Dinesh Trivedi announces resignation from Rajya Sabha : ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಮತ್ತೊಂದು ಶಾಕ್ ನೀಡಿರುವ ಪಕ್ಷದ ಹಿರಿಯ ಮುಖಂಡ ದಿನೇಶ್ ತ್ರಿವೇದಿ ಅವರು ರಾಜ್ಯಸಭಾ ಎಂಪಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ರಾಜ್ಯಸಭೆಯಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿದ ದಿನೇಶ್ ತ್ರಿವೇದಿ ಅವರು ಟಿಎಂಸಿಯಲ್ಲಿ ಉಸಿರುಗಟ್ಟಿಸುತ್ತಿದ್ದಾರೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ವಾಸ್ತವವಾಗಿ ದಿನೇಶ್ ತ್ರಿವೇದಿ ಅವರನ್ನು ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಮುಖ ನಾಯಕರೆಂದು ಪರಿಗಣಿಸಲಾಗಿದೆ. ಅವರು ಈ ಹಿಂದೆ ರೈಲ್ವೆ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ದಿನೇಶ್ ತ್ರಿವೇದಿ ಮಮತಾ ಬ್ಯಾನರ್ಜಿಗೆ ಬಹಳ ಆಪ್ತರೂ ಕೂಡ ಆಗಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಸಭಾ ಸಂಸದರಾಗಿದ್ದ ತ್ರಿವೇದಿ ಈ ಹಿಂದೆ ಪಶ್ಚಿಮ ಬಂಗಾಳದ ಬರಾಕ್‌ಪೋರ್ ಲೋಕಸಭಾ ಸ್ಥಾನದಿಂದ ಟಿಎಂಸಿ ಟಿಕೆಟ್‌ನಲ್ಲಿ ಸಂಸದರೂ ಕೂಡ ಆಗಿದ್ದರು. ಅವರು ಇಂಡೋ-ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟರಿ ಫೋರಂನ ಅಧ್ಯಕ್ಷರೂ ಆಗಿದ್ದಾರೆ. ಹಾಗಾಗಿ ಟಿಎಂಸಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ದಿನೇಶ್ ತ್ರಿವೇದಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ (West Bengal Assembly Election) ಹಿನ್ನಲೆಯಲ್ಲಿ ಪಕ್ಷಕ್ಕೆ ದೊಡ್ಡ ನಷ್ಟ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ - Mamata Banerjee: ದೀದಿ ಸೋಲಿಸದೇ ಇದ್ರೆ ರಾಜಕೀಯವನ್ನೇ ತ್ಯಜೀಸುವೆ: ಬಿಜೆಪಿ ನಾಯಕ!


2011 ರಲ್ಲಿ ಯುಪಿಎ ಸರ್ಕಾರದಲ್ಲಿ ರೈಲ್ವೆ ಬಜೆಟ್ ಮಂಡಿಸುವಾಗ ಅವರು ರೈಲು ಶುಲ್ಕವನ್ನು ಹೆಚ್ಚಿಸಿದರು. ಈ ಕಾರಣದಿಂದಾಗಿ ಮಮತಾ ಬ್ಯಾನರ್ಜಿ ತುಂಬಾ ಕೋಪಗೊಂಡರು ಮತ್ತು ಬಜೆಟ್ ಅಂಗೀಕಾರಗೊಳ್ಳುವ ಮೊದಲು ಅವರು ರೈಲ್ವೆ ಸಚಿವ ಹುದ್ದೆಯನ್ನು ತೊರೆಯಬೇಕಾಯಿತು. ಆ ಸಮಯದಲ್ಲಿ ಮಮತಾ ಬ್ಯಾನರ್ಜಿಗೆ ಆಪ್ತರು ಎಂದು ಪರಿಗಣಿಸಲ್ಪಟ್ಟಿದ್ದ ಮುಕುಲ್ ರಾಯ್ ಅವರಿಗೆ ರೈಲ್ವೆ ಸಚಿವಾಲಯವನ್ನು ನೀಡಲಾಯಿತು.


ಇದನ್ನೂ ಓದಿ - "ನನ್ನನ್ನು ಇಲ್ಲಿಗೆ ಕರೆದ ನಂತರ ಅವಮಾನಿಸಬೇಡಿ, ಇದು ರಾಜಕೀಯ ಕಾರ್ಯಕ್ರಮವಲ್ಲ'


ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ದಿನೇಶ್ ತ್ರಿವೇದಿ (Dinesh Trivedi) ಪಾಕಿಸ್ತಾನದಿಂದ ಭಾರತಕ್ಕೆ ಬಂದರು. ಅವರು ತಮ್ಮ ಆರಂಭಿಕ ಅಧ್ಯಯನವನ್ನು ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ವ್ಯಾಲೇಸ್‌ನಲ್ಲಿ ಪೂರ್ಣಗೊಳಿಸಿದರು. ನಂತರ, ರಾಮಕೃಷ್ಣ ಮಿಷನ್‌ನ ಜಾಹೀರಾತಿನಲ್ಲಿ ಸ್ವಾಮಿ ವಿವೇಕಾನಂದರ ಚಿತ್ರವನ್ನು ನೋಡಿದ ನಂತರ ಅವರು ಸನ್ಯಾಸಿಯಾಗಲು ನಿರ್ಧರಿಸಿದರು. ಆದರೆ ಕುಟುಂಬದ ಸಲಹೆಯ ನಂತರ ಮತ್ತು ಚಿಕಾಗೋದಲ್ಲಿ ಓರ್ವ ಸ್ವಾಮೀಜಿಯ ಸಲಹೆ ಮೇರೆಗೆ ಅವರು ತಮ್ಮ ಸನ್ಯಾಸಿಯಾಗುವ ಕಲ್ಪನೆಯನ್ನು ತ್ಯಜಿಸಿದನು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.