Tomato prices: ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆ ತೀವ್ರ ಜಿಗಿತಕ್ಕೆ ಹವಾಮಾನ ಬದಲಾವಣೆಯೇ ಕಾರಣ ಎಂದು ಸರ್ಕಾರ ಹೇಳಿದೆ. ಜೊತೆಗೆ ಸದ್ಯದಲ್ಲೇ ಟೊಮೇಟೊ ದರ ಇಳಿಕೆಯಾಗಲಿದೆ ಎಂದು ಸಹ ಹೇಳಿತ್ತು. ದೇಶದ ಹಲವು ನಗರಗಳಲ್ಲಿ 100 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಟೊಮೆಟೊ ಮಾರಾಟವಾಗುತ್ತಿರುವ ವರದಿಗಳಿವೆ.


COMMERCIAL BREAK
SCROLL TO CONTINUE READING

ಟೊಮೆಟೊ ಬೆಲೆ ಏರಿಕೆ ತಾತ್ಕಾಲಿಕ ಸಮಸ್ಯೆ:


ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾತನಾಡಿ, “ಟೊಮೆಟೊ ಬೆಲೆ ಏರಿಕೆ ತಾತ್ಕಾಲಿಕ ಸಮಸ್ಯೆಯಾಗಿದೆ. ಪ್ರತೀ ವರ್ಷ ಈ ಸಮಯದಲ್ಲಿ ಇದು ಸಂಭವಿಸುತ್ತದೆ. ಟೊಮೆಟೊವು ಬಹಳ ಹಾಳಾಗುವ ಆಹಾರ ಉತ್ಪನ್ನವಾಗಿದೆ ಮತ್ತು ಹಠಾತ್ ಮಳೆಯು ಅದರ ಸಾಗಣೆಯ ಮೇಲೆ ಪರಿಣಾಮ ಬೀರುತ್ತದೆ. ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಜೂನ್ 27ರ ಬಳಿಕ ಅಖಿಲ ಭಾರತ ಮಟ್ಟದಲ್ಲಿ ಟೊಮೆಟೊ ಬೆಲೆ ಕೆಜಿಗೆ 46 ರೂ. ಆಗಲಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: Tech news: ಹಳೆ ಫೋನ್‌ನಿಂದ ಹೊಸ ಮೊಬೈಲ್‌ಗೆ Contacts ಶೇರ್‌ ಮಾಡಲು ಸಿಂಪಲ್‌ ಟ್ರಿಕ್‌ ಇಲ್ಲಿದೆ


ಗರಿಷ್ಠ ಬೆಲೆ ಕೆಜಿಗೆ 122 ರೂ:


ಟೊಮೇಟೊ ಗರಿಷ್ಠ ಬೆಲೆಯೂ ದಾಖಲಾಗಿದ್ದು, ಕೆಜಿಗೆ 122 ರೂ. ಆಗಿದೆ. ದೇಶದ ನಾಲ್ಕು ಮೆಟ್ರೋ ನಗರಗಳ ಬಗ್ಗೆ ಮಾತನಾಡುವುದಾದರೆ, ಟೊಮೆಟೊ ಚಿಲ್ಲರೆ ಬೆಲೆ ದೆಹಲಿಯಲ್ಲಿ ಕೆಜಿಗೆ 60 ರೂ., ಮುಂಬೈನಲ್ಲಿ ಕೆಜಿಗೆ 42 ರೂ., ಕೋಲ್ಕತ್ತಾದಲ್ಲಿ ಕೆಜಿಗೆ 75 ರೂ. ಮತ್ತು ಚೆನ್ನೈನಲ್ಲಿ ಕೆಜಿಗೆ 67 ರೂ. ಇದೆ.


ವಾರದಲ್ಲಿ ಟೊಮೇಟೊ ದರ ದುಪ್ಪಟ್ಟು:


ದೆಹಲಿ-ಎನ್‌ ಸಿ ಆರ್‌ ನಲ್ಲಿ, ಹಾಲು ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಮದರ್ ಡೈರಿಯ ಅಂಗಡಿಯಲ್ಲಿಯೂ ಸಹ ಟೊಮೆಟೊ ದರವು ಕೆಜಿಗೆ ಸುಮಾರು 80 ರೂ.ಗೆ ದ್ವಿಗುಣಗೊಂಡಿದೆ. ಪ್ರಮುಖ ಉತ್ಪಾದಕ ಪ್ರದೇಶಗಳಲ್ಲಿ ಮಳೆಯಿಂದಾಗಿ ಟೊಮೇಟೊ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅದರ ಬೆಲೆ ಗಗನಕ್ಕೇರಿದೆ. ಮದರ್ ಡೇರಿ ವಕ್ತಾರರು ಮಾತನಾಡಿ, ''ಮುಂಗಾರು ಆರಂಭದ ಕಾರಣ ಟೊಮೆಟೊ ಬೆಳೆ ಪ್ರಸ್ತುತ ಋತುಮಾನದ ಬದಲಾವಣೆಗಳ ಮೂಲಕ ಸಾಗುತ್ತಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಿಂದಾಗಿ ಟೊಮೆಟೊ ಬೆಳೆ ಹಾನಿಯಾಗಿದೆ ಮತ್ತು ಬೇಡಿಕೆಗೆ ಹೋಲಿಸಿದರೆ ಅದರ ಪೂರೈಕೆಯೂ ಕಡಿಮೆಯಾಗಿದೆ” ಎಂದಿದ್ದಾರೆ.


ಇದನ್ನೂ ಓದಿ: Viral Video: ʼಲೇ ನಂಗೆ ಬರ್ಯಾಕ ಬರಲ್ಲʼ ಅಂಥ ಗುರುಗಳಿಗೆ ಪುಟ್ಟ ಬಾಲಕ ಅವಾಜ್; ಸ್ಟೂಡೆಂಟ್ ರಾಕ್‌.. ಟೀಚರ್‌ ಶಾಕ್..!


ರಾಜಧಾನಿ ದೆಹಲಿಯಲ್ಲಿ ತರಕಾರಿ ಮಾರಾಟಗಾರರು ವಿವಿಧೆಡೆ ಪ್ರತಿ ಕೆಜಿಗೆ 80-120 ರೂ.ಗೆ ಟೊಮೆಟೊ ಮಾರಾಟ ಮಾಡುತ್ತಿದ್ದಾರೆ. 'ಜೂನ್ 15 ರವರೆಗೆ ನಾವು ಟೊಮೆಟೊವನ್ನು ಕೆಜಿಗೆ 25-30 ರೂ.ಗೆ ಮಾರಾಟ ಮಾಡುತ್ತಿದ್ದೆವು. ಕೆಲವೇ ದಿನಗಳಲ್ಲಿ ಕೆ.ಜಿ.ಗೆ 40 ರೂ.ಗಳಾಗಿದ್ದು ನಂತರ ಕೆಜಿಗೆ 60 ಮತ್ತು 80 ರೂ.ಗೆ ತಲುಪಿತು. ಸರ್ಕಾರದ ಅಂಕಿಅಂಶಗಳ ಪ್ರಕಾರ, 2022-23 ರ ಬೆಳೆ ಋತುವಿನಲ್ಲಿ ಟೊಮೆಟೊ ಉತ್ಪಾದನೆಯು 20.62 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದೆ, ಇದು ವರ್ಷದ ಹಿಂದೆ 20.69 ಮಿಲಿಯನ್ ಟನ್‌ ಗಳಷ್ಟಿತ್ತು” ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ