Jammu Blast :ʼಭಾರತ್ ಜೋಡೋ ಯಾತ್ರೆʼ ಜಮ್ಮ & ಕಾಶ್ಮೀರ ಪ್ರವೇಶಿಸುತ್ತಿದ್ದಂತೆ ʼನಿಗೂಢ ಸ್ಟೋಟʼ : 6 ಮಂದಿಗೆ ಗಾಯ
Twin Blast in Jammu : ಶನಿವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ನರ್ವಾಲ್‌ನಲ್ಲಿ ಎರಡು ನಿಗೂಢ ಸ್ಫೋಟಗಳು ವರದಿಯಾಗಿವೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸುತ್ತಿದ್ದಂತೆ ಈ ಘಟನೆ ನಡೆದಿದ್ದು, ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
Jammu and Kashmir explosion : ಶನಿವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ನರ್ವಾಲ್‌ನಲ್ಲಿ ಎರಡು ನಿಗೂಢ ಸ್ಫೋಟಗಳು ವರದಿಯಾಗಿವೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸುತ್ತಿದ್ದಂತೆ ಈ ಘಟನೆ ನಡೆದಿದ್ದು, ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ನಿಗೂಢ ಸ್ಫೋಟ ಹಿನ್ನೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದೆ. ಎರಡು ಸ್ಫೋಟಗಳ ನಡುವೆ 30 ನಿಮಿಷಗಳ ಅಂತರವಿತ್ತು ಎಂದು ವರದಿಯಾಗಿದೆ. ಮೊದಲ ಸ್ಫೋಟವು 11:00 ಗಂಟೆಗೆ ಸಂಭವಿಸಿತು, ಎರಡನೆಯದು ಸುಮಾರು 11:30 ಕ್ಕೆ ಸಂಭವಿಸಿದೆ. 15 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳಲ್ಲಿ ಏಳು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಾಯಾಳುಗಳನ್ನು ದಾಖಲಿಸಲಾಗಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ನಡೆಯುವ 74ನೇ ಗಣರಾಜ್ಯೋತ್ಸವ ಪರೇಡ್ ನೋಡಬೇಕೆ : ಈ ರೀತಿ ಟಿಕೆಟ್ ಬುಕ್ ಮಾಡಿ..!
ಇತ್ತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸಹ ಜಮ್ಮು ಕಾಶ್ಮೀರ ಪ್ರವೇಶಿಸಿದೆ. ಅಲ್ಲದೆ, 74ನೇ ಗಣರಾಜ್ಯೋತ್ಸವ ಹತ್ತಿರವಾಗುತ್ತಿದೆ. ಇದರ ನಡುವೆ ಈ ಅವಳ ಸ್ಫೋಟಗಳು ಸಂಭವಿಸಿದ್ದು, ಮುಂಜಾಗೃತ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಸ್ಫೋಟದಲ್ಲಿ ಐವರು ಮತ್ತು ಎರಡನೇ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇಂಡಿಯಾ ಟುಡೇ ಪ್ರಕಾರ, ಬೊಲೆರೊ ಕಾರು ಮತ್ತು ಚೆವ್ರಾನ್ ಕಾರಿನಲ್ಲಿ ಬಾಂಬ್‌ಗಳನ್ನು ಇರಿಸಲಾಗಿತ್ತು. ಒಂದು ದಿನದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮಾಜಿ ಶಾಸಕರೊಬ್ಬರ ಮನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಶುಕ್ರವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಲಸ್ಸಾನ ಗ್ರಾಮದ ಅವರ ಮನೆಯ ಹಲವು ಕೊಠಡಿಗಳ ಸೀಲಿಂಗ್‌ಗೆ ಛಿದ್ರ ಛಿದ್ರಗೊಂಡಿದ್ದರಿಂದ ಅವರ ಕುಟುಂಬ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಸುರನ್‌ಕೋಟೆ ಮಾಜಿ ಶಾಸಕ ಮತ್ತು ಪ್ರಮುಖ ಗುಜ್ಜರ್ ನಾಯಕ ಚೌಧರಿ ಮೊಹಮ್ಮದ್ ಅಕ್ರಮ್ ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.