ನವದೆಹಲಿ: ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಲಿ ಬಣ್ಣದ 'ಬಾಲ್ ಆಧಾರ್' ಕಾರ್ಡ್ ಅನ್ನು ಪರಿಚಯಿಸಿದೆ. ಈಗ ಬಾಲ್ ಆಧಾರ್ ಸಹಾಯದಿಂದ, ನಿಮ್ಮ ಮಗು ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆಯಬಹುದು. ಇಂದಿನ ಕಾಲದಲ್ಲಿ ಹಿರಿಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರಿಗೂ ಆಧಾರ್ ಅಗತ್ಯವಾದ ದಾಖಲೆಯಾಗಿದೆ. ಯಾವುದೇ ಆಧಾರ್ ಕೇಂದ್ರಕ್ಕೆ ಹೋಗುವ ಮೂಲಕ ನೀವು ಬಾಲ್ ಆಧಾರ್ ತಯಾರಿಸಬಹುದು. ಯುಐಡಿಎಐ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಯುಐಡಿಎಐ ಟ್ವೀಟ್:
5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಾಲ್ ಆಧಾರ್ ಅವಶ್ಯಕವಾಗಿದೆ ಮತ್ತು ಇದು 5 ವರ್ಷಗಳವರೆಗೆ ಮಾನ್ಯವಾಗಿ ಉಳಿಯುತ್ತದೆ ಎಂದು ಯುಐಡಿಎಐ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದಿದೆ. 5 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಮಾಹಿತಿ ದೊರೆಯುವುದಿಲ್ಲ. ಆದರೆ, ಅವರ ವಯಸ್ಸು 5 ವರ್ಷಕ್ಕಿಂತ ಹೆಚ್ಚಿರುವಾಗ, ಬಯೋಮೆಟ್ರಿಕ್ ದಾಖಲೆಯನ್ನು ನವೀಕರಿಸಬೇಕಾಗಿದೆ.



ಸಾಮಾನ್ಯ ಆಧಾರ್'ಗಿಂತ ಬಾಲ್ ಆಧಾರ್ ಎಷ್ಟು ಭಿನ್ನ:
ಬಾಲ್ ಆಧಾರ್ ಮಾಡಿಸಲು ಐರಿಸ್ ಸ್ಕ್ಯಾನ್ ಅಥವಾ ಫಿಂಗರ್ಪ್ರಿಂಟ್ ಸ್ಕ್ಯಾನ್ ನಂತಹ ಬಯೋಮೆಟ್ರಿಕ್ ಗುರುತಿಸುವಿಕೆ ಅಗತ್ಯವಿರುವುದಿಲ್ಲ. ಇದಲ್ಲದೆ, ಯಾವುದೇ ಗುರುತಿನ ಅಗತ್ಯವಿದ್ದರೆ, ಮಗುವಿನ ಹೆತ್ತವರ ಆಧಾರ್ ತಪಾಸಣೆ ಮಾಡಲಾಗುವುದು, ಆದರೆ ಮಗುವಿಗೆ ಐದು ವರ್ಷಕ್ಕಿಂತ ಮೇಲ್ಪಟ್ಟ ತಕ್ಷಣ, ಅವನಿಗೆ ಮಾಹಿತಿ ನವೀಕರಿಸಿ ಸಾಮಾನ್ಯ ಆಧಾರ್ ಕಾರ್ಡ್ ನೀಡಲಾಗುವುದು ಮತ್ತು ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ಸಹ ನೀಡಲಾಗುತ್ತದೆ.


ನಿಮ್ಮ ಮಗುವಿಗೆ ಬಾಲ್ ಆಧಾರ್ ಮಾಡಿಸುವುದು ಹೇಗೆ?


  • ಬಾಲ್ ಆಧಾರ್ ಪಡೆಯಲು, ನೀವು ಮಗುವಿನೊಂದಿಗೆ ಆಧಾರ್ ಕೇಂದ್ರಕ್ಕೆ ಹೋಗಬೇಕು.

  • ಇಲ್ಲಿ ನೀವು ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಬೇಕು.

  • ಇಲ್ಲಿ ನೀವು ಮಗುವಿನ ಜನನ ಪ್ರಮಾಣಪತ್ರವನ್ನು ಸಹ ನೀಡಬೇಕಾಗುತ್ತದೆ.

  • ಇದರೊಂದಿಗೆ ತಾಯಿ ಮತ್ತು ತಂದೆ ಕೂಡ ತಮ್ಮ ಆಧಾರ್ ಕಾರ್ಡ್ ಅನ್ನುಒದಗಿಸಬೇಕಾಗುತ್ತದೆ.

  • ಮಕ್ಕಳ ಛಾಯಾಚಿತ್ರಗಳನ್ನು ಆಧಾರ್ ಸೆಂಟರ್ನಲ್ಲಿ ತೆಗೆದುಕೊಳ್ಳಲಾಗುವುದು.

  • ಮಕ್ಕಳ ಆಧಾರ್ ನಲ್ಲಿ ತಂದೆ ಅಥವಾ ತಾಯಿಯ ಆಧಾರ್ ಲಿಂಕ್ ಮಾಡಲಾಗುತ್ತದೆ.

  • ಇದರೊಂದಿಗೆ, ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ದೃಡೀಕರಣ ಸಂದೇಶವನ್ನು ಕಳುಹಿಸಲಾಗುತ್ತದೆ.

  • ದೃಡೀಕರಣ ಸಂದೇಶವನ್ನು ಸ್ವೀಕರಿಸಿದ 60 ದಿನಗಳಲ್ಲಿ ಮಕ್ಕಳ ಆಧಾರ್ ಅನ್ನು ನಿಮ್ಮ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುತ್ತದೆ.


ನೀಲಿ ಬಣ್ಣದ ಕಾರ್ಡ್:
ಯುಐಡಿಎಐ ಮಕ್ಕಳಿಗೆ ಆಧಾರ್ ಅನ್ನು ನೀಲಿ ಬಣ್ಣದಲ್ಲಿ ಬಿಡುಗಡೆ ಮಾಡುತ್ತದೆ. ಮಗುವಿನ ಬಯೋಮೆಟ್ರಿಕ್ ವಿವರಗಳನ್ನು 5 ವರ್ಷದ ನಂತರ ನವೀಕರಿಸಬೇಕಾಗುತ್ತದೆ. ಈ ಕೆಲಸವನ್ನು ಯಾವುದೇ ಹತ್ತಿರದ ಆಧಾರ್ ಕೇಂದ್ರದಲ್ಲಿ ಉಚಿತವಾಗಿ ಮಾಡಬಹುದು. ನಿಮ್ಮ ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ನೀವು 7 ವರ್ಷಗಳವರೆಗೆ ನವೀಕರಿಸದಿದ್ದರೆ, ಕಾರ್ಡ್ ಅನ್ನು ಅಮಾನತುಗೊಳಿಸಲಾಗುತ್ತದೆ.