ತ್ರಿಪುರಾ ಸಿಎಂ ಬಿಬ್ಲಬ್ ದೇವ್ ಹತ್ಯೆಗೆ ಯತ್ನ: ಮೂವರ ಬಂಧನ
ಸಂಜೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕಾರು ಹತ್ತಿಸಿ ಹತ್ಯೆಗೆ ಯತ್ನಿಸಲಾಗಿದೆ.
ಅಗರ್ತಲಾ: ತ್ರಿಪುರಾ ಸಿಎಂ(Tripura Chief Minister) ಬಿಪ್ಲಬ್ ದೇವ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ ಶ್ಯಾಮಪ್ರಸಾದ್ ಮುಖರ್ಜಿ ಲೇನ್‌ನಲ್ಲಿರುವ ಅವರ ಅಧಿಕೃತ ನಿವಾಸದ ಬಳಿ ಸಂಜೆ ಬಿಪ್ಲಬ್ ದೇವ್ ಅವರು ವಾಯುವಿಹಾರಕ್ಕೆ ತೆರಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಂಧಿತ ಆರೋಪಿಗಳು ದೇವ್ ಅವರ ಭದ್ರತಾ ವಲಯದ ಮೂಲಕ ಕಾರು ನುಗ್ಗಿಸಿದ್ದರು. ಹೀಗಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರಭಸವಾಗಿ ಡಿಕ್ಕಿ ಹೊಡೆಯಲು ಯತ್ನಿಸಿದ್ದ ವಾಹನದಿಂದ ಕೂಡಲೇ ಪಕ್ಕಕ್ಕೆ ಸರಿದ ಬಿಪ್ಲಬ್ ದೇವ್(Biplab Deb) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸಿಎಂ ಅವರ ಭದ್ರತಾ ಸಿಬ್ಬಂದಿ ಪೈಕಿ ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ವೇಗವಾಗಿ ದೇವ್ ಬಳಿ ನುಗ್ಗಿದ ಕಾರನ್ನು ತಡೆಯಲು ಭದ್ರತಾ ಸಿಬ್ಬಂದಿ ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ ಅಂತಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆ ಮಾತ್ರವಲ್ಲ ತಾಯಿಯ Surname ಕೂಡಾ ಮಕ್ಕಳು ಬಳಸಬಹುದು -ದೆಹಲಿ ಹೈಕೋರ್ಟ್ ತೀರ್ಪು
ಮೂವರನ್ನು ಗುರುವಾರ ತಡರಾತ್ರಿ ಕೆರ್ಚೌಮುಹನಿ ಪ್ರದೇಶದಿಂದ ಬಂಧಿಸಲಾಗಿದೆ. ವಾಹನವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಅಂತಾ ಪೊಲೀಸ(Police)ರು ತಿಳಿಸಿದ್ದಾರೆ. ಮೂವರ ವಿರುದ್ಧವೂ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಮುಖ್ಯ ನಾಯಾಧೀಶ ಪಿಪಿ ಪೌಲ್ ಎದುರು ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ 14 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: Viral Video : ತಮಾಷೆಗಾಗಿ ವರನ ಕೆನ್ನೆ ಹಿಂಡಿದ ಸ್ನೇಹಿತ, ಮುಂದೆ ಆಗಿದ್ದನ್ನು ನೋಡಿ ವಧು ಕೂಡಾ ಶಾಕ್ ..!
ಆರೋಪಿಗಳು 20 ವರ್ಷದ ವಯಸ್ಸಿನವರಾಗಿದ್ದು, ಹತ್ಯೆ ಯತ್ನದ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‘ನಾವು ಆರೋಪಿಗಳ ವಿಚಾರಣೆಗೆ 2 ದಿನಗಳ ಪೊಲೀಸ್ ಕಸ್ಟಡಿಯನ್ನು ಕೋರಿದ್ದೆವು, ಆದರೆ ನ್ಯಾಯಾಲ(High Court)ಯವು ಅವರನ್ನು ಆಗಸ್ಟ್ 19 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈಗ ಮುಖ್ಯಮಂತ್ರಿಯವರ ಭದ್ರತಾ ವಲಯದ ಮೂಲಕ ಕಾರು ಚಾಲನೆ ಮಾಡಿರುವುದರ ಹಿಂದಿನ ಉದ್ದೇಶ ತಿಳಿಯಲು ಪೊಲೀಸರು ಅವರನ್ನು ಜೈಲಿನಲ್ಲಿ ವಿಚಾರಣೆಗೊಳಪಡಿಸಲಿದ್ದಾರೆ’ ಅಂತಾ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ವಿದ್ಯುತ್ ಸೂತ್ರಧರ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ