ಜೋರ್ಹತ್: ಅಸ್ಸಾಂನ ಜೋರ್ಹತ್ನಲ್ಲಿ ಗುರುವಾರ ನಡೆದ ಮೈಕ್ರೋಲೈಟ್ ಏರ್ ಕ್ರಾಫ್ಟ್ ಅಪಘಾತದಲ್ಲಿ  ಭಾರತೀಯ ವಾಯು ಸೇನೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ವಿಮಾನವು ದಿನನಿತ್ಯದ ಆಕ್ರಮಣಾಭ್ಯಾಸದಲ್ಲಿ ತೊಡಗಿದ್ದಾಗ ಅಪಘಾತ ಸಂಭವಿಸಿದೆ. ಮೈಕ್ರೋಲೈಟ್ ವಿಮಾನ ವೈರಸ್ SW80ನಲ್ಲಿ ಇಬ್ಬರು ಸಿಬ್ಬಂದಿಗಲಿದ್ದರು ಎಂದು ವರದಿಗಳು ತಿಳಿಸಿವೆ. 


ಮಧ್ಯಾಹ್ನದ ಹೊತ್ತಿನಲ್ಲಿ ಜೋರ್ಹತ್ ಏರ್ ಬೇಸ್ನಿಂದ ವಿಮಾನವು ಹಾರಿದ ಬಳಿಕ ಈ ಅಪಘಾತ ಸಂಭವಿಸಿದೆ. ಪೈಲಟ್ಗಳು ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ಸ್ ಎಂದು ವರದಿಯಾಗಿದೆ.


ಅಪಘಾತ ಹೇಗೆ ಸಂಭವಿಸಿತು ಎನ್ನುವ ಬಗ್ಗೆ ಇನ್ನೂ ಯಾವುದೇ ವಿವರಗಳು ದೊರೆತಿಲ್ಲ. ಈ ಅಪಘಾತಕ್ಕೆ ತನಿಖೆಗೆ ಆದೇಶಿಸಲಾಗಿದೆ.


ಮಜುಲಿ ನದಿಯ ಸಮೀಪವಿರುವ ಸುಮೋಮಾರಿ ಗ್ರಾಮದ ಸಮೀಪ ಅಪಘಾತಕ್ಕೊಳಗಾದ ವಿಮಾನದ ಅವಶೇಷಗಳು ಕಂಡುಬಂದಿದೆ.