ನವದೆಹಲಿ: ಉದಯಪುರ ನಗರ 2018 ರಲ್ಲಿ ವಿಶ್ವದ ಅತ್ಯುತ್ತಮ ನಗರಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಟ್ರಾವೆಲ್+ ಲೈಸರ್ ಸಮೀಕ್ಷೆಯ ಪಟ್ಟಿಯಲ್ಲಿ ಉದಯಪುರ್ ಸತತ ಎರಡನೇ ಬಾರಿಗೆ ಸ್ಥಾನವನ್ನು ಪಡೆದಿದೆ.


COMMERCIAL BREAK
SCROLL TO CONTINUE READING

16ನೇ ಶತಮಾನದಲ್ಲಿ ಮೇವಾರದ ಮಹಾರಾಜರಿಂದ ನಿರ್ಮಿಸಿರುವ ಉದಯಪುರ ತನ್ನ ಪರಂಪರೆ ಕಟ್ಟಡಗಳಿಂದ ಹೆಸರುವಾಸಿಯಾಗಿದೆ. ಮೊದಲೆರಡು ಸ್ಥಾನದಲ್ಲಿ ಮೆಕ್ಸಿಕೋದ ಸ್ಯಾನ್ ಮಿಗುಯೆಲ್ ಡಿ ಅಲೆಂಡೆ ಮತ್ತು ಓಕ್ಸಾಕ ಪಡೆದಿವೆ.


ವರ್ಲ್ಡ್ಸ್ ಬೆಸ್ಟ್ ಅವಾರ್ಡ್ಸ್ ಸಮೀಕ್ಷೆಯ ಭಾಗವಾಗಿ, ಟ್ರಾವೆಲ್ ಲೀಜರ್ ಪತ್ರಿಕೆಯ ಓದುಗರಿಗೆ ತಮ್ಮ ನೆಚ್ಚಿನ ನಗರದ ಸ್ಥಳಗಳು ಮತ್ತು ಹೆಗ್ಗುರುತುಗಳು, ಸಂಸ್ಕೃತಿ, ಪಾಕಪದ್ಧತಿ, ಸೌಹಾರ್ದತೆ, ಶಾಪಿಂಗ್ ಕುರಿತಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು  ಆಗ ಓದುಗರು ಉದಯಪುರಗೆ ಹೆಚ್ಚಿನ ಮತವನ್ನು ಹಾಕಿದ್ದಾರೆ. ಇನ್ನು ಭಾರತದಲ್ಲಿ ಉದಯಪುರ್  ಹೊರತಾಗಿ ಮುಂಬೈ ಮತ್ತು ದೆಹಲಿಯಂತಹ ಪ್ರವಾಸಿ ಸ್ಥಳಗಳು ಅಂತಿಮ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿಲ್ಲ.


2009 ರಲ್ಲಿ ಉದಯಪುರ್ ಇದೇ ಸಮೀಕ್ಷೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಅತ್ಯುತ್ತಮ ನಗರ ಎನ್ನುವ ಸ್ಥಾನವನ್ನು ಪಡೆದಿತ್ತು.ಸರೋವರಗಳ ನಗರ ಮತ್ತು ಪೂರ್ವದ ವೆನಿಸ್ ಎಂದು ಕರೆಯಲ್ಪಡುವ ಉದಯಪುರ ದಕ್ಷಿಣ ರಾಜಸ್ಥಾನದ ಪಿಚೋಲಾ ಸರೋವರದ ದಂಡೆಯಲ್ಲಿದೆ. ಅಲ್ಲಿರುವ ದೃಶ್ಯಾವಳಿಗಳು, ಭವ್ಯವಾದ ಅರಮನೆಗಳು, ವಿಶ್ವ-ಮಟ್ಟದ ವಸ್ತುಸಂಗ್ರಹಾಲಯಗಳು ಮತ್ತು ಐಷಾರಾಮಿ ಹೋಟೆಲ್ಗಳಿಗೆ ಹೆಸರುವಾಸಿಯಾಗಿದೆ.