪ್ರಧಾನಿ ಮೋದಿ ' ಭಾರತದ ಒಂದು ಇಂಚು ಭೂಮಿಯನ್ನು" ಸಹ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.


'ಇಂದು, ನಮ್ಮ  ಇಂಚು ಭೂಮಿಯತ್ತ ಕಣ್ಣು ಕೂಡ ಹಾಯಿಸುವ ಹಾಗಿಲ್ಲ, ಭಾರತದ ಸಶಸ್ತ್ರ ಪಡೆಗಳಿಗೆ ಒಂದೇ ಸಮಯದಲ್ಲಿ ಅನೇಕ ಕ್ಷೇತ್ರಗಳಿಗೆ ಚಲಿಸುವ ಸಾಮರ್ಥ್ಯವಿದೆ' ಎಂದು ಪ್ರಧಾನಿ ಹೇಳಿದರು.