ನವದೆಹಲಿ:ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಶುಕ್ರವಾರ ಮಾಜಿ ವಿಶ್ವ ಸುಂದರಿ ಡಯಾನಾ ಹೇಡನ್ ರವರ ಕ್ಷಮೆಯಾಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಮಾಧ್ಯಮಗಳಿಗೆ ತಿಳಿಸಿದ ಅವರು " ನಾನು ಕೈಮಗ್ಗ ವಲಯದಲ್ಲಿ ಕೆಲಸ ಮಾಡುವ ಜನರ ಕುರಿತಾಗಿ ಮಾತಾಡುತ್ತಿದ್ದೆ, ಅವರು ಕೂಡ ಮಾರುಕಟ್ಟೆ ಮಾಡಬೇಕಲ್ಲವೇ ?  ಈ ಹೇಳಿಕೆಯನ್ನು ನಾನು ಯಾರೊಬ್ಬರಿಗೂ ನೋವುಂಟು ಮಾಡಲು ಬಯಸಿದ್ದಲ್ಲ,  ಒಂದು ವೇಳೆ ಅದು ನನ್ನದಾಗಿದ್ದರೆ,ಅದಕ್ಕೆ ನಾನು  ಕ್ಷಮೆಯಾಚಿಸುತ್ತೇನೆ" ಎಂದು ಬಿಪ್ಲಾಬ್ ಕುಮಾರ್ ದೇಬ್ ತಿಳಿಸಿದರು.


ಅವರು ನಿನ್ನೆ ಅಗರ್ತಲಾದಲ್ಲಿ ವಿನ್ಯಾಸ ಕಾರ್ಯಾಗಾರದಲ್ಲಿ ಮಾತನಾಡುತ್ತಾ , ಮಾಜಿ ವಿಶ್ವ ಸುಂದರಿ ಡಯಾನಾ ಹೇಡನ್  21 ವರ್ಷಗಳ ಹಿಂದೆ ಗೆದ್ದಿರುವ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಬಗ್ಗೆ ಪ್ರಶ್ನಿಸಿದ್ದರು. ಇದೇ ವೇಳೆ ಅವರು  1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ಐಶ್ವರ್ಯಾ ರೈ, ಅವರನ್ನು ಹೊಗಳುತ್ತಾ ನಿಜವಾದ ಅರ್ಥದಲ್ಲಿ ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುತ್ತಾರೆ ಮತ್ತು ಅವರು ಪ್ರಶಸ್ತಿಗೆ ಅರ್ಹ ಎಂದು ಶ್ಲಾಘಿಸಿದ್ದರು.


ತ್ರಿಪುರಾ ಮುಖ್ಯಮಂತ್ರಿ ಅವರು ಈ ತಿಂಗಳ ಆರಂಭದಲ್ಲಿ, ಅಂತರ್ಜಾಲ ಮತ್ತು ಉಪಗ್ರಹಗಳು ಹೊಸದಲ್ಲ ಆದರೆ ಮಹಾಭಾರತ ಯುಗದಿಂದಲೂ ಅಸ್ತಿತ್ವದಲ್ಲಿದ್ದವು ಎಂದು ವಿವಾದ ಹುಟ್ಟುಹಾಕಿದ್ದರು.