UGC New Guidelines: ಇನ್ಮುಂದೆ ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ವಿಷಯಗಳ ಅಧ್ಯಯನ ಕೈಗೊಳ್ಳಬಹುದು
UGC New Guidelines: ಮ್ಯಾನೇಜ್‌ಮೆಂಟ್, ಕಾನೂನು, ಇಂಜಿನಿಯರಿಂಗ್ ಮತ್ತು ಒಂದೇ ಡೊಮೇನ್‌ನ ಸಂಸ್ಥೆಗಳು ಒಟ್ಟಾಗಿ ಸೇರಿ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲು ಇದರಿಂದ ಸಾಧ್ಯವಾಗಲಿದೆ. ಇದರೊಂದಿಗೆ, ಕರೋನಾ ಸಾಂಕ್ರಾಮಿಕದ ನಂತರದ ಅವಧಿಯಲ್ಲಿ ಬಂದ ಅಧ್ಯಯನದ ರೀತಿಯಲ್ಲಿನ ಬದಲಾವಣೆಗಳನ್ನು ಇದೀಗ ಒಂದು ಚೌಕಟ್ಟಿನಲ್ಲಿ ಪರಿವರ್ತಿಸಲಾಗುವುದು ಮತ್ತು ವಿದ್ಯಾರ್ಥಿಗಳು ಡ್ಯುಯೆಲ್ ಮೋಡ್ ನಲ್ಲಿ ತಮ್ಮ ಅಧ್ಯಯನವನ್ನು ನಡೆಸಬಹುದಾಗಿದೆ.
UGC Admission Guidelines: ಈ ಮೊದಲು ಒಂದೊಮ್ಮೆ ಆಯ್ದ ವಿಷಯ ಅಥವಾ ಕ್ಷೇತ್ರದಲ್ಲಿ ವ್ಯಾಸಂಗ ಆರಂಭಿಸಿದ ಓರ್ವ ವಿದ್ಯಾರ್ಥಿ ಬೇರೆ ವಿಷಯ ಅಥವಾ ಕ್ಷೇತ್ರಕ್ಕೆ ಹೋಗುವುದು ಕಷ್ಟವಾಗುತ್ತಿತ್ತು. ಆದರೆ ಇದೀಗ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಂದರೆ ಯುಜಿಸಿಯ ಹೊಸ ಮಾರ್ಗಸೂಚಿ ಜಾರಿಗೆ ಬಂದ ನಂತರ ವಿದ್ಯಾರ್ಥಿಗಳ ಈ ಸಮಸ್ಯೆ ದೂರಾಗಿದೆ. UGC ಯ ಹೊಸ ಮಾರ್ಗಸೂಚಿಗಳ ಪ್ರಕಾರ, ವಿದ್ಯಾರ್ಥಿಗಳು ಇದೀಗ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ರೀತಿಯ ಕೋರ್ಸ್‌ಗಳನ್ನು ಮಾಡಲು ಸಾಧ್ಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಅಲ್ಲದೆ, ಅವರ ಅಗತ್ಯಕ್ಕೆ ಅನುಗುಣವಾಗಿ, ವಿದ್ಯಾರ್ಥಿಗಳು ಇದೀಗ ಅಧ್ಯಯನವನ್ನು ಮಧ್ಯದಲ್ಲಿ ನಿಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಅದೇ ಸ್ಥಳದಿಂದ ಮತ್ತೆ ಅದೇ ನಿಲ್ಲಿಸಿದ ಕೋರ್ಸ್ ಅನ್ನು ಅವರು ಪುನರಾರಂಭಿಸಬಹುದಾಗಿದೆ. ಅಂದರೆ, ಯಾವುದೇ ಕೋರ್ಸ್‌ನಿಂದ ಮಲ್ಟಿಪಲ್ ಎಂಟ್ರಿ-ಎಕ್ಸಿಟ್ ಮಾಡಲು ಅವಕಾಶವಿರುತ್ತದೆ ಎಂದರ್ಥ ಮತ್ತು ಅದು ಈ ಮೊದಲು ತುಂಬಾ ಕಷ್ಟಸಾಧ್ಯದ ಕೆಲಸವಾಗಿತ್ತು.
ಮ್ಯಾನೇಜ್‌ಮೆಂಟ್, ಕಾನೂನು, ಇಂಜಿನಿಯರಿಂಗ್ ಮತ್ತು ಒಂದೇ ಡೊಮೇನ್‌ನ ಸಂಸ್ಥೆಗಳು ಒಟ್ಟಾಗಿ ಸೇರಿ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲು ಇದರಿಂದ ಸಾಧ್ಯವಾಗಲಿದೆ. ಇದರೊಂದಿಗೆ, ಕರೋನಾ ಸಾಂಕ್ರಾಮಿಕದ ನಂತರ ಬಂದ ಅಧ್ಯಯನದ ರೀತಿಯಲ್ಲಿನ ಬದಲಾವಣೆಯನ್ನು ಇದೀಗ ಒಂದು ಚೌಕಟ್ಟಿಗೆ ಪರಿವರ್ತಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಡ್ಯುಯಲ್ ಮೋಡ್‌ನಲ್ಲಿ ಅಧ್ಯಯನ ಮಾಡಲು ಸಹ ಅವಕಾಶವನ್ನು ಪಡೆಯಲಿದ್ದಾರೆ. ಅರ್ಥಾತ್, ತರಗತಿಯ ಕೊಠಡಿಯ ಅಧ್ಯಯನದ ಜೊತೆಗೆ, ವಿದ್ಯಾರ್ಥಿಗಳು ಇತರ ಇತರ ಕೋರ್ಸ್‌ಗಳನ್ನು ಮಾಡುವ ಮೂಲಕ ದೂರಶಿಕ್ಷಣ ಮತ್ತು ಆನ್‌ಲೈನ್ ಮೋಡ್‌ನ ಲಾಭವನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ. ಇದರಿಂದ ಏಕಕಾಲದಲ್ಲಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅವಕಾಶವಿರುತ್ತದೆ, ಆದರೆ ಇದು ಕೇವಲ 2 ಮಾನ್ಯ ಕೋರ್ಸ್ ಗಳಿಗೆ ಮಾತ್ರ ಲಭ್ಯವಿರುತ್ತದೆ.
ಇದನ್ನು ಜಾರಿಗೊಳಿಸಲು ಯುಜಿಸಿ ರಾಜ್ಯ ಸರ್ಕಾರಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಆದೇಶ ನೀಡಿದೆ. ಅದರಂತೆ, ಸಿದ್ಧತೆಗಳಿಗೆ ಅನುಗುಣವಾಗಿ, ವಿಶ್ವವಿದ್ಯಾನಿಲಯಗಳು ಇದನ್ನು 2022-23ರ ಸೆಷನ್ ನಲ್ಲಿ ಜಾರಿಗೆ ತರಬಹುದು.
ಇದನ್ನೂ ಓದಿ-Sonali Phogat Murder Case : ಸೋನಾಲಿ ಫೋಗಟ್ ಕೊಲೆ ರಹಸ್ಯ ಬಹಿರಂಗ : ತಪ್ಪೊಪ್ಪಿಕೊಂಡ ಆರೋಪಿ ಸುಧೀರ್!
ಯುಜಿಸಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಜೊತೆಗೆ ಇದೀಗ ವಿದ್ಯಾರ್ಥಿಗಳಿಗಾಗಿ ಹೊಸ ಸೌಲಭ್ಯವನ್ನೂ ತರುತ್ತಿದೆ. ವಿದ್ಯಾರ್ಥಿಗಳು ತಮ್ಮ ಖಾತೆಯನ್ನು ರಚಿಸಲು ಮತ್ತು ಅವರು ಗಳಿಸಿದ ಸಂಖ್ಯೆಯನ್ನು 7 ವರ್ಷಗಳವರೆಗೆ ಇರಿಸಿಕೊಳ್ಳಲು ಇದರಿಂದ ಸಾಧಯ್ವಾಗಲಿದೆ. ವಿದ್ಯಾರ್ಥಿಗಳು ಯಾವುದೇ ಕಾರಣದಿಂದ ಒಂದು ವರ್ಷ ಅಧ್ಯಯನ ಮಾಡದಿದ್ದರೆ ಅಥವಾ ಮುಂದೆ ಮುಂದುವರಿಯಲು ಬಯಸದಿದ್ದರೆ, ಅಧ್ಯಯನದ ಅನುಭವದ ಪ್ರಕಾರ ಡಿಪ್ಲೊಮಾ (2 ವರ್ಷಗಳ ಪದವಿ) ಪದವಿ (3 ವರ್ಷಗಳ ಅಧ್ಯಯನದಲ್ಲಿ) ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ-Largest Economy In The World: ಬ್ರಿಟನ್ ಹಿಂದಿಕ್ಕಿದ ಭಾರತ 5ನೇ ಸ್ಥಾನಕ್ಕೆ ಏರಿಕೆ!
ದೇಶದಲ್ಲಿ ಮೂರು ರೀತಿಯ ಸಂಸ್ಥೆಗಳು ಮಾತ್ರ ಕಾಣಸಿಗಲಿವೆ.
ಅವುಗಳ ವರ್ಗೀಕರಣ ಇಂತಿದೆ
1. ಸಂಶೋಧನೆ
2. ಬೋಧನೆ
3. ಸ್ವಾಯತ್ತ
ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದರೆ ಕಾಲೇಜುಗಳು ತಮ್ಮದೇ ಮಟ್ಟದಲ್ಲಿ ಪದವಿಗಳನ್ನು ನೀಡಲು ಸಾಧ್ಯವಾಗಲಿದೆ, ಇಲ್ಲದಿದ್ದರೆ ಅವರು ಇತರ ಕಾಲೇಜುಗಳ ಸಹಯೋಗದಲ್ಲಿ ಪದವಿಗಳನ್ನು ನೀಡಲು ಸಾಧ್ಯವಾಗಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.