ನವದೆಹಲಿ: ಟಾಲಿವುಡ್ ನಟ ರಾಮ್ ಪೊಥಿನೆನಿಗೆ ಧೂಮಪಾನ ನಿಷೇಧ ಪ್ರದೇಶದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.



COMMERCIAL BREAK
SCROLL TO CONTINUE READING

ನಗರದ ಐತಿಹಾಸಿಕ ಸ್ಮಾರಕವೊಂದರಲ್ಲಿ ಮುಂಬರುವ 'ಐಸ್‌ಮಾರ್ಟ್ ಶಂಕರ್' ಚಿತ್ರದ ಚಿತ್ರೀಕರಣದಲ್ಲಿದ್ದ ನಟ ನಿರ್ಬಂಧಿತ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಪ್ಟಾ) 2003 ರ ಅಡಿಯಲ್ಲಿ ಈ ನಟನಿಗೆ ಪೊಲೀಸರು ದಂಡ ವಿಧಿಸಿದರು. ನಂತರ ಪೊಥಿನೆನಿ ದಂಡವನ್ನು ಪಾವತಿಸಿದರು ಎನ್ನಲಾಗಿದೆ.


ಪುರಿ ಜಗನ್ನಾಥ್ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಚಿತ್ರ 'ಐಸ್ಮಾರ್ಟ್ ಶಂಕರ್' ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.