ಬಿಹಾರದಲ್ಲಿ ಆರ್ಜೆಡಿ ಅಭ್ಯರ್ಥಿ ಬಿಟ್ಟು ಸಿಂಗ್ ಸಹೋದರನ ಬರ್ಬರ ಹತ್ಯೆ
ಅಪರಿಚಿತ ಹಲ್ಲೆಕೋರರು ಬಿಹಾರದ ಪೂರ್ಣಿಯಾ ಜಿಲ್ಲೆಯ ದಮದಾ ಅಸೆಂಬ್ಲಿ ಕ್ಷೇತ್ರದಿಂದ ಮತದಾನದ ಸ್ಪರ್ಧೆಯಲ್ಲಿರುವ ಆರ್ಜೆಡಿ ಅಭ್ಯರ್ಥಿ ಬಿಟ್ಟು ಸಿಂಗ್ ಅವರ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದಾರೆ.
ನವದೆಹಲಿ: ಅಪರಿಚಿತ ಹಲ್ಲೆಕೋರರು ಬಿಹಾರದ ಪೂರ್ಣಿಯಾ ಜಿಲ್ಲೆಯ ದಮದಾ ಅಸೆಂಬ್ಲಿ ಕ್ಷೇತ್ರದಿಂದ ಮತದಾನದ ಸ್ಪರ್ಧೆಯಲ್ಲಿರುವ ಆರ್ಜೆಡಿ ಅಭ್ಯರ್ಥಿ ಬಿಟ್ಟು ಸಿಂಗ್ ಅವರ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಬೆನಿ ಸಿಂಗ್ ಅವರು ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದಲ್ಲಿ ಹಗಲಿನಲ್ಲಿ ಮತದಾನ ನಡೆಯುತ್ತಿರುವಾಗ ಕ್ಷೇತ್ರದ ಬೂತ್‌ನಿಂದ ಬೂತ್‌ಗೆ ತೆರಳುತ್ತಿದ್ದರು. ಅವರು ಸರ್ಸಿ ಗ್ರಾಮದ ಮತದಾನ ಕೇಂದ್ರದಿಂದ ಹೊರಬರುತ್ತಿದ್ದಂತೆ, ಮೂರರಿಂದ ನಾಲ್ಕು ಹಲ್ಲೆಕೋರರು ಅವನ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದರು ಆಗ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.
ಬಿಹಾರ ವಿಧಾನಸಭಾ ಚುನಾವಣೆ – ಮತದಾನ ಆರಂಭ - ಔರಂಗಾಬಾದ್ ನಲ್ಲಿ ಐಇಡಿ ವಶ
ತಕ್ಷಣವೇ ಬೆನಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈಗ ಹತ್ಯೆಗೈದವರನ್ನು ಬಂದಿಸಲು ತಂಡವನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಪುರ್ನಿಯ ಅಧಿಕಾರಿಗಳು ಬಿಟ್ಟು ಸಿಂಗ್‌ಗೆ ಕ್ರಿಮಿನಲ್ ದಾಖಲೆ ಇದೆ ಮತ್ತು ಅವರ ಕಿರಿಯ ಸಹೋದರ ಕೂಡ ಕೆಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಈ ಘಟನೆಯ ನಂತರ ಟ್ವೀಟ್ ಮಾಡಿರುವ ಆರ್ ಜೆಡಿ ನಾಯಕ ಮನೋಜ್ ಜಾ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ರಾಕ್ಷಸ ರಾಜ್ಯ ಇರುವುದು ಕಣ್ಣಿಗೆ ರಾಚುತ್ತಿದೆ ಎಂದು ಹೇಳಿದರು.