ಇಪಿಎಸ್-ಓಪಿಎಸ್ ಬಣಕ್ಕೆ ಎರಡೆಲೆ ಚಿಹ್ನೆ: ಸುಪ್ರೀಂಗೆ ಟಿಟಿವಿ ದಿನಕರನ್ ಮೊರೆ
ಎಐಡಿಎಂಕೆ ಇಪಿಎಸ್(ಇ.ಕೆ ಪಳನಿಸ್ವಾಮಿ) -ಓಪಿಎಸ್(ಓ.ಪನ್ನೀರಸೆಲ್ವಂ) ಬಣಕ್ಕೆ ದೆಹಲಿ ಹೈಕೋರ್ಟ್ ಎರಡೆಲೆ ಚಿಹ್ನೆ ನೀಡಿರುವ ನಿರ್ಧಾರವನ್ನು ಪ್ರಶ್ನಿಸಿ ಈಗ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದಾರೆ.
ನವದೆಹಲಿ: ಎಐಡಿಎಂಕೆ ಇಪಿಎಸ್(ಇ.ಕೆ ಪಳನಿಸ್ವಾಮಿ) -ಓಪಿಎಸ್(ಓ.ಪನ್ನೀರಸೆಲ್ವಂ) ಬಣಕ್ಕೆ ದೆಹಲಿ ಹೈಕೋರ್ಟ್ ಎರಡೆಲೆ ಚಿಹ್ನೆ ನೀಡಿರುವ ನಿರ್ಧಾರವನ್ನು ಪ್ರಶ್ನಿಸಿ ಈಗ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದಾರೆ.
ಕಳೆದ ತಿಂಗಳು 2017 ರಲ್ಲಿ ಚುನಾವಣಾ ಆಯೋಗವು ಇಪಿಎಸ್ -ಓಪಿಎಸ್ ಬಣಕ್ಕೆ ಎರಡೆಲೆ ಚಿಹ್ನೆಯನ್ನು ನೀಡಿತ್ತು, ಇದೇ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಸಹಿತ ಎತ್ತಿ ಹಿಡಿದಿತ್ತು. ಆದರೆ ಈಗ ಈ ನಿರ್ಧಾರವನ್ನು ಪ್ರಶ್ನಿಸಿ ಅವರು ಸುಪ್ರೀಂ ಮೆಟ್ಟಿಲೆರಿದ್ದಾರೆ. ಸದ್ಯ ಅಮ್ಮ ಮಕ್ಕಳ ಮುನ್ನೇತ್ರ ಕಜಗಂ ಪಕ್ಷದ ನೇತೃತ್ವವನ್ನು ವಹಿಸಿರುವ ದಿನಕರನ್, ದೆಹಲಿ ಹೈಕೋರ್ಟ್ ಮತ್ತು ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಿದ್ದಾರೆ ಎನ್ನಲಾಗಿದೆ.
ದಿನಕರನ್ ಹೇಳುವಂತೆ 1968 ರ ಆದೇಶದನ್ವಯ ಎರಡೆಲೆ ಚಿಹ್ನೆಯನ್ನು ತಾವು ಹೊಂದಲು ಅವಕಾಶವಿದೆ. ಇದಕ್ಕೆ ಪೂರಕವಾಗಿ ತಾವು ಸಂಪೂರ್ಣ ಬಹುಮತ ಹೊಂದಿರುವುದಾಗಿ ಹೇಳಿದ್ದಾರೆ.ಅಲ್ಲದೆ ಪಕ್ಷದ ಸಂವಿಧಾನದ ಪ್ರಕಾರ ತಾವು ಪಕ್ಷವನ್ನು ಎಲ್ಲ ರೀತಿಯಿಂದಲೂ ಪ್ರತಿನಿಧಿಸುವುದಾಗಿ ಹೇಳಿದ್ದಾರೆ.ಚುನಾವಣಾ ಆಯೋಗವು ಚಿಹ್ನೆಯನ್ನು ನೀಡುವ ವಿಚಾರವಾಗಿ ಚುನಾವಣಾ ಆಯೋಗವು ನಡೆಸಿದ ಪ್ರಕ್ರಿಯೆ ಬಗ್ಗೆ ದಿನಕರನ್ ಆಕ್ಷೇಪ ವ್ಯಕ್ತಪಡಿಸಿದರು. ಚುನಾವಣಾ ಆಯೋಗವು ಉದ್ದೇಶ ಪೂರಕವಾಗಿ ಇಪಿಎಸ್-ಓಪಿಎಸ್ ಬಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಲವಾರು ಪರೀಕ್ಷೆ ಗಳನ್ನು ನಡೆಸಿದೆ ಎಂದು ಅವರು ವಾದಿಸಿದ್ದಾರೆ.