ನವದೆಹಲಿ: ಜನವರಿ 2 ರಂದು ಉತ್ತರಪ್ರದೇಶದ ಬುಲಂದಶಹರ್ ಜಿಲ್ಲೆಯ ಚಂದ್ಪುರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಕ್ಕೆ ಸಂಬಂಧಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಜುಲ್ಫಿಕಾರ್ ಮತ್ತು ದಿಲ್ಶಾದ್ ಇಬ್ಬರು ಸಿಖಂದ್ರಾಬಾದ್ ಪಟ್ಟಣದವರಾಗಿದ್ದಾರೆ. ಇಬ್ಬರನ್ನು ಬಂಧಿಸಲಾಯಿತು ಆದರೆ ಅವರ ಇನ್ನೊಬ್ಬ ಸಹೋದ್ಯೋಗಿ ಇಸ್ರೇಲ್ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.


ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರಗೊಳಿಸಿ ನಂತರ ಅವಳ ದೇಹವನ್ನು  ಜಿಬಿ ನಗರ ಜಿಲ್ಲೆಯ ಬೀಲ್ ಅಕ್ಬರ್ಪುರ್ ಎಂಬ ಹಳ್ಳಿಯಲ್ಲಿ ಎಸೆದುಹೊಗಿದ್ದರು.


ಎಸ್ಎಸ್ಪಿ ಮುನಿರಾಜ್ ಜಿ ಪ್ರಕಾರ, ಈ ಪ್ರಕರಣದಲ್ಲಿ ಆರೋಪಿಗಳು ಬಳಸಿದ ಮಾರುತಿ ಆಲ್ಟೊ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಇತರ ಹುಡುಗಿಯರನ್ನು ಕೂಡಾ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಅವರು ರಸ್ತೆಬದಿಯ ತಿನಿಸುಗಳನ್ನು ತಿನ್ನಲು ಬರುತ್ತಿದ್ದ ಹುಡುಗಿಯರನ್ನು ಗುರಿಯಾಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.