ನವದೆಹಲಿ: ಆತ್ಮಹತ್ಯೆ, ಶೂಟಿಂಗ್ ಸೇರಿದಂತೆ ಇತರ ಅಪರಾಧಗಳನ್ನು ಫೇಸ್ಬುಕ್ ಲೈವ್ ಮಾದಿರುವ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೀಗ ಮತ ಚಲಾಯಿಸುವುದನ್ನು ಫೇಸ್ಬುಕ್ ಲೈವ್ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರ ನಡೆದ ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನದಲ್ಲಿ ಪಂಜಾಬಿನ ಮೊಹಾಲಿಯಲ್ಲಿ ಈ ಘಟನೆ ನಡೆದಿದ್ದು, ತಾವು ಮತ ಚಲಾಯಿಸುವುದನ್ನು ಫೇಸ್ಬುಕ್ ಲೈವ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಕಾಳಿಯಾ, ಬಿಜೆಪಿ ನಾಯಕ ಭಾನು ಪ್ರತಾಪ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನು ಪ್ರಕಾಶ್ ಮೊಹಾಲಿಯ ಕುರಾಲಿ ಮಿನಿಸಿಪಾಲ್ ಕೌನ್ಸಿಲ್ ನ ವಾರ್ಡ್ ನಂ.3ರ ಕೌನ್ಸಿಲರ್ ಎನ್ನಲಾಗಿದೆ. 


ಕಾಳಿಯಾ ಅವರು ಆನಂದಪುರ್ ಸಾಹಿಬ್ ಕ್ಷೇತ್ರದ ಖಾರಾರ್ ವಿಭಾಗದಲ್ಲಿ ಬೂತ್ ಸಂಖ್ಯೆ 150 ರಲ್ಲಿ ಮತ ಚಲಾಯಿಸುತ್ತಿರುವ ವೀಡಿಯೊವನ್ನು ಫೇಸ್ಬುಕ್ ಲೈವ್ನಲ್ಲಿ ಅಪ್ಲೋಡ್ ಮಾಡಿದ್ದರು. ವಿಷಯ ತಿಳಿದ ಪೊಲೀಸರು ಕೂಡಲೇ ಅವರಿಬ್ಬರಿಗೂ ವೀಡಿಯೋ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಬಳಿಕ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. 


ಈ ಘಟನೆಯ ವರದಿಯಾದ ಬಳಿಕರ, ಚುನಾವಣಾ ಆಯೋಗದ ಪ್ರಿಸೈಡಿಂಗ್ ಆಫೀಸರ್ ಜೋಗಿಂದರ್ ಸಿಂಗ್ ಅವರ ಕರ್ತವ್ಯದಿಂದ ತೆಗೆದುಹಾಕಲಾಗಿದೆ.