ನವದೆಹಲಿ:ಕೊರೊನಾವೈರಸ್ ಹಿನ್ನೆಲೆ, ನೌಕರರಿಗೆ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಆನ್‌ಲೈನ್ ಆಯ್ಕೆಯನ್ನು ನೀಡಿದೆ. ಇಪಿಎಫ್‌ಒ ವೆಬ್‌ಸೈಟ್‌ನ ಹೊರತಾಗಿ, ಈ ಆಯ್ಕೆಯು ಉಮಂಗ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಲಭ್ಯವಿದೆ. ಪ್ರಸ್ತುತ, ಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತದ ಮೇಲೆ ಬಡ್ಡಿ ಶೇಕಡಾ 8.50 ನೀಡಲಾಗುತ್ತದೆ. ಎಲ್ಲಾ ಠೇವಣಿ ಯೋಜನೆಗಳಲ್ಲಿ ಇದು ಅತಿ ಹೆಚ್ಚಿನ ಬಡ್ಡಿದರವಾಗಿದೆ. ಅಷ್ಟೇ ಅಲ್ಲ ಪಿಎಫ್ ಖಾತೆದಾರರಿಗೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ. ತೆರಿಗೆ ವಿನಾಯ್ತಿ ಕೂಡ ನೀಡುತ್ತದೆ. ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವ ಮೊದಲು, ಆನ್‌ಲೈನ್‌ನಲ್ಲಿ ಹಿಂತೆಗೆದುಕೊಳ್ಳುವಲ್ಲಿ ಯಾವ ಯಾವ ನಿಯಮಗಳು ಅನ್ವಯವಾಗುತ್ತವೆ ಎಂಬುದು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ.


COMMERCIAL BREAK
SCROLL TO CONTINUE READING

ಮಕ್ಕಳ ಮದುವೆ ವಿದ್ಯಾಭ್ಯಾಸಕ್ಕೆ ಈ ನಿಯಮಗಳಿವೆ
ಈ ಕುರಿತು ಮಾಹಿತಿ ನೀಡಿರುವ ತೆರಿಗೆ ಮತ್ತು ಹೂಡಿಕೆ ಸಲಹೆಗಾರ ಜಿತೇಂದ್ರ ಸೋಲಂಕಿ, ಇಪಿಎಫ್‌ಒ ನಿಯಮಗಳ ಪ್ರಕಾರ, ಯಾವುದೇ ಖಾತೆದಾರನು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅಥವಾ ತನ್ನ ಸಹೋದರಿ ಅಥವಾ ಸಹೋದರನ ಮದುವೆಗಾಗಿ ಹಣವನ್ನು ಹಿಂಪಡೆಯಬಹುದು. ಆದಾಗ್ಯೂ, ಕೇವಲ ಈ ನಿಯಮದ ಅಡಿ ನೀವು ಕೇವಲ ಶೇ.50  ಮಾತ್ರ ನಿಮ್ಮ ಖಾತೆಯಿಂದ ಹಣ ಹಿಂತೆಗೆದುಕೊಳ್ಳಬಹುದು. ಮಕ್ಕಳ ಹತ್ತನೆಯ ತರಗತಿಯ ನಂತರದ ವಿದ್ಯಾಭ್ಯಾಸಕ್ಕಾಗಿ ನೀವು ಹಣವನ್ನು ಪಡೆಯಬಹುದು.ನಂತರ ಅಧ್ಯಯನಕ್ಕಾಗಿ ಹಣವನ್ನು ಪಡೆಯುತ್ತಾರೆ, ಆದರೆ ಎರಡೂ ಸಂದರ್ಭಗಳಲ್ಲಿ ಹಣವನ್ನು ಹಿಂಪಡೆಯಲು ನಿಮ್ಮ ಖಾತೆ ಕನಿಷ್ಠ ಅಂದರೆ 7 ವರ್ಷ ಹಳೆ ಖಾತೆಯಾಗಿರಬೇಕು.


ಜಮೀನು ಅಥವಾ ಮನೆ ಖರೀದಿಗೆ ಹಣ ಪಡೆಯಲು ಈ ನಿಯಮ ಅನ್ವಯಿಸುತ್ತದೆ
ಖಾತೆದಾರನು ಭೂಮಿ ಖರೀದಿಸಲು ಅಥವಾ ಮನೆ ನಿರ್ಮಾಣಕ್ಕಾಗಿ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಬಯಸಿದರೆ, ಖಾತೆಯು ಕನಿಷ್ಠ ಐದು ವರ್ಷ ಹಳೆ ಖಾತೆಯಾಗಿರಬೇಕು. ಭೂಮಿ ಖರೀದಿಗೆ ಮಾಸಿಕ ಸಂಬಳ ಮತ್ತು ತುಟ್ಟಿಭತ್ಯೆಯ 24 ಪಟ್ಟು ಹಣವನ್ನು ನೀವು ಹಿಂಪಡೆಯಬಹುದು. ಇದೇ ವೇಳೆ ಮನೆಯ ನಿರ್ಮಾಣಕ್ಕಾಗಿ ಮಾಸಿಕ ವೇತನ ಮತ್ತು ತುಟ್ಟಿಭತ್ಯೆಯ 36 ಪಟ್ಟು ಹೆಚ್ಚು ಮೊತ್ತವನ್ನು ನೀವು ವಿಥ್ ಡ್ರಾ ಮಾಡಬಹುದು.


ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಹೂಡಿಕೆ ಸಲಹೆಗಾರ ಕಾರ್ತಿಕ್ ಝವೇರಿ ಪ್ರಕಾರ, ಮನೆಯನ್ನು ಪಿಎಫ್ ಖಾತೆದಾರ ತನ್ನ ಅಥವಾ ತನ್ನ ಸಂಗಾತಿಯ ಹೆಸರಿನಲ್ಲಿ ನೋಂದಾಯಿಸಿದ್ದರೆ, ಮನೆಯ ನಾವಿನ್ಯಕಾರಣಕ್ಕಾಗಿ 12 ಪಟ್ಟು ಮೊತ್ತವನ್ನು ಹಿಂಪಡೆಯಬಹುದು. ಆದರೆ ಇದಕ್ಕೂ ಕೂಡ ನಿಮ್ಮ PF ಖಾತೆ ಕನಿಷ್ಠ ಅಂದರೆ ಐದು ವರ್ಷ ಹಳೆಯದಾಗಿರಬೇಕು.


ಆನ್ಲೈನ್ ಕ್ಲೇಮ್ ಗಾಗಿ ನಿಮ್ಮ ಬಳಿ ಈ ಐದು ದಾಖಲೆಗಳಿರಬೇಕು
ಪಿಎಫ್ ಖಾತೆದಾರರು ಆನ್‌ಲೈನ್ ಕ್ಲೈಮ್‌ಗಾಗಿ ಐದು ಪ್ರಮುಖ ವಿಷಯಗಳನ್ನು ಹೊಂದಿರಬೇಕು, ಏಕೆಂದರೆ ಅವುಗಳಿಲ್ಲದೆ ಕ್ಲೈಮ್ ಪ್ರಕ್ರಿಯೆಯನ್ನು ನಡೆಸಲಾಗುವುದಿಲ್ಲ. ಖಾತೆದಾರನು ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಅನ್ನು ಸಕ್ರಿಯಗೊಳಿಸಬೇಕು. ಇದಲ್ಲದೆ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಮತ್ತು ಐಎಫ್‌ಎಸ್‌ಸಿ ಕೋಡ್‌ನೊಂದಿಗೆ ಬ್ಯಾಂಕ್ ವಿವರಗಳನ್ನು ಸಹ ಲಿಂಕ್ ಮಾಡಬೇಕು. ಇದರ ನಂತರ ನೀವು ಆನ್‌ಲೈನ್ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು.


ಸರ್ಕಾರ ಹಣ ಹಿಂಪಡೆಯಲು ಈಗಾಗಲೇ ಅನುಮತಿ ನೀಡಿದೆ
ಸದ್ಯ ಕೊರೊನಾವೈರಸ್ ಹಿನ್ನೆಲೆ, ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇಪಿಎಫ್‌ಒ ವೆಬ್‌ಸೈಟ್‌ನ ಹೊರತಾಗಿ, ಈ ಸೌಲಭ್ಯವು ಉಮಾಂಗ್ ಅಪ್ಲಿಕೇಶನ್‌ನಲ್ಲಿಯೂ ನೀಡಲಾಗಿದೆ. ಈ ಸಂಕಷ್ಟದ ಸಮಯದಲ್ಲಿ ಖಾತೆದಾರರು ತಮ್ಮ ಅಗತ್ಯತೆಗಳ ಅನುಸಾರ ಹಣವನ್ನು ಹಿಂಪಡೆಯಬಹುದಾಗಿದೆ.