ನವ ದೆಹಲಿ: ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿದ ಸರ್ಕಾರದ ವಿರುದ್ಧ ಎಐಎಂಐಎಂ(ಆಲ್ ಇಂಡಿಯಾ ಮಜ್ಲಿಶ್-ಇ-ಇತ್ತೆಹಾದುಲ್ ಮುಸ್ಲಿಮೀನ್) ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀವ್ರ ವಿರೋಧ ವ್ಯಕ್ತಪಡಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ವಿಧೇಯಕ ಮುಸಲ್ಮಾನ ಮಹಿಳೆಯರ ಅಧಿಕಾರಕ್ಕೆ ಧಕ್ಕೆ ಬಂದಿದೆ. ಇದು ಮುಸ್ಲಿಮರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ ಓವೈಸಿ, ಈಗಾಗಲೇ ರಾಷ್ಟ್ರದಲ್ಲಿ ತ್ರಿವಳಿ ತಲಾಕ್ ಕಾನೂನು ಬಾಹಿರ ಎಂದು ಹೇಳಲಾಗಿರುವುದರಿಂದ ಸದನದಲ್ಲಿ ಮಂಡನೆ ಮಾಡುವ ಅಗತ್ಯವಿಲ್ಲ ಎಂದು ಒವೈಸಿ ಹೇಳಿದ್ದಾರೆ. 


ಅಲ್ಲದೆ, ಈ ಕಾನೂನಿನಡಿ ಸಂತ್ರಸ್ಥೆಯ ಪತಿ ಜೈಲಿಗೆ ಹೋದರೆ ಆಕೆಗೆ ಯಾವ ರೀತಿಯಲ್ಲಿ ಪರಿಹಾರ ದೊರೆಯುತ್ತದೆ ಎಂದು ಕೂಡ ಅವರು ಪ್ರಶ್ನಿಸಿದರು. 


ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಗುರುವಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕವನ್ನು ಮಂಡಿಸಿದ್ದು, ಅಸಾದುದ್ದೀನ್ ಓವೈಸಿ, ಕಾಂಗ್ರೆಸ್, ಟಿಎಂಸಿ, ಆರ್ ಜೆಡಿ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.


ತ್ರಿವಳಿ ತಲಾಕ್‌ ಮಸೂದೆ ಎಂದು ತಿಳಿಯಲ್ಪಟ್ಟಿರುವ ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯನ್ನು ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಅಂತರ ಸಚಿವಾಲಯ ಸಮೂಹವು ಸಿದ್ಧಪಡಿಸಿತ್ತು. 


ಈ ಮಸೂದೆಯು ಯಾವುದೇ ರೂಪದಲ್ಲಿ ನೀಡಲ್ಪಡುವ ತ್ರಿವಳಿ ತಲಾಕ್‌ ಅಥವಾ ತಲಾಕ್‌ ಎ ಬಿದ್ದತ್‌ ಅನ್ನು ಕಾನೂನು ಬಾಹಿರ ಮತ್ತು ಅಸಿಂಧುವೆಂದು ಪರಿಗಣಿಸುತ್ತದೆ ಮತ್ತು ತ್ರಿವಳಿ ತಲಾಕ್‌ ನೀಡುವ ಮುಸ್ಲಿಂ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನನ್ನೂ ವಿಧಿಸುತ್ತದೆ.


ಈ ಮಸೂದೆಯು ಜಮ್ಮು ಮತ್ತು ಕಾಶ್ಮಿರವನ್ನು ಹೊರತುಪಡಿಸಿ ಭಾರತದಾತಾದ್ಯಂತ ಜಾರಿಯಾಗಲಿದೆ.