ಭಕ್ತಾಧಿಗಳ ಗಮನಕ್ಕೆ : ತಿರುಪತಿ ದೇಗಲುದ ವಸತಿ ನಿಲಯಗಳ ದರ ಏರಿಕೆ..!
ತಿರುಪತಿ ತಿರುಮಲಕ್ಕೆ ಪ್ರತಿ ದಿನ ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತಿರುಪತಿ ದೇವಸ್ಥಾನವು ಭಕ್ತರಿಗೆ ವಸತಿ ಸೌಕರ್ಯ ಕಲ್ಪಿಸಲು ಕಡಿಮೆ ದರದಲ್ಲಿ ವಸತಿ ನಿಲಯಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದುವರೆಗೆ ತೀರಾ ಕಡಿಮೆ ಇದ್ದ ತಿರುಪತಿ ತಿರುಮಲ ವಸತಿ ನಿಲಯದ ದರವನ್ನು ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಹೆಚ್ಚಿಸಿದೆ.
Tirupati : ತಿರುಪತಿ ತಿರುಮಲಕ್ಕೆ ಪ್ರತಿ ದಿನ ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತಿರುಪತಿ ದೇವಸ್ಥಾನವು ಭಕ್ತರಿಗೆ ವಸತಿ ಸೌಕರ್ಯ ಕಲ್ಪಿಸಲು ಕಡಿಮೆ ದರದಲ್ಲಿ ವಸತಿ ನಿಲಯಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದುವರೆಗೆ ತೀರಾ ಕಡಿಮೆ ಇದ್ದ ತಿರುಪತಿ ತಿರುಮಲ ವಸತಿ ನಿಲಯದ ದರವನ್ನು ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಹೆಚ್ಚಿಸಿದೆ.
ಕಳೆದ 30 ವರ್ಷಗಳಿಂದ ಬಾಡಿಗೆ ಹೆಚ್ಚಳ ಮಾಡದ ಕಾರಣ ಇದೀಗ ವಸತಿ ನಿಲಯಗಳ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ವಿವರಿಸಿದೆ. ಆದ್ದರಿಂದ, ಯಾತ್ರಿಕರು ವಸತಿ ಶುಲ್ಕ ಎಷ್ಟು ಎಂದು ತಿಳಿಯುವುದು ಮುಖ್ಯ. ಪ್ರತಿ ದಿನ ಸುಮಾರು 30 ಲಕ್ಷ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ಉಚಿತ ದರ್ಶನ, ವಿಶೇಷ ದರ್ಶನದಲ್ಲಿ ಅವರು ದರ್ಶನ ಪಡೆಯಬಹುದು. ತಿರುಪತಿ ದೇವಸ್ಥಾನವು ಈಗಿರುವ ದರ್ಶನ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ತಿರುಮಲದ ವಿವಿಧ ವಸತಿ ನಿಲಯಗಳ ಶುಲ್ಕವನ್ನು ಹೆಚ್ಚು ಮಾಡಿದೆ.
ಸೈಕಲ್ ಮೇಲಿಂದ ಬಿದ್ದ ವೃದ್ಧ ಶಿಕ್ಷಕನನ್ನು ಥಳಿಸಿದ ಪೊಲೀಸ್..! ಆʼರಕ್ಷಕʼರಾ ಇವರು..
ಇತ್ತೀಚಿಗೆ ತಿರುಪತಿ ದೇವಸ್ಥಾನದಲ್ಲಿ ಭದ್ರತಾ ಲೋಪ ಕಂಡು ಬಂದಿತ್ತು. ತಿರುಮಲ ತಿರುಪತಿ ದೇವಸ್ಥಾನದ ಆವರಣದಲ್ಲಿ ಕೆಲವರು ಡ್ರೋನ್‌ಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ. ಕೆಲ ದಿನಗಳ ಹಿಂದೆ ಚಿತ್ರೀಕರಣ ಮಾಡಲಾಗಿದೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ಥಳೀಯರು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದರು.
ಮತ್ತೊಂದೆಡೆ, ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಯವರು ಟಿಟಿಡಿ ಆವರಣದಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. ಘಟನೆಯ ಕುರಿತು ಟಿಟಿಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದರು. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.