ಸಿಕ್ಕಿಂ: ಉತ್ತರ ಸಿಕ್ಕಿಂನ ಭಾರತೀಯ ಸೇನೆಯ ಶಿಬಿರದ ಮೇಲೆ ಅಪ್ಪಳಿಸಿದ ಹಿಮಪಾತದಲ್ಲಿ ಭಾರತೀಯ ಸೇನೆಯ ಪೆಟ್ರೋಲಿಂಗ್-ಕಮ್-ಸ್ನೋ ಕ್ಲಿಯರೆನ್ಸ್ ಪಕ್ಷದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಅಧಿಕೃತ ಮಾಹಿತಿಯಲ್ಲಿ ಸೈನ್ಯವು ಇಬ್ಬರು ಸೈನಿಕರ ಸಾವನ್ನು ದೃಢಪಡಿಸಿತು. ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಮತ್ತು ಸಪ್ಪರ್ ಸಪಾಲಾ ಷಣ್ಮುಖ ರಾವ್ ಈ ದುರ್ಘಟನೆಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಪಾರುಗಾಣಿಕಾ ತಂಡದ ಉತ್ತಮ ಪ್ರಯತ್ನಗಳ ಹೊರತಾಗಿಯೂ ಭಾರೀ ಹಿಮಪಾತಕ್ಕೆ ಸಿಲುಕಿದ್ದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಮತ್ತು ಸಪ್ಪರ್ / ಒಪಿಇಎಂ ಸಪಾಲಾ ಶಣ್ಮುಖ ರಾವ್ ಅವರು ಹುತಾತ್ಮರಾಗಿದ್ದಾರೆ. ತಂಡದ ಇತರ ಎಲ್ಲ ಸದಸ್ಯರು ಸುರಕ್ಷಿತರಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.


ವರದಿಗಳ ಪ್ರಕಾರ ಸಿಕ್ಕಿಂನ ಲುಗ್ನಾಕ್ ಲಾ ಪ್ರದೇಶದಲ್ಲಿ 17-18 ಸಿಬ್ಬಂದಿಗಳ ಸೇನೆಯ ಗಸ್ತು-ಕಮ್-ಸ್ನೋ ಕ್ಲಿಯರೆನ್ಸ್ ಪಾರ್ಟಿ ಗುರುವಾರ ಹಿಮಪಾತಕ್ಕೆ ಸಿಲುಕಿದ್ದಾರೆ.


17-18 ಸೈನಿಕರನ್ನು ಒಳಗೊಂಡ ಪೆಟ್ರೋಲಿಂಗ್-ಕಮ್-ಸ್ನೋ ಕ್ಲಿಯರೆನ್ಸ್ ಪಾರ್ಟಿ ಹಿಮಪಾತಕ್ಕೆ ಸಿಲುಕಿತು.. ಒಬ್ಬ ಸೈನಿಕನನ್ನು ಹೊರತುಪಡಿಸಿ ಎಲ್ಲರೂ ಚೇತರಿಸಿಕೊಂಡಿದ್ದಾರೆ. ತೀವ್ರ ಶೋಧ ಪ್ರಗತಿಯಲ್ಲಿದೆ ಎಂದು ಸೇನೆಯು ಮಾಹಿತಿ ನೀಡಿತ್ತು.


ಇದಕ್ಕೂ ಮುನ್ನ ಏಪ್ರಿಲ್‌ನಲ್ಲಿ ಹಿಮಪಾತದಲ್ಲಿ ಸೇನಾ ಸೈನಿಕನೊಬ್ಬ ಮೃತಪಟ್ಟಿದ್ದರು. ಏಪ್ರಿಲ್ 11 ರಂದು ಸಿಕ್ಕಿಂನ ಹಿಮಪಾತದ ಎತ್ತರದ ಪ್ರದೇಶಗಳಲ್ಲಿ ಡೋಜರ್ ನಿರ್ವಹಿಸುತ್ತಿದ್ದ ಲ್ಯಾನ್ಸ್ ನಾಯಕ್ ಸಂಜೀವ ರೆಡ್ಡಿ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದರು.