Trains Service: ರೈಲುಗಳ ಸೇವೆ ವಿಸ್ತರಣೆ ಎಲ್ಲೆಲ್ಲಿ, ಇಲ್ಲಿದೆ ನೋಡಿ ಡಿಟೈಲ್ಸ್!
Trains Service Expansion: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಸಲುವಾಗಿ ಈ ಕೆಳಗಿನ ರೈಲುಗಳ ಸೇವೆಯ ಸಮಯ, ನಿಲುಗಡೆ, ಬೋಗಿಗಳ ಸಂಯೋಜನೆ, ದರದಲ್ಲಿ ಯಾವುದೇ ಬದಲಾವಣೆ ಮಾಡದೆ ವಿಸ್ತರಣೆ ಮಾಡಲಾಗುತ್ತಿದೆ.
ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಸಲುವಾಗಿ ಈ ಕೆಳಗಿನ ರೈಲುಗಳ ಸೇವೆಯ ಸಮಯ, ನಿಲುಗಡೆ, ಬೋಗಿಗಳ ಸಂಯೋಜನೆ, ದರದಲ್ಲಿ ಯಾವುದೇ ಬದಲಾವಣೆ ಮಾಡದೆ ವಿಸ್ತರಣೆ ಮಾಡಲಾಗುತ್ತಿದೆ. ಅವುಗಳ ವಿವರ.
1. ಪ್ರತಿ ಸೋಮವಾರ ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07325 ಎಸ್.ಎಸ್.ಎಸ್ ಹುಬ್ಬಳ್ಳಿ - ತಂಜಾವೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಈ ಮೊದಲು ಜುಲೈ 31 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈ ರೈಲನ್ನು ಆಗಸ್ಟ್ 07 ರಿಂದ ಸೆಪ್ಟಂಬರ್ 25 ರವರೆಗೆ ವಿಸ್ತರಿಸಲಾಗುತ್ತಿದೆ.
2. ಪ್ರತಿ ಮಂಗಳವಾರ ತಂಜಾವೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07326 ತಂಜಾವೂರು - ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಈ ಮೊದಲು ಆಗಸ್ಟ್ 01 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈ ರೈಲನ್ನು ಆಗಸ್ಟ್ 08 ರಿಂದ ಸೆಪ್ಟಂಬರ್ 26 ರವರೆಗೆ ವಿಸ್ತರಿಸಲಾಗುತ್ತಿದೆ.
ಇದನ್ನೂ ಓದಿ: ಹೈಹೀಲ್ಸ್ & ಸ್ಕರ್ಟ್ ಧರಿಸಿ, ಮೈ ಬಳುಕಿಸಿ ಯುವತಿಯರಿಗೆ ಸೆಡ್ ಹೊಡೆದ ಯುವಕ; ವಿಡಿಯೋ ವೈರಲ್!
ದೌಂಡ್ – ಮನ್ಮಾಡ್ ವಿಭಾಗಗಳ ವ್ಯಾಪ್ತಿಯ ಬೇಲಾಪುರ - ಪಧೆಗಾಂವ್ ನಿಲ್ದಾಣಗಳಲ್ಲಿ ಜೋಡಿ ಮಾರ್ಗದ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ನಿಯಂತ್ರಿಸಲಾಗುತ್ತಿದೆ. ಅವುಗಳ ಮಾಹಿತಿ.
1. ಜುಲೈ 20 ಮತ್ತು 21 ರಂದು ಕೆ.ಎಸ್.ಆರ್ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12627 ಕೆ.ಎಸ್.ಆರ್ ಬೆಂಗಳೂರು- ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ವಾಡಿ, ದೌಂಡ್, ಪುಣೆ, ಲೋನಾವಾಲಾ, ಕರ್ಜತ್, ಪನ್ವೆಲ್, ಕಲ್ಯಾಣ್, ಇಗತ್‌ಪುರಿ ಮತ್ತು ಮನ್ಮಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
2. ಜುಲೈ 20 ಮತ್ತು 21 ರಂದು ಹಜರತ್ ನಿಜಾಮುದ್ದೀನ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ - ವಾಸ್ಕೋ ಡ- ಗಾಮಾ ಎಕ್ಸ್‌ಪ್ರೆಸ್ ರೈಲು ಮನ್ಮಾಡ, ಇಗತ್‌ಪುರಿ, ಕಲ್ಯಾಣ್, ಪನ್ವೆಲ್, ಕರ್ಜತ್, ಲೋನಾವಾಲಾ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
3. ಜುಲೈ 20 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12629 ಯಶವಂತಪುರ- ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಲೋನಾವಾಲಾ, ಕರ್ಜತ್, ಪನ್ವೆಲ್, ಕಲ್ಯಾಣ್ ಮತ್ತು ಮನ್ಮಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
4. ಜುಲೈ 21 ರಂದು ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 20657 ಹುಬ್ಬಳ್ಳಿ – ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಪುಣೆ, ಲೋನಾವಾಲಾ, ಕರ್ಜತ್, ಪನ್ವೆಲ್, ಕಲ್ಯಾಣ್, ಇಗತ್‌ಪುರಿ ಮತ್ತು ಮನ್ಮಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ಇದನ್ನೂ ಓದಿ: ಹೈಹೀಲ್ಸ್ & ಸ್ಕರ್ಟ್ ಧರಿಸಿ, ಮೈ ಬಳುಕಿಸಿ ಯುವತಿಯರಿಗೆ ಸೆಡ್ ಹೊಡೆದ ಯುವಕ; ವಿಡಿಯೋ ವೈರಲ್!
ರೈಲು ನಿಯಂತ್ರಣ
1. ಜುಲೈ 20 ಮತ್ತು 21 ರಂದು ನವ ದೆಹಲಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12628 ನವ ದೆಹಲಿ – ಕೆ.ಎಸ್.ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವ್ಯಾಪ್ತಿಯಲ್ಲಿ 55 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
III. ರೈಲುಗಳ ಸಮಯ ವಿಸ್ತರಣೆ
ಈ ಕೆಳಗಿನ ಕೆಲವು ರೈಲುಗಳ ನಿಲುಗಡೆಯ ಸಮಯವನ್ನು ಹೆಚ್ಚಿಸಲು ದಕ್ಷಿಣ ರೈಲ್ವೆಯು ನಿರ್ಧರಿಸಿದೆ.
1. ಜುಲೈ 20 ರಿಂದ ಕೊಯಿಮತ್ತೂರ ರೈಲು ಸಂಖ್ಯೆ 11014 ಕೊಯಿಮತ್ತೂರು - ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು ತಿರುಪ್ಪೂರ್ ನಿಲ್ದಾಣದ ನಿಲುಗಡೆ ಸಮಯವನ್ನು 3 ನಿಮಿಷ ಕಾಲ ಹೆಚ್ಚಿಸಲಾಗುತ್ತಿದೆ. ಈ ರೈಲು 09:33/09:35AM ಬದಲು 09:30/09:35AM ಗೆ ಆಗಮಿಸಿ/ನಿರ್ಗಮಿಸಲಿದೆ.
2. ಜುಲೈ 20 ರಿಂದ ತಿರುನೆಲ್ವೇಲಿ ನಿಲ್ದಾಣದಿಂದ ಪ್ರಾರಂಭಿಸುವ ರೈಲು ಸಂಖ್ಯೆ 11022 ತಿರುನೆಲ್ವೇಲಿ - ದಾದರ್ ಎಕ್ಸ್‌ಪ್ರೆಸ್‌ನ ರೈಲು ಕರೂರ್ ನಿಲ್ದಾಣದ ನಿಲುಗಡೆ ಸಮಯವನ್ನು 3 ನಿಮಿಷ ಕಾಲ ಹೆಚ್ಚಿಸಲಾಗುತ್ತಿದೆ. ಈ ರೈಲು 08:08/08:10PM ಬದಲು 08:05/08:10PMಗೆ ಆಗಮಿಸಿ/ನಿರ್ಗಮಿಸಲಿದೆ.
3. ಜುಲೈ 20 ರಿಂದ ಕನ್ಯಾಕುಮಾರಿ ನಿಲ್ದಾಣದಿಂದ ಪ್ರಾರಂಭಿಸುವ ರೈಲು ಸಂಖ್ಯೆ 16525 ಕನ್ಯಾಕುಮಾರಿ – ಕೆ.ಎಸ್.ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ನ ರೈಲು ಕೊಟ್ಟಾಯಂ ನಿಲ್ದಾಣದ ನಿಲುಗಡೆ ಸಮಯವನ್ನು 2 ನಿಮಿಷ ಕಾಲ ಹೆಚ್ಚಿಸಲಾಗುತ್ತಿದೆ. ಈ ರೈಲು 04:20/04:23PM ಬದಲು 04:20/04:25PM ಗೆ ಆಗಮಿಸಿ/ನಿರ್ಗಮಿಸಲಿದೆ.
ರೈಲುಗಳ ಸಂಖ್ಯೆ 16209/16210 ಮೈಸೂರು - ಅಜ್ಮೀರ್ - ಮೈಸೂರು ಎಕ್ಸ್‌ಪ್ರೆಸ್ ರೈಲುಗಳನ್ನು ಪಾಲ್ಘರ್ ನಿಲ್ದಾಣದ ಪ್ರಾಯೋಗಿಕ ನಿಲುಗಡೆಯನ್ನು ಆರು ತಿಂಗಳವರೆಗೆ ಈ ಹಿಂದೆ ಮಾರ್ಚ್ 31 ರಿಂದ ಜಾರಿಗೆ ಬರುವಂತೆ ಸೂಚಿಸಲಾಗಿತ್ತು. ಈ ನಿಲುಗಡೆ ಅವಧಿಯನ್ನು ಮುಂದಿನ ಆದೇಶ ಬರುವರೆಗೂ ವಿಸ್ತರಿಸಲಾಗುತ್ತಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.