ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಕೃಷ್ಣಗಂಜ್ ವಿಧಾನಸಭೆಯ ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ರನ್ನು ಕಿಡಿಗೇಡಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶನಿವಾರ ನಡೆದಿದೆ. 


COMMERCIAL BREAK
SCROLL TO CONTINUE READING

ನಾಡಿಯಾ ಜಿಲ್ಲೆಯ ಸರಸ್ವತಿ ಪೂಜಾ ಟೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಸ್ಥಳದಲ್ಲಿ ರಿವಾಲ್ವಾರ್ ವಶ ಪಡಿಸಿಕೊಳ್ಳಲಾಗಿದೆ. 


ಇದು ಬಿಜೆಪಿ ಕೃತ್ಯ ಎಂದು ಟಿಎಂಸಿ ಆರೋಪಿಸಿದೆ. ಆದರೆ ಆರೋಪ ನಿರಾಕರಣೆ ಮಾಡಿರುವ ಬಿಜೆಪಿ, ಇದು ಟಿಎಂಸಿ ಆಂತರಿಕ ಕಲಹದ ಪರಿಣಾಮ ಎಂದು ಹೇಳಿದೆ.


ಕೃಷ್ಣಗಂಜ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಸತ್ಯಜಿತ್ ಬಿಸ್ವಾಸ್ ರಾತ್ರಿ 8 ಗಂಟೆಗೆ ಮಾಜಿಯಾ-ಫುಲ್ಬಾರಿ ಪ್ರದೇಶದಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮಕ್ಕೆ ತೆರಳುವ ವೇಳೆ ಈ ದುಷ್ಕೃತ್ಯ ನಡೆದಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಕೃಷ್ಣಗರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿಟು, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ವರದಿಗಳು ತಿಳಿಸಿವೆ.
ಪೊಲೀಸರು ಸತ್ಯಜಿತ್ ಬಿಸ್ವಾಸ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.