ನವದೆಹಲಿ: ಭೀಕರ ಪ್ರವಾಹದಿಂದ ತತ್ತರಿಸಿಹೊಗಿರುವ ಕೇರಳ ರಾಜ್ಯದ ನೆರವಿಗೆ ಮುಂದಾಗಿರುವ ಯುಎಇ, ಸುಮಾರು 175 ಟನ್ಗಳಷ್ಟು ಪ್ರವಾಹ ಪರಿಹಾರ ಸಾಮಗ್ರಿಗಳನ್ನು ಕಳುಹಿಸುತ್ತಿರುವುದಾಗಿ ಹೇಳಿದೆ. 


COMMERCIAL BREAK
SCROLL TO CONTINUE READING

ಯುಎಇಯ ಹಲವು ಸಂಘ ಸಂಸ್ಥೆಗಳು, ಕಂಪನಿಗಳು, ಉದ್ಯಮಿಗಳು ನೀಡಿರುವ ಪರಿಹಾರ ಸಾಮಗ್ರಿಗಳಾದ ದೋಣಿಗಳು, ಆಹಾರ್ ಪದಾರ್ಥಗಳು, ಬ್ಲಾಂಕೆಟ್ ಸೇರಿದಂತೆ ಇತರ ವಸ್ತುಗಳನ್ನು ಏರ್ ಕಾರ್ಗೋ ಸಂಸ್ಥೆಯ 12 ವಿಮಾನಗಳ ಮೂಲಕ ತಿರುವನಂತಪುರಂಗೆ ಕಳುಹಿಸುತ್ತಿರುವುದಾಗಿ ಯುಎಇ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೇಳಿದೆ. 



ಕೇರಳದಲ್ಲಿ ಉಂಟಾದ ಪ್ರವಾಹದಿಂದಾಗಿ ಇದುವರೆಗೆ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಎರಡು ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.