ನವದೆಹಲಿ: ದೆಹಲಿಗೆ ಸಮೀಪವಿರುವ ನೋಯ್ಡಾ ಸೆಕ್ಟರ್ 1 ರಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್'ಗಳನ್ನು ಗುರುವಾರ(ಸೆ.20) ತಡರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ(ಸೆ.21) ಬೆಳಿಗ್ಗೆ 7 ಗಂಟೆಗೆ ಕಚೇರಿ ಸ್ವಚ್ಛಗೊಳಿಸಲು ಬಂದ ಬ್ಯಾಂಕ್ ಮಾಲಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಬಹಳ ಹೊತ್ತಾದರೂ ಯಾರೂ ಬಾಗಿಲು ತೆರೆಯದ ಕಾರಣ ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರದಿದ್ದಾರೆ. ಒಳಗೆ ಇಬ್ಬರೂ ಗಾರ್ಡ್ಗಳು ಕೆಳಗೆ ಬಿದ್ದಿರುವುದು ಕಂಡ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.


ಮಾಹಿತಿಯ ಪ್ರಕಾರ, ಗುರುವಾರ ತಡರಾತ್ರಿ ಬ್ಯಾಂಕ್ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ದರೋಡೆ ಮಾಡಲು ಯತ್ನಿಸಿದ್ದಾರೆ. ಆದರೆ ದರೋಡೆ ಮಾಡುವ ಕಾರ್ಯ ವಿಫಲವಾದ ಕಾರಣ ಬ್ಯಾಂಕಿನ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ ಎನ್ನಲಾಗಿದೆ. ಆದರೆ ಭದ್ರತಾ ಸಿಬ್ಬಂದಿಗಳ ಕೊಲೆಗೆ ಕಾರಣ ಏನು, ಕೊಂದವರು ಯಾರು ಎಂಬ ಪ್ರಶ್ನೆಗಳು ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾಂಕಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಈ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಈ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.