ಲೊಹರ್ದಾಗ (ಜಾಖಂಡ್): ಸಹಾಯ ಕೇಳಿ ಸ್ನೇಹಿತನಿಗೆ ಕರೆ ಮಾಡಿದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 11 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜಾರ್ಖಂಡ್'ನ ಲೋಹರ್ದಾಗ ಜಿಲ್ಲೆಯಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಆಗಸ್ಟ್ 16 ರಂದು ತಮ್ಮ ನೆರೆಮನೆಯವರ ಜೊತೆ ಇಬ್ಬರು ಅಪ್ರಾಪ್ತ ಬಾಲಕಿಯರು ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿ ಬೈಕ್ ಕೆಟ್ಟ ಪರಿಣಾಮ, ಬಾಲಕಿಯರಿಬ್ಬರೂ ತಮಗೆ ಪರಿಚಯವಿದ್ದ ಸ್ನೇಹಿತನಿಗೆ ಕರೆ ಮಾಡಿ ಸಹಾಯ ಕೇಳಿದ್ದಾರೆ. ಆಗ ಆತ ತನ್ನ 11 ಮಂದಿ ಸ್ನೇಹಿತರನ್ನು ಸ್ಥಳಕ್ಕೆ ಕಳುಹಿಸಿದ್ದಾನೆ. ಆದರೆ, ಸ್ಥಳಕ್ಕೆ ಬಂದ ಆತನ ಸ್ನೇಹಿತರು ಬಾಲಕಿಯರಿಗೆ ಸಹಾಯ ಮಾಡದೆ, ಅವರ ಜೊತೆಗಿದ್ದವನನ್ನು ಥಳಿಸಿ, ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಅವರ ಬಳಿಯಿಂದ ಕೊತ್ತೊಯ್ದಿದ್ದ ಮೊಬೈಲ್ ಫೋನ್ ಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 



ಸದ್ಯ ಆರೋಪಿಗಳ ವಿರುದ್ಧ ಸರ್ದಾರ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.