Toilet Pass In Metro : ಮೆಟ್ರೋ ಪ್ರಯಾಣಿಕರೊಬ್ಬರು ಶೌಚಾಲಯ ನೀತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ರೆಡ್ಡಿಟ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರೊಬ್ಬರು ಪೋಸ್ಟ್ ವೊಂದನ್ನು ಶೇರ್ ಮಾಡಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಸೌಲಭ್ಯಗಳನ್ನು ಬಳಸುವ ಮುನ್ನ ಅನುಸರಿಸಬೇಕಾದ ಈ ವಿಧಾನದ ಬಗ್ಗೆ ಹೇಳಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಶೌಚಾಲಯ ಬಳಸಲು ಟಾಯ್ಲೆಟ್ ಪಾಸ್ ನೀಡಲಾಗುವುದು. ಶೌಚಾಲಯವನ್ನು ಪ್ರವೇಶಿಸುವ ಮುನ್ನ ಆ ಪಾಸ್ ನಲ್ಲಿ ತಮ್ಮ ಹೆಸರು,ಫೋನ್ ಸಂಖ್ಯೆ ಮತ್ತು ಟಿಕೆಟ್ ಟೋಕನ್ ಸಂಖ್ಯೆಯನ್ನು ನಮೂದಿಸಬೇಕು.


ಇದನ್ನೂ ಓದಿ : Daily GK Quiz: ಪಟ್ಟದಕಲ್ಲು ಮತ್ತು ಐಹೊಳೆ ದೇವಾಲಯಗಳನ್ನು ನಿರ್ಮಿಸಿದವರು ಯಾರು?


ಈ ಬಗ್ಗೆ ಪ್ರಯಾಣಿಕರು ರೆಡ್ಡಿಟ್  ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಈಪೋಸ್ಟ್ ಹಂಚಿಕೊಳ್ಳುತ್ತಿದ್ದ ಹಾಗೆ ವೈರಲ್ ಆಗಿದೆ. ಇಂತಹ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದರಿಂದ ಸಾರ್ವಜನಿಕ ಸೌಲಭ್ಯಗಳ ಬಳಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದು ಕೆಲವು ವ್ಯಾಖ್ಯಾನಕಾರರು ಸಲಹೆ ನೀಡಿದರು. ಆದರೆ ಶೌಚಾಲಯ ಬಳಸಲು ಫೋನ್ ನಂಬರ್ ನಂಥಹ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಅಗತ್ಯವನ್ನು ಕೆಲವರು ಪ್ರಶ್ನಿಸಿದ್ದಾರೆ.


ಈ ನಿಯಮ ಜಾರಿಯಾಗಿರುವುದು ಮುಂಬೈ ಮೆಟ್ರೋದಲ್ಲಿ.ಈ ನಿಯಮದ ಪ್ರಕಾರ,ನಿಲ್ದಾಣದ ವ್ಯಾಪ್ತಿಯಲ್ಲಿ ಟಿಕೆಟ್ ಪಡೆದು ಒಳ ಪ್ರವೇ ಶಿಸಿದವರು ಮಾತ್ರ ಶೌಚಾಲಯವನ್ನು ಬಳಸಬಹುದು. ಮೆಟ್ರೋ ಪ್ರಯಾಣಿಕರಲ್ಲದವರು ಬಂದು ಮೆಟ್ರೋ ಶೌಚಲಯವನ್ನು ಬಳಸುವಂತಿಲ್ಲ. ಈ ಮೂಲಕ ಯಾರು ಬೇಕೋ ಅವರು, ಹೇಗೆ ಬೇಕೋ ಹಾಗೆ ಮೆಟ್ರೋ  ಟಾಯ್ಲೆಟ್ ಬಳಸುವುದಕ್ಕೆ ನಿರ್ಬಂಧ  ಹಾಕಿದ ಹಾಗೆ ಆಗಿದೆ. 


ಇದನ್ನೂ ಓದಿ : "ಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ... ಆತ ಪಬ್ಲಿಕ್‌ನಲ್ಲಿ ಹೀಗೆ ಮಾಡಬೇಕು"- ಬಿಷ್ಣೋಯ್ ಗ್ಯಾಂಗ್‌ನಿಂದ ಸಂಚಲನಕಾರಿ ಹೇಳಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ