ನವದೆಹಲಿ: ಯುಜಿಸಿ ನೆಟ್ ಫಲಿತಾಂಶ 2020 ಘೋಷಿಸಲಾಗಿದೆ. ಈ ಪರೀಕ್ಷೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಫಲಿತಾಂಶವು ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ  ವೆಬ್‌ಸೈಟ್ nta.ac.in ನಲ್ಲಿ ಲಭ್ಯವಿದೆ. ಎನ್‌ಟಿಎ ಯುಜಿಸಿ ನೆಟ್ ಜೂನ್ 2020 ಪರೀಕ್ಷೆಯನ್ನು ಸೆಪ್ಟೆಂಬರ್ 24 ರಿಂದ ನವೆಂಬರ್ 13 ರವರೆಗೆ ಆಯೋಜಿಸಿತ್ತು. ನೋಂದಾಯಿತ 8,60,976 ಅಭ್ಯರ್ಥಿಗಳಲ್ಲಿ 5,26,707 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು.


COMMERCIAL BREAK
SCROLL TO CONTINUE READING

ಇದನ್ನು ಓದಿ- NEET, JEE Main 2021 Syllabus Change! NTA ಗೆ ಶಿಕ್ಷಣ ಸಚಿವಾಲಯ ನೀಡಿದೆ ಈ ಗೈಡ್ ಲೈನ್ಸ್


ಪರೀಕ್ಷೆಗಳನ್ನು ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಮೋಡ್‌ನಲ್ಲಿ ನಡೆಸಲಾಗಿದ್ದು, 12 ಪರೀಕ್ಷಾ ದಿನಗಳಲ್ಲಿ 81 ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು, ಪ್ರತಿ ಪರೀಕ್ಷೆಗಳು ಒಟ್ಟು ಎರಡು ಶಿಫ್ಟ್ ನಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಎನ್‌ಟಿಎ ಈ ಪರೀಕ್ಷಾ ಕಂಪ್ಯೂಟರ್ ಆಧಾರಿತವಾಗಿಟ್ಟು. ಎಲ್ಲಾ ಪ್ರಮುಖ ವಿಷಯಗಳಿಗೆ ಅಂತಿಮ ಕಟ್ ಆಫ್ ಬಿಡುಗಡೆಯಾಗಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಕಟ್ ಆಫ್ ಅನ್ನು ಸಹ ನೀವು ಪರಿಶೀಲಿಸಬಹುದು - nta.ac.in.ಗೆ ಭೇಟಿ ನೀಡಿ ನೀವು ನಿಮ್ಮ ಕಟ್ ಆಫ್ ಅನ್ನು ಪರಿಶೀಲಿಸಬಹುದು.


ಇದನ್ನು ಓದಿ- University ಹಾಗೂ Collegeಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ UGC


UGC NET ಪರೀಕ್ಷೆಗಳೆಂದರೇನು?
ಯುಜಿಸಿ ನೆಟ್ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯಾಗಿದೆ, ಪಿ.ಎಚ್.ಡಿಗೆ ಪ್ರವೇಶ ಪಡೆಯಲು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಇದು ಅರ್ಹತಾ ಪರೀಕ್ಷೆಯಾಗಿದೆ.  ಈ ಪರೀಕ್ಷೆ ಇಲ್ಲದೆ, ಪ್ರಾಧ್ಯಾಪಕರಾಗಬೇಕೆಂಬ ಕನಸು ಈಡೇರುವುದಿಲ್ಲ.


ಇದನ್ನು ಓದಿ- ದೇಶದಲ್ಲಿ 24 ನಕಲಿ ವಿವಿಗಳು ಇವೆ ಎಂದು ಘೋಷಿಸಿದ ಯುಜಿಸಿ..!


NTA ವತಿಯಿಂದ ಈ ಅರ್ಹತಾ ಪರೀಕ್ಷೆ ಆಯೋಜನೆಗೊಂಡಿರುವುದು ಈ ಬಾರಿಯ ವಿಶೇಷತೆ. ಇದಕ್ಕೂ ಮೊದಲು ಈ ಪರೀಕ್ಷೆಯನ್ನು ಯುಜಿಸಿ ಅಂದರೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಆಯೋಜಿಸುತ್ತಿತ್ತು.