ಥಾಣೆ: ಮಂಗಳವಾರ ಮುಂಜಾನೆ ಥಾಣೆ ಜಿಲ್ಲೆಯ ಕಲ್ವಾ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮನೆಯ ಗೋಡೆ ಕುಸಿತದ ಬಳಿಕ ಅವಶೇಷಗಳಡಿ ಸಿಲುಕಿದ್ದ ಮನೆ ಮಾಲೀಕ ಬೀರೇಂದ್ರ ಗೌತಮ್(40) ಮತ್ತು ಅವರ ಮಗ ಸನ್ನಿ ಗೌತಮ್ ಅವರನ್ನು ತಕ್ಷಣ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.


ಬೀರೇಂದ್ರ ಗೌತಮ್ ಪತ್ನಿ ಗುಡ್ಡಿ (35) ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಥಾಣೆ ಮಹಾನಗರ ಪಾಲಿಕೆಯ (ಟಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಭೂಕುಸಿತ ಸಂಭವಿಸಿದ ಆದರ್ಶ್ ಮಿತ್ರ ಮಂಡಲ್ ಚಾಲ್‌ನಿಂದ ಹತ್ತೊಂಬತ್ತು ಜನರನ್ನು ಟಿಎಂಸಿಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಸಮಿತಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.


ಮುನ್ನೆಚ್ಚರಿಕೆ ಕ್ರಮವಾಗಿ, ನಿರಂತರ ಭಾರಿ ಮಳೆಯ ದೃಷ್ಟಿಯಿಂದ, ವಿಪತ್ತು ನಿರ್ವಹಣಾ ಅಧಿಕಾರಿಗಳು ಆದರ್ಶ್ ಮಿತ್ರ ಮಂಡಲ್ ಚಾಲ್‌ನಲ್ಲಿ ವಾಸಿಸುತ್ತಿದ್ದ 19 ಕುಟುಂಬಗಳ ಸುಮಾರು 70 ಸದಸ್ಯರನ್ನು ಹತ್ತಿರದ ಜಿನಂಗಂಗ ಶಾಲೆಗೆ ಸ್ಥಳಾಂತರಿಸಿದ್ದಾರೆ.