ನವದೆಹಲಿ: ಫೋನಿ ಚಂಡಮಾರುತದಿಂದ ಉಂಟಾಗಬಹುದಾದ ಹಾನಿಯನ್ನು ಮೊದಲೇ ಗ್ರಹಿಸಿದ ಭಾರತೀಯ ಹವಾಮಾನ ಇಲಾಖೆ ಕಾರ್ಯಕ್ಕೆ ವಿಶ್ವಸಂಸ್ಥೆಯ ವಿಪತ್ತು ಕಡಿತ ಏಜೆನ್ಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರಿಂದ ಅಧಿಕಾರಿಗಳಿಗೆ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸುಲಭವಾಗಿ ಮಾಡಲಾಯಿತು ಎಂದು ಆ ಸಂಸ್ಥೆ ಹೇಳಿದೆ. 


COMMERCIAL BREAK
SCROLL TO CONTINUE READING

ಕಳೆದ 20 ವರ್ಷಗಳಲ್ಲೇ ಪೋನಿ ಚಂಡಮಾರುತವನ್ನು ಅತಿ ಪ್ರಬಲ ಎಂದು ಹೇಳಲಾಗಿದೆ. ಸಮುದ್ರ ತೀರದ ಸುಮಾರು 11 ಲಕ್ಷ  ಜನರ ಮೇಲೆ ಈ ಚಂಡಮಾರುತದ ಪರಿಣಾಮ ಬಿರಿದೆ. ಒಡಿಸ್ಸಾ ರಾಜ್ಯದಲ್ಲಿ ಹಲವು ಕಡೆ ಭೂಕುಸಿತ ಸಂಭವಿಸಿ ಸುಮಾರು ಎಂಟಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.ಪೋನಿ ಚಂಡಮಾರುತವು ಸುಮಾರು 175 ಕಿಲೋಮೀಟರ್ ವೇಗದಲ್ಲಿ ಪೂರ್ವ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿತ್ತು. ಹವಾಮಾನ ಇಲಾಖೆಯೂ ಮೊದಲೇ ಮೂನ್ಸೂಚನೆ ನೀಡಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಜನರನ್ನು ಸ್ಥಳಾಂತರಗೊಳಿಸಿ ರಕ್ಷಿಸಿದರು.


ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ವಿಪತ್ತು ಅಪಾಯ ಖಡಿತ ಏಜೆನ್ಸಿಯ ವಿಶೇಷ ಪ್ರತಿನಿಧಿ ಮಾಮಿ ಮಿಜುತೋರಿ "ಭಾರತವು ಶೂನ್ಯ ಹಾನಿ ವಿಧಾನದ ನಿರ್ವಹಣೆಯು ಪ್ರಮುಖವಾಗಿ ಸೆಂಡೈ ಕಾರ್ಯ ಯೋಜನೆ ಅಡಿಯಲ್ಲಿ ನಿರ್ವಹಿಸಲಾಗಿದೆ" ಎಂದು ಹೇಳಿಕೆ ನೀಡಿದ್ದಾರೆ.


ಇನ್ನೊಂದೆಡೆಗೆ ವಿಶ್ವ ಸಂಸ್ಥೆ ವಿಪತ್ತು ಕಡಿತ ಏಜೆನ್ಸಿ ವಕ್ತಾರ ಡೆನಿಸ್ ಮ್ಯಾಕ್ಕ್ಲೀನ್ "ಭಾರತೀಯ ಹವಾಮಾನ ಇಲಾಖೆ ಮೊದಲೇ ಮುಂಬರುವ ಎಚ್ಚರಿಕೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ಸ್ಥಳಾಂತರಿಸುವ ಯೋಜನೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಯಿತು. ಇದರಿಂದ ಸುಮಾರು ದಶಲಕ್ಷಕ್ಕೂ ಹೆಚ್ಚಿನ ಜನರನ್ನು ಚಂಡಮಾರುತದಿಂದ ಸ್ಥಳಾಂತರಿಸಲಾಯಿತು "ಎಂದು ಶ್ಲಾಘಿಸಿದರು.