45 ವರ್ಷಗಳಲ್ಲಿಯೇ ನಿರುದ್ಯೋಗ ಪ್ರಮಾಣ ಅಧಿಕ ಎಂದು ಒಪ್ಪಿಗೊಂಡ ಕೇಂದ್ರ..!
ನಿರುದ್ಯೋಗ ಪ್ರಮಾಣವು 2017-18 ಹಣಕಾಸು ವರ್ಷದಲ್ಲಿ 6.1% ಕ್ಕೆ ಏರಿದೆ ಎಂದು ಅಂಕಿ ಅಂಶಗಳ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದೇ ಅಂಕಿ ಅಂಶ ಜನವರಿಯಲ್ಲಿ ಪತ್ರಿಕೆಯೊಂದಕ್ಕೆ ಸೋರಿಕೆಯಾಗಿತ್ತು. ಆದರೆ ಆಗ ಕೇಂದ್ರ ಸರ್ಕಾರವು ಅಂಕಿ ಅಂಶವನ್ನು ಅಲ್ಲಗಳೆದಿತ್ತು. ಈಗ 1972-73 ರ ನಂತರ ನಿರುದ್ಯೋಗವು 45 ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.
ನವದೆಹಲಿ: ನಿರುದ್ಯೋಗ ಪ್ರಮಾಣವು 2017-18 ಹಣಕಾಸು ವರ್ಷದಲ್ಲಿ 6.1% ಕ್ಕೆ ಏರಿದೆ ಎಂದು ಅಂಕಿ ಅಂಶಗಳ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದೇ ಅಂಕಿ ಅಂಶ ಜನವರಿಯಲ್ಲಿ ಪತ್ರಿಕೆಯೊಂದಕ್ಕೆ ಸೋರಿಕೆಯಾಗಿತ್ತು. ಆದರೆ ಆಗ ಕೇಂದ್ರ ಸರ್ಕಾರವು ಅಂಕಿ ಅಂಶವನ್ನು ಅಲ್ಲಗಳೆದಿತ್ತು. ಈಗ 1972-73 ರ ನಂತರ ನಿರುದ್ಯೋಗವು 45 ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.
ಇನ್ನೊಂದೆಡೆಗೆ ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಭಾರತದ ಆರ್ಥಿಕ ಬೆಳವಣಿಗೆ ದರವು ಜನವರಿ-ಮಾರ್ಚ್ 2018-19ರಲ್ಲಿ ರಲ್ಲಿ 5.8 ರಷ್ಟು ಇಳಿಮುಖವಾಗುವುದರ ಮೂಲಕ ಕಳೆದ ಐದು ವರ್ಷಗಳಲ್ಲಿ ಅತಿ ಕನಿಷ್ಠ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಕೇಂದ್ರೀಯ ಸಂಖ್ಯಾಶಾಸ್ತ್ರ ಕಚೇರಿ (ಸಿ.ಎಸ್.ಓ) ಪ್ರಕಾರ, 2018-19 ಆರ್ಥಿಕ ವರ್ಷದಲ್ಲಿ ಒಟ್ಟಾರೆ ದೇಶೀಯ ಉತ್ಪಾದನೆಯ ಬೆಳವಣಿಗೆಯು ಹಿಂದಿನ ಆರ್ಥಿಕ ವರ್ಷದಲ್ಲಿ ಶೇ 7.2 ಕ್ಕಿಂತ ಕಡಿಮೆಯಾಗಿದೆ. 2013-15ರಲ್ಲಿ ಜಿಡಿಪಿ ಬೆಳವಣಿಗೆಯು ನಿಧಾನವಾಗಿದ್ದು. ಈ ಹಿಂದಿನ ಅತಿ ಕನಿಷ್ಠ ಮಟ್ಟ ಶೇ 6.4 ರಷ್ಟು 2013-14ರಲ್ಲಿತ್ತು ಎಂದು ವರದಿ ತಿಳಿಸಿದೆ.
ಕಾರ್ಮಿಕ ಸಚಿವಾಲಯದ ಪ್ರಕಾರ ನಗರದ ಎಲ್ಲಾ ಉದ್ಯೋಗಶೀಲ ಯುವಕರಲ್ಲಿ 7.8 ರಷ್ಟು ಜನರು ನಿರುದ್ಯೋಗರಾಗಿದ್ದಾರೆ ಮತ್ತು ಗ್ರಾಮೀಣ ಭಾಗದಲ್ಲಿ ಇದರ ಪ್ರಮಾಣ ಶೇಕಡ 5.3 ರಷ್ಟು ಹೊಂದಿದೆ. ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡಾ 6.2 ರಷ್ಟಿದ್ದರೆ, ಮಹಿಳೆಯರಲ್ಲಿ 5.7 ಶೇ. ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.