ತ್ರಿಪುರಾ:ಯುವಜನರ ನಿರ್ಲಕ್ಷ್ಯದಿಂದಲೇ ಎಡಪಕ್ಷಗಳಿಗೆ ಸೋಲು- ಸಿಪಿಎಂ ವಿಶ್ಲೇಷಣೆ
ನವದೆಹಲಿ:ತ್ರಿಪುರಾದಲ್ಲಿ ಯುವಜನರನ್ನು ನಿರ್ಲಕ್ಷ್ಯ ಮಾಡಿದ್ದರಿಂದಾಗಿ ಎಡಪಕ್ಷಗಳಿಗೆ ಚುನಾವಣೆಯಲ್ಲಿ ಸೋಲು ಉಂಟಾಗಿದೆ ಎಂದು ಸಿಪಿಎಂ ಪಕ್ಷವು ವಿಶ್ಲೇಷಣೆ ಮಾಡಿದೆ.
ಯುವಜನರಿಗೆ ಹೆಚ್ಚು ಉದ್ಯೋಗ ಅವಕಾಶ ಇಲ್ಲದೆ ಇರುವ ಕಾರಣಕ್ಕಾಗಿ ಯುವಜನರು ಬಿಜೆಪಿ ಪರವಾಲಿದ್ದಾರೆ ಎಂದು ಹೇಳಲಾಗಿದೆ. ಸರಕಾರಿ ಉದ್ಯೋಗವನ್ನು ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿರುತ್ತದೆ. ಆದರೆ ಅದಕ್ಕೆ ಸೀಮಿತವಾದ ಅಡೆತಡೆ ಇದೆ ಎನ್ನುವುದು ವಾಸ್ತವದ ಸಂಗತಿ ಎಂದು ಅದು ತಿಳಿಸಿದೆ.
ಚುನಾವಣೆಯ ಸೋಲಿನ ಈ ಕುರಿತು ಸಿಪಿಎಂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಪಕ್ಷದ ಮುಖಾವಾಣಿಯ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಈ ಬಾರಿಯ ಯುವಜನರನ್ನು ಎಡಪಕ್ಷಗಳು ಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಎಡಪಕ್ಷಗಳು ಕೇವಲ 16 ಸ್ಥಾನಗಳಿಗೆ ತೃಪ್ತಿ ಪಡುವಂತಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.