ನವದೆಹಲಿ: ಛತ್ತೀಸ್‌ಗಢದಲ್ಲಿ ಮಾವೋವಾದಿ ಹಿರಿಯ ನಾಯಕ ಶಂಕರ್ ರಾವ್ ಸೇರಿದಂತೆ 29 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಛತ್ತೀಸ್‌ಗಢದ ಈ ಅತಿದೊಡ್ಡ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಬಿನಗುಂದ ಗ್ರಾಮದ ಬಳಿಯ ಹಪಟೋಲಾ ಅರಣ್ಯದಲ್ಲಿ ಗಡಿ ಭದ್ರತಾ ಪಡೆ (BSF) ಮತ್ತು ರಾಜ್ಯ ಪೊಲೀಸ್ ಜಿಲ್ಲಾ ಮೀಸಲು ಪಡೆ (DRG) ಈ ಜಂಟಿ ಕಾರ್ಯಚರಣೆ ನಡೆಸಿವೆ. ಈ ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರ ಮಧ್ಯಾಹ್ನ ನಡೆದ ಎನ್‌ಕೌಂಟರ್‌ನಲ್ಲಿ ಹಿರಿಯ ಬಂಡಾಯ ನಾಯಕ ಶಂಕರ್ ರಾವ್ ಸೇರಿದಂತೆ 29 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. AK-47 ಮತ್ತು INSAS ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 


ಇದನ್ನೂ ಓದಿ: Ram Navami : ಚುನಾವಣಾ ಪ್ರಚಾರದ ಮಧ್ಯೆಯು 'ಸೂರ್ಯ ತಿಲಕ' ಭಾವನಾತ್ಮಕ ಕ್ಷಣ ವೀಕ್ಷಿಸಿದ ಮೋದಿ


ISRO : ಭಾರತೀಯರು ಚಂದ್ರನ ಮೇಲೆ ಇಳಿಯುವವರೆಗೂ ಚಂದ್ರಯಾನ ಮುಂದುವರಿಯಲಿದೆ : ಇಸ್ರೋ ಅಧ್ಯಕ್ಷ


ಇವರು ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತಿಯಾಗಿದ್ದು, ಇದುವರೆಗೆ 44 ಮಾವೋವಾದಿಗಳನ್ನು ಕೊಂದಿದ್ದಾರೆ. ಛತ್ತೀಸ್‌ಗಢದ ಸಿಎಂ ವಿಷ್ಣು ದೇವ್‌ಸಾಯಿ ಅವರು ಈ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮಾವೋವಾದಿ ಮುಕ್ತ ಬಸ್ತಾರ್ ಪ್ರದೇಶಕ್ಕೆ ಕರೆ ನೀಡಿದ್ದು, ಪ್ರತಿಜ್ಞೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ಕಂಕೇರ್‌ನಲ್ಲಿಯೇ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಾವೋವಾದಿಗಳು ಹತರಾಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.