ನವದೆಹಲಿ: ಟ್ವಿಟರ್ ತನ್ನ ಬಳಕೆದಾರರಿಗಾಗಿ ಮತ್ತೊಂದು ಅದ್ಭುತ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ನೂತನ ವೈಶಿಷ್ಟ್ಯದ ಸಹಾಯದಿಂದ ಟ್ವಿಟ್ಟರ್ ಬಳಕೆದಾರರು ತಮ್ಮ ಟ್ವೀಟ್‌ಗಳಿಗೆ ಯಾರು ಪ್ರತ್ಯುತ್ತರ ನೀಡಬೇಕು ಹಾಗೂ ಯಾರು ನೀಡಬಾರದು ಎಂಬುದನ್ನು  ನಿರ್ಧರಿಸಲು ಸಾಧ್ಯವಾಗಲಿದೆ. . ಈ ಹೊಸ ವೈಶಿಷ್ಟ್ಯವು ಭಾರತ ಸೇರಿದಂತೆ ಇಡೀ ವಿಶ್ವದ ಇತರೆ ದೇಶಗಳಿಗೆ ಇದೀಗ ಲಭ್ಯವಾಗಿದೆ. ಈ ವೈಶಿಷ್ಟ್ಯದ ವಿಶೇಷತೆ ಎಂದರೆ, ಇದನ್ನು ಬಳಸಿ ಟ್ವಿಟರ್ ಬಳಕೆದಾರರು ಕೆಲವರನ್ನು ತಮ್ಮ ಟ್ವೀಟ್‌ಗಳಿಗೆ ಪ್ರತ್ಯುತ್ತರಿಸುವುದನ್ನು ನಿರ್ಬಂಧಿಸಬಹುದು. ಆದರೆ ಕಾಮೆಂಟ್‌ ಮಾಡುವುದರಿಂದ ಅಥವಾ ನೋಡುವುದರಿಂದಾಗಲಿ ಅಥವಾ ರೀಟ್ವೀಟ್ ಮಾಡುವುದರಿಂದಾಗಲಿ, ಲೈಕ್ ಮಾಡುವುದರಿಂದಾಗಲಿ  ಮತ್ತು ಹಂಚಿಕೊಳ್ಳುವುದರಿಂದಾಗಲಿ ತಡೆಯಲು ಸಾಧ್ಯವಿಲ್ಲ.


COMMERCIAL BREAK
SCROLL TO CONTINUE READING

ಯಾರು ರಿಪ್ಲೈ ಮಾಡಬೇಕು ಹೀಗೆ ಆಯ್ಕೆ ಮಾಡಿ


  1. ಫೋನ್ ಅಥವಾ ಡೆಸ್ಕ್ ಟಾಪ್ ಮೇಲೆ ಟ್ವಿಟ್ಟರ್ ಓಪನ್ ಮಾಡಿ

  2. ಕಂಪೋಸ್ ಟ್ವೀಟ್ ನಲ್ಲಿರುವ ಗ್ಲೋಬ್ ಐಕಾನ್ ಮೇಲೆ ಕ್ಲಿಕ್ಕಿಸಿ. ಇದರಲ್ಲಿ ರಿಪ್ಲೈ ಮಾಡಲು ಬಯಸುವವರ ಕುರಿತು ಮೂರು ಆಪ್ಶನ್ ಗಳು ಸಿಗಲಿವೆ. 1. ಎಲ್ಲರು 2. ನೀವು ಫಾಲ್ಲೋ ಮಾಡುವವರನ್ನು  ಹಾಗೂ 3. ನೀವು ಮೆನ್ಶನ್ ಮಾಡಬಯಸುವವರು ಮಾತ್ರ.

  3. ನಿಮ್ಮ ವಿಕಲ್ಪ ಆಯ್ಕೆಯ ನಂತರ ನೀವು ಟ್ವೀಟ್ ಮಾಡಬಹುದು. ಟ್ವೀಟ್ ಒಮ್ಮೆ ಪೋಸ್ಟ್ ಆದ ಬಳಿಕ ನೀವು ರಿಪ್ಲೈ ಸೆಟ್ಟಿಂಗ್ಸ್ ಗಳನ್ನು ಬದಲಾಯಿಸಲು ಸಾಧ್ಯವಿಲ್ಲ.


ಯಾರಿಗೆ ರಿಪ್ಲೈ ಮಾಡಬೇಕು ಎಂಬುದನ್ನು ಹೇಗೆ ಆಯ್ಕೆ ಮಾಡಬೇಕು
ಕಂಪೋಜ್ ಸ್ಕ್ರೀನ್ ನಲ್ಲಿ ನೀವು ಡೈಲಾಗ್ ನಲ್ಲಿ ನೀವು ಉತ್ತರಿಸಬೇಕಾದ ವ್ಯಕ್ತಿಗಳನ್ನು ನೋಡುವಿರಿ. Replay to ಆಯ್ಕೆಯ ಮೇಲೆ ಕ್ಲಿಕ್ಕಿಸಿ, ಎಡಿಟಿಂಗ್ ಸ್ಕ್ರೀನ್ ಬರಮಾಡಿಕೊಳ್ಳಿ. ಅದರಲ್ಲಿ ಡೈಲಾಗ್ ನಲ್ಲಿ ಪಾಲ್ಗೊಂಡ ವ್ಯಕ್ತಿಗಳ ಪಟ್ಟಿ ಇರಲಿದೆ. ಆದರೆ ಇದರಲ್ಲಿ ಡೈಲಾಗ್ ನಲ್ಲಿ ಶಾಮೀಲಾದ ಕೇವಲ 50 ಜನರ ಪಟ್ಟಿ ಮಾತ್ರ ಇರಲಿದೆ. ಇತರ ವ್ಯಕ್ತಿಗಳನ್ನು ನಿಮ್ಮ ಡೈಲಾಗ್ ನಲ್ಲಿ ಜೋಡಿಸಲು ಅವರ ಯುಸರ್ ನೆಮ್ ಅನ್ನು ನಿಮ್ಮ ಟ್ವೀಟ್ ನಲ್ಲಿ ಟೈಪ್ ಮಾಡಿ. ನೀವು ಬ್ಲಾಕ್ ಮಾಡಿದ ವ್ಯಕ್ತಿಗಳು ರೆಸಿಪಿಯಂಟ ಲಿಸ್ಟ್ ನಲ್ಲಿಯೂ ಕೂಡ ಬ್ಲಾಕ್ದ್ ಇಂಡಿಕೆಟರ್ ಮೂಲಕ ಕಾಣಿಸಿಕೊಳ್ಳಲಿದ್ದಾರೆ.