ನವದೆಹಲಿ: ಆಧಾರ್ ಡಾಟಾ ಸೋರಿಕೆಗಳ ವರದಿಗಳ ಹಿನ್ನಲೆಯಲ್ಲಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ. ಯುಐಡಿಎಐ ವರ್ಚುವಲ್ ಐಡಿಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈಗ, ಅನೇಕ ಸೌಲಭ್ಯಗಳನ್ನು ಪಡೆಯಲು, ಆಧಾರ್ ಸಂಖ್ಯೆಯನ್ನು ನೀಡಬೇಕಾಗಿಲ್ಲ. ಆಧಾರ್ ಸುರಕ್ಷತೆಯ ಬಗ್ಗೆ ಇರುವ ಸಂದೇಹಗಳನ್ನು ತೊಡೆದು ಹಾಕಲು ಸರ್ಕಾರ ವರ್ಚುವಲ್ ಐಡಿ ಬಳಕೆಗೆ ಮಹತ್ವ ನೀಡಿದೆ. ಇದು ಆಧಾರ್ ನ ಸುರಕ್ಷತೆ ಬಲಪಡಿಸುತ್ತದೆ. ಆದರೆ, ಆಧಾರ್ ವರ್ಚುವಲ್ ಐಡಿ ಏನು ಎಂದು ನಿಮಗೆ ತಿಳಿದಿದೆಯೇ? ಇದರ ಲಾಭ ಏನು? ಸಾಮಾನ್ಯ ಜನರು ಇದನ್ನು ಹೇಗೆ ಬಳಸುತ್ತಾರೆ ಮತ್ತು ಈ ಹೊಸ ID ಅನ್ನು ಹೇಗೆ ರಚಿಸಲಾಗುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಮೊದಲನೆಯದಾಗಿ, ಅದು ಆಧಾರ್ ಗಿಂತ ಹೇಗೆ ವಿಭಿನ್ನವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಏನಿದು VID(virtual id)?
ಗೌಪ್ಯತೆ ಕಾಳಜಿಯನ್ನು ಬಗೆಹರಿಸಲು ಯುಐಡಿಎಐ ಆಧಾರ್-ಕಾರ್ಡುದಾರರು ತನ್ನ ವೆಬ್ಸೈಟ್ನಿಂದ ಸೃಷ್ಟಿಸಬಹುದಾದ 'ವರ್ಚುವಲ್ ಐಡಿ' ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ. ಸಿಮ್ ಪರಿಶೀಲನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ, 12-ಅಂಕಿ ಬಯೋಮೆಟ್ರಿಕ್ IDಯನ್ನು ಇದರಲ್ಲಿ ಹೇಳಲಾಗಿದೆ. UIDAI ಪ್ರತಿ ಆಧಾರ್ ಬಳಕೆದಾರರಿಗೆ ವರ್ಚುವಲ್ ಐಡಿಯನ್ನು ರಚಿಸಲು ಅವಕಾಶವನ್ನು ನೀಡುತ್ತದೆ. ಯಾರಾದರು ತಮ್ಮ ಆಧಾರ್ ವಿವಾಲ ನೀಡಬೇಕಾದರೆ, ಅವರು 12 ಅಂಕಿಯ ಆಧಾರ್ ಸಂಖ್ಯೆಗೆ ಬದಲಾಗಿ 16 ಅಂಕಿಯ ವರ್ಚುವಲ್ ಐಡಿಯನ್ನು ನೀಡಬಹುದು. ಜುಲೈ 1 ರಿಂದ ವರ್ಚುವಲ್ ಐಡಿಯನ್ನು ರಚಿಸಲು ಸೌಲಭ್ಯ ಕಡ್ಡಾಯವಾಗಿರುತ್ತದೆ. ಯುಐಡಿಎಐ ಯು ಜೂನ್ 1 ರಿಂದ ವರ್ಚುವಲ್ ಐಡಿಯನ್ನು ಆರಂಭಿಸಲು ನಿರ್ಧರಿಸಿತ್ತು, ನಂತರ ಅದರ ದಿನಾಂಕವನ್ನು ಜುಲೈ 1 ಕ್ಕೆ ಮುಂದೂಡಿತು.


VID ಅನ್ನು ಹೇಗೆ ರಚಿಸಬೇಕು?
ಆಧಾರ್ ವರ್ಚುವಲ್ ಐಡಿ ಅನ್ನು ಯುಐಡಿಎಐನ ಪೋರ್ಟಲ್ನಿಂದ ರಚಿಸಬಹುದು. ಇದು ರಚಿಸಬಹುದು. ಪ್ರಸ್ತುತ ವಿಐಡಿ ಒಂದು ದಿನ ಮಾತ್ರ ಮಾನ್ಯವಾಗಿರುತ್ತದೆ. ಇದರರ್ಥ ಒಂದು ದಿನದ ನಂತರ ಆಧಾರ್ ಹೋಲ್ಡರ್ ಈ ವರ್ಚುವಲ್ ಐಡಿ ಅನ್ನು ಮತ್ತೆ ರಚಿಸಬೇಕಾಗುತ್ತದೆ. UIDAI ನ ವೆಬ್ಸೈಟ್ನಿಂದ ಮಾತ್ರ ಇದನ್ನು ರಚಿಸಬಹುದು. 


VID ರಚಿಸುವ ವಿಧಾನ
- VID ಅನ್ನು ರಚಿಸಲು UIDAI ನ ಮುಖಪುಟಕ್ಕೆ ಹೋಗಿ.
- ಈಗ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ಅದರ ನಂತರ, ಭದ್ರತಾ ಕೋಡ್ ನಮೂದಿಸಿ ಮತ್ತು SEND OTP ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ನಂಬರ್ ಮೂಲಕ ನಿಮ್ಮ ಆಧಾರ್ ರಿಜಿಸ್ಟರ್ ಆಗಲಿದೆ. ನಂತರ ನಿಮಗೆ OTP ಕಳುಹಿಸಲಾಗುವುದು.
- OTP ನಮೂದಿಸಿದ ನಂತರ ನೀವು ಹೊಸ VID ರಚಿಸುವ ಆಯ್ಕೆ ಪಡೆಯುತ್ತೀರಿ.
- ಅದು ಜನರೇಟ್ ಆದ ಬಳಿಕ ನಿಮ್ಮ ವರ್ಚುವಲ್ ಐಡಿ ಅನ್ನು ನಿಮ್ಮ ಮೊಬೈಗೆ ಕಳುಹಿಸಲಾಗುತ್ತದೆ. ಅಂದರೆ 16 ಅಂಕೆಗಳ ಸಂಖ್ಯೆ ನಿಮ್ಮ ನೊಂದಾಯಿತ ಮೊಬೈಲ್ ಗೆ ಬರಲಿದೆ.


ವರ್ಚುವಲ್ ಐಡಿಯಿಂದಾಗುವ ಲಾಭ?


  • ಯುಐಡಿಎಐ ಪ್ರಕಾರ, ಆಧಾರ್ ಕಾರ್ಡಿನ ಪರವಾಗಿ ವರ್ಚುವಲ್ ಐಡಿಗಳನ್ನು ಉತ್ಪಾದಿಸಲು ಅಧಿಕೃತ ಏಜೆನ್ಸಿಗಳನ್ನು ಅನುಮತಿಸಲಾಗುವುದಿಲ್ಲ.

  • ಇದು ಪರಿಶೀಲನೆಯ ಸಮಯದಲ್ಲಿ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳದಿರುವ ಆಯ್ಕೆಯನ್ನು ನೀಡುತ್ತದೆ.

  • ಹೆಸರು, ವಿಳಾಸ ಮತ್ತು ಛಾಯಾಚಿತ್ರದ ಪರಿಶೀಲನೆಯಂತಹ ಹಲವಾರು ವಸ್ತುಗಳು ವರ್ಚುವಲ್ ID ಯಿಂದ ಪರಿಶೀಲಿಸಲ್ಪಡುತ್ತವೆ.

  • ಯಾವುದೇ ಬಳಕೆದಾರ ಸಾಧ್ಯವಾದಷ್ಟು ಅನೇಕ ವರ್ಚುವಲ್ ID ಗಳಷ್ಟು ಉತ್ಪಾದಿಸಲು ಸಾಧ್ಯವಾಗುತ್ತದೆ. ಹಳೆಯ ID ಗಳು ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತವೆ.