ನವದೆಹಲಿ: Two Child Polity In Assam - ಅಸ್ಸಾಂನಲ್ಲಿ (Assam) ಎರಡಕ್ಕಿಂತ ಹೆಚ್ಚುಮಕ್ಕಳಿರುವ ತಂದೆ-ತಾಯಿಯರು ಸರ್ಕಾರಿ ಯೋಜನೆಯ ಲಾಭಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಈ ಕುರಿತು ಶನಿವಾರ ಹೇಳಿಕೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರ್ಮಾ (Assam CM Himanta Biswa Sarma), ಆಸಾಂನಲ್ಲಿ ರಾಜ್ಯ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ರಾಜ್ಯ ಸರ್ಕಾರ ಹಂತ ಹಂತವಾಗಿ 'ಎರಡು ಮಕ್ಕಳ ನೀತಿಯನ್ನು' (Two Children Policy) ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ (Central Government Schemes) ಪ್ರಸ್ತುತ ಇದು ಸಂಭವವಿಲ್ಲ, ಆದರೆ, ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಶನಿವಾರ ಮಾಧ್ಯಮಗೋಷ್ಠಿಯೊಂದರಲ್ಲಿ ಮಾತನಾಡಿರುವ ಸರ್ಮಾ, ಅಸ್ಸಾಂನಲ್ಲಿ ಪ್ರಸ್ತಾವಿತ 'ಜನಸಂಖ್ಯಾ ನಿಯಂತ್ರಣ ನೀತಿ' ತಕ್ಷಣವೆ ಎಲ್ಲ ಯೋಜನೆಗಳಿಗೆ ಜಾರಿ ಸಂಭವವಿಲ್ಲ, ಏಕೆಂದರೆ ಪ್ರಸ್ತುತ ಕೆಲವು ಯೋಜನೆಗಳನ್ನು ಕೇಂದ್ರ ಸರ್ಕಾರದ ಮೂಲಕ ನಿರ್ವಹಿಸಲಾಗುತ್ತಿದೆ. 'ಇಂತಹ ಹಲವು ಯೋಜನೆಗಳಿದ್ದು,  ಅವುಗಳಲ್ಲಿ ನಾವು ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಉದಾಹರಣೆಗೆ ಶಾಲೆಗಳು ಹಾಗೂ ಕಾಲೇಜುಗಳಿಗೆ ಉಚಿತ ಶಿಕ್ಷಣ ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಇತ್ಯಾದಿ. ಆದರೆ, ಒಂದು ವೇಳೆ ರಾಜ್ಯ ಸರ್ಕಾರ ಆವಾಸ್ ಯೋಜನೆಯನ್ನು ಆರಂಭಿಸಿದರೆ, ಅದಕ್ಕೆ ಎರಡು ಮಕ್ಕಳ ನೀತಿಯನ್ನು ಕಡ್ಡಾಯವಾಗಿ ಜಾರಿಗೆ ತರಲಾಗುವ ಸಾಧ್ಯತೆ ಇದೆ. ಕ್ರಮೇಣ ಮುಂದುವರೆದು ಇದನ್ನು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳಿಗೆ ಕಡ್ಡಾಯಗೊಳಿಸಲಾಗುವುದು' ಎಂದು ಸರ್ಮಾ ಹೇಳಿದ್ದಾರೆ.


ಈ ವೇಳೆ ತಮ್ಮ ಕುಟುಂಬದ ಆಕಾರ ಹಾಗೂ ತಂದೆ-ತಾಯಿಯರನ್ನು ಗುರಿಯಾಗಿಸಿ ಮಾತನಾಡುವ ಪ್ರತಿಪಕ್ಷಗಳ ಮೇಲೆ ಮುಖ್ಯಮಂತ್ರಿಗಳು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಮಾ ಐದು ಸಹೋದರರನ್ನು ಹೊಂದಿರುವ ಕುಟುಂಬದಿಂದ ಬಂದವರಾಗಿದ್ದಾರೆ. ಇದಕ್ಕೆ ಸಂಬಂದಿಸಿದಂತೆ ಹೇಳಿಕೆ ನೀಡಿರುವ ಸರ್ಮಾ '1970ರ ದಶಕಲ್ಲಿ ತಮ್ಮ ತಂದೆ ತಾಯಿ ಅಥವಾ ಇತರೆ ಜನರು ಏನು ಮಾಡಿದರು ಈ ಕುರಿತು ಮಾತನಾಡುವುದರಲ್ಲಿ ಯಾವುದೇ ಅರ್ಥ ಇಲ್ಲ. ಇಂತಹ ಚಿತ್ರ ವಿಚಿತ್ರ ಸಂಗತಿಗಳನ್ನು ಪ್ರಸ್ತುತ ಪಡಿಸುವ ಮೂಲಕ ಪ್ರತಿಪಕ್ಷಗಳು ನಮ್ಮನ್ನು 70ರ ದಶಕಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸಿವೆ' ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸರ್ಮಾ ಅವರು ರಾಜ್ಯದಲ್ಲಿ ಎರಡು ಮಕ್ಕಳ ನೀತಿಯ ಕುರಿತು ತಮ್ಮ ವಾದ ಮಂಡಿಸುತ್ತಲೇ ಇದ್ದಾರೆ.


ಇದನ್ನೂ ಓದಿ- ಸಂಕಷ್ಟದಲ್ಲಿರುವ ಮಕ್ಕಳಿಗೆ ಆರ್ಥಿಕ ನೆರವು ನೀಡಲು ಮುಂದಾದ ದೆಹಲಿ ಸರ್ಕಾರ


ಜೂನ್ 10 ರಂದು ಶರ್ಮಾ ಮೂರು ಜಿಲ್ಲೆಗಳಲ್ಲಿ ಇತ್ತೀಚೆಗೆ ಹೊರಹಾಕಲ್ಪಟ್ಟ ಬಗ್ಗೆ ಮಾತನಾಡುತ್ತಾ, ಅಲ್ಪಸಂಖ್ಯಾತ ಸಮುದಾಯವು ಬಡತನವನ್ನು ಕಡಿಮೆ ಮಾಡಲು ಜನಸಂಖ್ಯಾ ನಿಯಂತ್ರಣದ ಬಗ್ಗೆ "ಸಹಾನುಭೂತಿಯ ಕುಟುಂಬ ಯೋಜನೆ ನೀತಿ" ಯನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು. ವಲಸೆ ಬಂದ ಮುಸ್ಲಿಂ ಸಮುದಾಯವು ದೊಡ್ಡ ಕುಟುಂಬಗಳನ್ನು ಹೊಂದಿದೆ ಎಂದು ಶರ್ಮಾ ದೂಷಿಸಿದ್ದರು, ಇದಕ್ಕೆ ಎಐಯುಡಿಎಫ್ ಸೇರಿದಂತೆ ವಿವಿಧ ಕಡೆಗಳಿಂದ  ತೀವ್ರ ಪ್ರತಿಕ್ರಿಯೆಗೆ ಗುರಿಯಾಗಿತ್ತು.


ಇದನ್ನೂ ಓದಿ-3T+V Formula: ಲಾಕ್ ಡೌನ್ ಸಡಿಲಿಕೆ ದುಬಾರಿ ಬೀಳದಿರಲಿ, ರಕ್ಷಣೆಗಾಗಿ ಕೇಂದ್ರದಿಂದ ರಾಜ್ಯಗಳಿಗೆ 3T+V ಫಾರ್ಮುಲಾ


ಅಸ್ಸಾಂ ನಲ್ಲಿ 2018ರಲ್ಲಿ ಅಸ್ಸಾಂ ಪಂಚಾಯತ್ ಕಾನೂನು, 1904ರಲ್ಲಿ ಮಾಡಲಾಗಿರುವ ತಿದ್ದುಪಡಿಯಾ ಅನುಸಾರ ಪಂಚ್ಯಾಯತ್  ಚುನಾವಣೆಗಳನ್ನು ಸ್ಪರ್ಧಿಸಲು ಕನಿಷ್ಟೇ ವಿದ್ಯಾರ್ಹತೆ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಶೌಚಾಲಯದ ಜೊತೆಗೆ ಎರಡು ಮಕ್ಕಳ ಮಾನದಂಡಗಳು ಜಾರಿಯಲ್ಲಿವೆ.  ಈ ವೇಳೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (AIUDF) ಮುಖ್ಯಸ್ಥ ಹಾಗೂ ಸಂಸದ ಬದರುದ್ದೀನ್ ಅಜ್ಮಲ್ ಅವರು ಮಹಿಳಾ ಶಿಕ್ಷಣಕ್ಕೆ ನೀಡಲಾಗುತ್ತಿರುವ ಉತ್ತೇಜನದ ಪ್ರಶಂಸೆ ಮಾಡಿದ್ದು,  ಇದು ಜನಸಂಖ್ಯಾ ನಿಯಂತ್ರಣದ ಜೊತೆಗೆ ನೇರ ಸಂಬಂಧ ಹೊಂದಿದೆ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಬದ್ರುದ್ದೀನ್ ಅಜ್ಮಲ್ ನೆನ್ನೆ ತಮ್ಮನ್ನು ಭೇಟಿ ಮಾಡಿ, ಮಹಿಳಾ ಶಿಕ್ಷಣಕ್ಕೆ ನೀಡಲಾಗುತ್ತಿರುವ ಮಹತ್ವವನ್ನು ಮೆಚ್ಚಿಕೊಂಡಿದ್ದಾರೆ' ಎಂದಿದ್ದಾರೆ.


ಇದನ್ನೂ ಓದಿ- Covid-19 3rd Wave In India: ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾ ವೈರಸ್ ಮೂರನೇ ಅಲೆ - Dr. Randeep Guleria


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.