ಬಿಸಿಲಿನ ಧಗೆ: ಟ್ರಾಫಿಕ್ ಪೊಲೀಸರಿಗೆ AC ಹೆಲ್ಮೆಟ್!
ಸುಮಾರು 10 ಸಾವಿರಕ್ಕೂ ಅಧಿಕ ಸಂಚಾರಿ ಪೊಲೀಸರು ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಬ್ಯಾಟರಿ ಮತ್ತು ಚಿಪ್ ಆಧಾರಿತ ಹವಾ ನಿಯಂತ್ರಿತ ಹೆಲ್ಮೆಟ್ ನೀಡಲು ಯೋಜಿಸಲಾಗಿದೆ.
ರಾಯ್ಪುರ: ಬಿಸಿಲಿರಲಿ, ಮಳೆಯಿರಲಿ ತಮ್ಮ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಛತ್ತೀಸಗಡ ಸರ್ಕಾರ ಹವಾ ನಿಯಂತ್ರಿತ ಹೆಲ್ಮೆಟ್'ಗಳನ್ನು ನೀಡಲು ನಿರ್ಧರಿಸಿದೆ.
"ಮೊದಲನೆಯ ಹಂತದಲ್ಲಿ ಅಂತಹ ಎರಡು ಹೆಲ್ಮೆಟ್ ಗಳನ್ನು ಬಳಸಿ ಪರಿಶೀಲಿಸಲಾಗುವುದು. ಒಂದು ವೇಳೆ ಉತ್ತಮ ಫಲಿತಾಂಶ ದೊರೆತರೆ ಸಂಚಾರಿ ಪೊಲೀಸರಿಗೆ, ಸೆಕ್ಯೂರಿಟಿ ಗಾರ್ಡ್'ಗಳಿಗೆ ಸೇರಿದಂತೆ ಎಲ್ಲಾ ಫೀಲ್ಡ್ ಆಫೀಸರ್'ಗಳಿಗೆ ಎಸಿ ಹೆಲ್ಮೆಟ್ ನೀಡಲಾಗುವುದು" ಎಂದು ಚತ್ತೀಸ್ಘಡ ಪೊಲೀಸ್ ಮಹಾ ನಿರ್ದೇಶಕ ಡಿ.ಎಂ.ಅಶ್ವಥಿ ಗುರುವಾರ ಪಿಟಿಐಗೆ ತಿಳಿಸಿದ್ದಾರೆ.
ಸುಮಾರು 10 ಸಾವಿರಕ್ಕೂ ಅಧಿಕ ಸಂಚಾರಿ ಪೊಲೀಸರು ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಬ್ಯಾಟರಿ ಮತ್ತು ಚಿಪ್ ಆಧಾರಿತ ಹವಾ ನಿಯಂತ್ರಿತ ಹೆಲ್ಮೆಟ್ ನೀಡಲು ಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.