ಬಡತನ ರೇಖೆಗಿಂತ ಕೆಳಗಿರುವ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ಬಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಕುಟುಂಬದ ಯೋಜನಾ ವೆಚ್ಚ ಕಡಿಮೆ ಮಾಡುವುದು, ಮಹಿಳೆಯರ ಆರೋಗ್ಯ ಸುಧಾರಣೆಗೆ ಒತ್ತು ನೀಡುವ ಉದ್ದೇಶದಿಂದ ಜಾರಿಗೆ ಬಂದ ಯಶಸ್ವಿ ಯೋಜನೆಯಾಗಿದೆ.


COMMERCIAL BREAK
SCROLL TO CONTINUE READING

ಈ ಯೋಜನೆಯಡಿ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ನೀಡಲಾಗುತ್ತದೆ. 2016ರಲ್ಲಿ ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಘೋಷಣೆ ಮಾಡಿದರು. ಈ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಸಿಗದ ಕುಟುಂಬವನ್ನು ಗುರುತಿಸಿ ಸಂಪರ್ಕ ನೀಡಲು ಪಿಎಂಯುವೈ-2 ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿದೆ.


EPF ವರ್ಗಾವಣೆ ಗೆ ಇನ್ನು ಸುಲಭ ; ಆನ್ ಲೈನ್ ನಲ್ಲಿ ಖಾತೆದಾರನೇ ಅಪ್ ಡೇಟ್ ಮಾಡಬಹುದು ಡೇಟ್ ಆಫ್ ಎಕ್ಸಿಟ್


ಬಡತನದ ರೇಖೆಯಿಂದ ಕೆಳಗಿರುವ ಕುಟುಂಬಗಳಿಗೆ ಹಾಲಿ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್(LPG Cylinders) ಸಿಗುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸಿ 3 ಸಿಲಿಂಡರ್ ನೀಡುವುದು ಹಾಗೂ 3 ತಿಂಗಳು ಅವಧಿ ವಿಸ್ತರಣೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ 83 ಮಿಲಿಯನ್ ಕುಟುಂಬಗಳಿಗೆ ಲಾಭವಾಗಲಿದೆ.


"ನೂತನ ಕೃಷಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಸಿದ್ಧ"


ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆ ಜನವರಿಯಿಂದ 125 ರು ಹೆಚ್ಚಳ ಕಂಡಿದೆ. ಕಳೆದ ಮೇ ತಿಂಗಳಿಗೆ ಹೋಲಿಸಿದರೆ ದೆಹಲಿಯಲ್ಲಿ 237.50 ರು ಏರಿಕೆ ಕಂಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ(Ujjwala Yojana)ಯಡಿ ಪ್ರತಿ ಬಡ ಕುಟುಂಬಕ್ಕೆ ಉಚಿತ ಎಲ್​ಪಿಜಿ ಸಂಪರ್ಕ ಒದಗಿಸುವ ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳಿಗೆ ಸರ್ಕಾರವು ರೂ. 1,600 ಸಬ್ಸಿಡಿ ನೀಡಲಿದೆ. ಈ ಸಬ್ಸಿಡಿಯು ಸಿಲಿಂಡರ್‌ ಭದ್ರತೆ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಒಳಗೊಂಡಿರುತ್ತದೆ.


ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ವ್ಯಕ್ತಿಗೆ ಕೊರೊನಾ ಧೃಢ ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.