ಕೊಲ್ಕತ್ತಾ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸಿದೆ. ಬಹುತೇಕ  ಗ್ರಾಮ ಪಂಚಾಯತ್ (ಜಿಪಿ) ಮತ್ತು ಪಂಚಾಯತ್ ಸಮಿತಿ (ಪಿಎಸ್) ಸ್ಥಾನಗಳಲ್ಲಿ ಪಕ್ಷವು ಮುನ್ನಡೆ ಸಾಧಿಸಿದೆ.  


COMMERCIAL BREAK
SCROLL TO CONTINUE READING

ಒಟ್ಟು 31,802 ಗ್ರಾಮ ಪಂಚಾಯತ್  ಸೀಟುಗಳಲ್ಲಿ ಟಿಎಂಸಿಯು 4,713 ಸ್ಥಾನಗಳನ್ನು ಗೆದ್ದಿದೆ ಅಲ್ಲದೆ ಮಧ್ಯಾನ 1 ಗಂಟೆಯ ವೇಳೆಗೆ 2,762 ಸೀಟುಗಳಲ್ಲಿ ಬಹುಮತವನ್ನು ಕಾಯ್ದುಕೊಂಡಿದೆ.ಬಿಜೆಪಿಯು  898 ಗ್ರಾಮ ಪಂಚಾಯತ್  ಸೀಟುಗಳನ್ನು ಗೆದ್ದಿದ್ದು 242 ಸ್ಥಾನಗಳಲ್ಲಿ  ಮುನ್ನಡೆಯನ್ನು ಗಳಿಸಿದೆ. ಆಶ್ಚರ್ಯವೆಂದರೆ , ಸ್ವತಂತ್ರ ಅಭ್ಯರ್ಥಿಗಳು 317  ಗ್ರಾಮ ಪಂಚಾಯತ್ ಗಳಲ್ಲಿ ಗೆದ್ದಿದ್ದಾರೆ.136 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಇನ್ನು ಬಹುತೇಕ ಪಂಚಾಯತ್ ಸಮಿತಿ ಸ್ಥಾನಗಳಲ್ಲಿ ಟಿಎಂಸಿಯು ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಒಟ್ಟು 621 ಜಿಲ್ಲೆಯ ಪರಿಷತ್ ಸ್ಥಾನಗಳ ಎಣಿಕೆಯು ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿದುಬಂದಿದೆ


ಚುನಾವಣೆಯಲ್ಲಿ ಉಂಟಾದ ಹಿಂಸಾಚಾರದ ಕಾರಣದಿಂದಾಗಿ 19 ಜಿಲ್ಲೆಗಳ 572 ಮತಗಟ್ಟೆಗಳಲ್ಲಿ ಪುನರ್ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ. ಈ ಮೊದಲು ಚುನಾವಣೆಯ ಸಂದರ್ಭದಲ್ಲಿ ಶೇ 73 ಶೇ ಮತದಾನ ನಡೆದಿತ್ತು.