ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ನೌಗಂ ಸೆಕ್ಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ
ಭದ್ರತಾ ಪಡೆಗಳು ಅವರ ಬಳಿ ಇದ್ದ AK-47 ಮತ್ತು ಯುದ್ದೊಚಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನೌಗಮ್: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ನೌಗಮ್ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳು ಶನಿವಾರ (ಜುಲೈ 11) ನಿಯಂತ್ರಣ ರೇಖೆಯ ಉದ್ದಕ್ಕೂ ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದಿವೆ.
ಸೇನೆಯ ವಕ್ತಾರರು ಶನಿವಾರದಂದು ನೌಗಮ್ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಸೈನಿಕರು ಅನುಮಾನಾಸ್ಪದ ಚಲನೆಯನ್ನು ಪತ್ತೆ ಮಾಡಿದ್ದು ಶೀಘ್ರವಾಗಿ ಹೊಂಚುದಾಳಿಯನ್ನು ಪ್ರಾರಂಭಿಸಿದವು, ಇದರ ಪರಿಣಾಮವಾಗಿ ಇಬ್ಬರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಯಿತು. ಜೊತೆಗೆ ಭದ್ರತಾ ಪಡೆಗಳು ಅವರ ಬಳಿ ಇದ್ದ AK-47 ಮತ್ತು ಯುದ್ದೊಚಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಎಲ್‌ಒಸಿಯ ಈ ಭಾಗಕ್ಕೆ ನುಸುಳಲು ಯತ್ನಿಸುತ್ತಿರುವಾಗ ಭಯೋತ್ಪಾದಕರ ಗುಂಪೊಂದು ಎಚ್ಚರಿಕೆ ಪಡೆಗಳಿಂದ ಸವಾಲು ಹಾಕಲ್ಪಟ್ಟಿದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ ಅವರು ಸೈನ್ಯದ ಮೇಲೆ ಗುಂಡು ಹಾರಿಸಲಾರಂಭಿಸಿದರು, ಹೀಗಾಗಿ ಇದು ಎನ್‌ಕೌಂಟರ್ ಅನ್ನು ಪ್ರಚೋದಿಸಿತು. ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದವು ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ ಭಯೋತ್ಪಾದಕರು ಇದ್ದಾರೆ ಎಂದು ಕಂಡುಹಿಡಿಯಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಸೇನೆಯ ಅಧಿಕಾರಿಯ ಪ್ರಕಾರ ಭಯೋತ್ಪಾದಕರನ್ನು ಗಡಿಯ ಈ ಭಾಗಕ್ಕೆ ತಳ್ಳಲು ಪಾಕಿಸ್ತಾನ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ವರ್ಷದ ಜುಲೈವರೆಗೆ, ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ನೂರಾರು ಭಯೋತ್ಪಾದಕರನ್ನು ಪಡೆಗಳು ಯಶಸ್ವಿಯಾಗಿ ತಟಸ್ಥಗೊಳಿಸಿವೆ.